ವಚನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿ: ಬಂಗಾರಶೆಟ್ಟರ್

0
33
loading...

ಕೊಪ್ಪಳ ಡಿ 30 : ವಚನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ನಗರದ  ಬಸವೇಶ್ವರ ಟ್ರಸ್ಟ್ನ ಮಾಸಿಕ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶರಣೆ ಶ್ರೀಮತಿ ಕೀರ್ತಿ ವಿನೋದಾ ಬಂಗಾರ ಶೆಟ್ಟರ್ ಅಭಿಪ್ರಾಯ ಪಟ್ಟರು.

12 ನೇ ಶತಮಾನದಲ್ಲಿ ವ್ಯಕ್ತಿಯನ್ನು ಜಾತಿಯಿಂದ ಪ್ರೀತಿಸಿದೆ ಕಾಯಕದಿಂದ ಪ್ರೀತಿಸಬೇಕು. ಮತ್ತು ಜಾತಿಗಳು ಮಾನವ ನಿರ್ಮಿತವಾದವು ವಿನಾಹ ದೇವ ನಿರ್ಮಿತವಲ್ಲ ಎಂದು ಬಸವಾದಿ ಶರಣರು ಜಾತಿ, ವರ್ಣ, ವರ್ಗ ರಹಿತ ಸಮಾಜ ನಿರ್ಮಿಸಿದವರು ಅಂತಹ ಸಮಾಜ ನಿರ್ಮಿಸಲು ವಚನಗಳು ಪ್ರಭಾವ ಕಾರಣವಾಗಿತ್ತು. ಆದ್ದರಿಂದ ತಮ್ಮ ಪೀಳಿಗೆಗೆ ವಚನಗಳು ಕಲಿಸುವ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಶ್ರೀಮತಿ ಲಲೀತಾ ಅಂದಾನಪ್ಪ ಅಗಡಿ ಮಾತನಾಡಿ ಬಸವಣ್ಣನವರು ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ ಶ್ರೇಷ್ಠ ಪ್ರವಾದಿ ಎಂದರು. ಶರಣಮ್ಮ ಕಲ್ಮಂಗಿ ನಿರೂಪಿಸಿದರು. ಮಂಜುಳಾ ಮುದಗಲ್ ಸ್ವಾಗತಿಸಿದರು. ರಾಜೆಶ ಸಸಿಮಠ ವಂದಿಸಿದರು.

 

 

loading...

LEAVE A REPLY

Please enter your comment!
Please enter your name here