ಶಂಕರಲಿಂಗೇಗೌಡರಿಗೆ ಶರತ್ತುಬದ್ಧ ಜಾಮೀನು

0
9
loading...

ಬೆಂಗಳೂರು,ಡಿ.28-ಜಿ ಕೆಟಗರಿ0ುಡಿ ಪಡೆದ ನಿವೇಶನವನ್ನುಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದ ಶಾಸಕ ಶಂಕರಲಿಂಗೇಗೌಡ ಅವರಿಗೆ ಲೋಕಾ0ುುಕ್ತ ನ್ಯಾಯಾಲ0ು ಶರತ್ತುಬದ್ಧ ಜಾಮೀನು ನೀಡಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಕೋಟದಡಿ ನಿವೇಶನ ಪಡೆದಿದ್ದ ಶಂಕರಲಿಂಗೇಗೌಡ ಅವರು ಕಾನೂನು ಬಾಹಿರವಾಗಿ ಮಾಡಿದ್ದಾರೆಂದು ಕುಮಾರ್ ಎಂಬುವರು ಲೋಕಾ0ುುಕ್ತ ನ್ಯಾಯಾಲ0ುಕ್ಕೆ ಖಾಸಗಿ ದೂರು ನೀಡಿದ್ದರು.

ಸಮನ್ಸ್ ಜಾರಿಯಾದ ಹಿನ್ನೆಲೆ0ುಲ್ಲಿ ನ್ಯಾಯಾಲ0ುಕ್ಕೆ ಹಾಜರಾಗಿದ್ದ ಶಂಕರಲಿಂಗೇಗೌಡ ಅವರಿಗೆ ಲೋಕಾ0ುುಕ್ತ ವಿಶೇಷ ನ್ಯಾಯಾಲ0ುದ ನ್ಯಾಯಾಧೀಶ ಎನ್. ಕೆ.ಸುಧೀಂದ್ರರಾವ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ಒಂದು ಲಕ್ಷ ಬಾಂಡ್, ಇಬ್ಬರು ಶೂರಿಟಿ, ಪಾರ್ಸ್ಪೋರ್ಟ್ ಮುಟ್ಟುಗೋಲು, ವಿದೇಶಕ್ಕೆ ತೆರಳದಿರುವುದು, ವಿಚಾರಣೆಗೆ ಸಹಕಾರ ನೀಡುವಂತೆ ಷರತ್ತುಬದ್ಧ ಮಂಜೂರು ಮಾಡಿದರು.

ಬೆಂಗಳೂರಿನಲ್ಲಿ ಎಂಟು ಲಕ್ಷ ಬೆಲೆಬಾಳುವ ನಿವೇಶನವನ್ನು ಖರೀದಿಸಿದ್ದ ಶಂಕರಲಿಂಗೇಗೌಡರು ಖಾಸಗಿ ವ್ಯಕ್ತಿಯೊಬ್ಬರಿಗೆ 25 ಲಕ್ಷಕ್ಕೆ ಮಾರಾಟ ಮಾಡಿದ್ದರೆಂದು ದೂರು ನೀಡಲಾಗಿತ್ತು.

 

loading...

LEAVE A REPLY

Please enter your comment!
Please enter your name here