ಶಿಕಳಿಸಬ್ಯಾಡವ್ವ ಕೆಲಸಕ್ಕಷಿ ನನ್ನ ಬೀದಿ ನಾಟಕ ಪ್ರದರ್ಶನ ಯಶಸ್ವಿ

0
25
loading...

ಕೊಪ್ಪಳ,ಡಿ.24: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ರಿ ಕೊಪ್ಪಳ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ಆಶ್ರಯದಲ್ಲಿ ಚೇತನ್ ಸಾಂಸ್ಕ್ಕತಿಕ ಕಲಾ ತಂಡ ಓಜನಹಳ್ಳಿ ಇವರಿಂದ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿ ಆಯ್ದ ಗ್ರಾಮ ಪಂಚಾಯತಿಗಳಾದ ಕೊಪ್ಪಳ ತಾ.ಪಂ. ನಗರ, ಗಿಣಿಗೇರಾ, ಹುಲಿಗಿ, ಕುಣಿಕೇರಾ, ಇರಕಲ್ಗಡಾ, ಗಂಗಾವತಿ ತಾಲೂಕ ಪಂಚಾಯತಿ ನಗರ, ಕಾರಟಗಿ, ಸಿದ್ದಾಪುರ, ವೆಂಕಟಗಿರಿ, ಕನಕಗಿರಿಯಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಲಿಕಳಿಸಬ್ಯಾಡವ್ವ ಕೆಲಸಕ್ಕ ನನ್ನಳಿ ಎಂಬ ಬೀದಿ ನಾಟಕ ಕಾರ್ಯಕ್ರಮಗಳನ್ನು ದಿ. 17.12.2012ರಿಂದ 26.12.2012ರ ವರೆಗೆ ಪ್ರದರ್ಶನ ನೀಡಲಾಯಿತು.

ಶಿವಮೂರ್ತಿ ಮೇಟಿ ನಿರ್ದೇಶನದಲ್ಲಿ ಕಲಾವಿದರಾಗಿ ಶರಣಪ್ಪ ಮೇಟಿ, ಕರೀಂಸಾಬ ನದಾಫ್, ನೀಲಪ್ಪ ಮೋಟಿ, ಮಹಮದ್ ಟೇಲರ್, ಬಾಲರಾಜ ಮೋಟಿ, ಅಂಬುಜಾ ಸಿಂಧನೂರ, ಸಿದ್ದಪ್ ಕಾಟರಳ್ಳಿ, ರಾಮಣ್ಣ ವಾಲ್ಮೀಕಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾ.ಪಂ. ಅಧ್ಯಕ್ಷರು, ಸರ್ವಸದಸ್ಯರು, ಸಿಬ್ಬಂದಿ ವರ್ಗದವರು, ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಕ್ಷೇತ್ರಾಧಿಕಾರಿ ವೀರಣ್ಣ, ಗ್ರಾಮದ ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿನಡೆಸಲಾಯಿತು.

loading...

LEAVE A REPLY

Please enter your comment!
Please enter your name here