ವಿರೂಪಾಕ್ಷ ದೇವಾಲಯ ಬಳಿ ಮಂಟಪ ಕುಸಿತ

0
28
loading...

ಹೊಸಪೇಟೆ, ಡಿ. 21: ಹಂಪಿಯಲ್ಲಿ ವಿರೂಪಾಕ್ಷ ಬೀದಿಯಲ್ಲಿ ವಿರೂಪಾಕ್ಷ ದೇವಾಲಯದ ಅನತಿ ದೂರದಲ್ಲಿ ಎರಡಂತಸ್ತಿನ ಮಂಟಪವೊಂದು ಶುಕ್ರವಾರ ಕುಸಿದು ಬಿದ್ದಿದೆ.

ಮಂಟಪಗಳ ಸಂರಕ್ಷಣೆ ಕಾರ್ಯವನ್ನು ಕೈಗೊಂಡಿರುವಾಗಲೇ ಈ ದುರ್ಘಟನೆ ನಡೆದಿದೆ. ಭಾರತೀಯ ಪುರಾತತ್ವ ಇಲಾಖೆಯ ನಿರ್ಲ್ಯಕ್ಷವೇ ಈ ದುರ್ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ಜೆಸಿಬಿ ಯಂತ್ರ ಬಳಿಸಿ ಸಂರಕ್ಷಣೆ ಕಾರ್ಯ ಕೈಗೊಳ್ಳಲಾಗಿದೆ. ಪುರಾತತ್ವ ಸ್ಮಾರಕಗಳಿರುವಲ್ಲಿ ಜೆಸಿಬಿ ಯಂತ್ರ ಬಳಸಬಾರದು ಎಂದಿದ್ದರೂ ಈ ಯಂತ್ರ ಬಳಸುವ ಮೂಲಕ ಇಂತಹ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ನಿರ್ಮತಿ ಕೇಂದ್ರವು ಇದರಲ್ಲಿ ಭಾಗಿಯಾಗಿದೆ ಎಂದು ತಿಳಿದು ಬಂದಿದೆ.

 

loading...

LEAVE A REPLY

Please enter your comment!
Please enter your name here