ಸಂಕ್ರಮಣ ಸಾಹಿತ್ಯ ಸ್ಪರ್ಧೆ: ಮಂಜುನಾಥ ಡೊಳ್ಳಿನ್ಗೆ ಬಹುಮಾನ

0
27
loading...

ಕೊಪ್ಪಳ.ಡಿ.24: ಕನ್ನಡದ ಮೌಲಿಕ ಸಾಹಿತ್ಯ ಪತ್ರಿಕೆಯಾಗಿರುವ ಪ್ರೊ.ಚಂಪಾ ಸಂಪಾದಕತ್ವದ `ಸಂಕ್ರಮಣಳಿದ 2012 ನೇ ಸಾಲಿನ ಸಾಹಿತ್ಯ ಸ್ಪರ್ಧೆಗಳಲ್ಲಿ ಕೊಪ್ಪಳದ ಮಂಜುನಾಥ ಡಿ.ಡೊಳ್ಳಿನ ಅವರ `ಹಳದಿ… ನೀಲಿ..ಳಿ ಕವಿತೆಗೆ ಬಹುಮಾನ ದೊರೆತಿದೆ.

ಸಂಕ್ರಮಣ ದ್ವೈಮಾಸಿಕ ಪತ್ರಿಕೆಯು ಪ್ರತಿ ವರ್ಷ ಕಾವ್ಯ,ಸಣ್ಣಕತೆ,ಲಲಿತ ಪ್ರಬಂಧ ಹಾಗೂ ಹನಿಗವನ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬರುತ್ತಿದೆ.ನಿರಂತರವಾಗಿ 47ವರ್ಷಗಳಿಂದ ಪ್ರಕಟಣೆಗೊಳ್ಳುತ್ತಿರುವ ಸಂಕ್ರಮಣ ಪತ್ರಿಕೆಯು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಮಹತ್ವ ಹೊಂದಿದೆ.

ಕಾವ್ಯ ವಿಭಾಗದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಮಂಜುನಾಥ ಡಿ.ಡೊಳ್ಳಿನ ಸದ್ಯ ಹೊಸಪೇಟೆ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇದೇ ಸ್ಪರ್ಧೆಯ ಲಲಿತ ಪ್ರಬಂಧ ವಿಭಾಗದಲ್ಲಿ ಮೂಲತ: ಯಲಬುರ್ಗಾ ಪಟ್ಟಣದವರಾಗಿದ್ದು ಸದ್ಯ ಬೇಂಗಳೂರಿನ ಭಾಷಾಂತರ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕರಾಗಿರುವ ಹೆಸರಾಂತ ಲಲಿತ ಪ್ರಬಂಧಕಾರ ಈರಪ್ಪ ಎಂ.ಕಂಬಳಿಯವರ `ಹೆಸರಿಡುವದುಳಿಎಂಬ ಲಲಿತ ಪ್ರಬಂಧಕ್ಕೂ ಬಹುಮಾನ ಲಭಿಸಿದೆ.

 

loading...

LEAVE A REPLY

Please enter your comment!
Please enter your name here