ಸಮಾಜದ ಅಭಿವೃದ್ದಿಗೆ ಶಿಕ್ಷಣ ಅವಶ್ಯ: ಕೆ.ರಾಘವೇಂದ್ರ ಹಿಟ್ನಾಳ

0
21
loading...

ಕೊಪ್ಪಳ ಡಿ 29: ಪ್ರತಿಯೊಬ್ಬರು ಶೈಕ್ಷಣಿಕವಾಗಿ ಅಭಿವೃದ್ದಿಯಾದಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಜಿ.ಪಂ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಶನಿವಾರದಂದು ನಗರದ ಸಾಹಿತ್ಯ ಭವನದಲ್ಲಿ ಮುಸ್ಲಿಂ ಸಂಘಟನೆಗಳ ಮಹಾಸಂಸ್ಥೆಯ ಜಿಲ್ಲಾ ಸಂಘದ ಉದ್ಘಾಟನೆ ನೇರವೇರಿಸಿ ಮಾತನಾಡಿದರು ಸಂಘ ಸಂಸ್ಥೆಗಳನ್ನು ಕಟ್ಟುವುದು ಸುಲಭ ಅದನ್ನು ಮುನ್ನೆಡಿಸುವುದು ಕಷ್ಟ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಂಘದಿಂದ ಸಾಧ್ಯ, ನಮ್ಮ ಸಮಾಜವನ್ನು ನಾವೇ ತಿದ್ದಿಕೊಳ್ಳಬೇಕು, ಸಮಾಜದಲ್ಲಿ ಹಿಂದುಳಿದವರ ನೆರವಿಗೆ ಸಂಘಗಳು ಶ್ರಮಿಸಬೇಕು, ಅಂದಾಗ ಸಂಘದ ಶ್ರಮ ಸಾರ್ಥಕವಾಗುತ್ತದೆ, ಬಡವರಿಗೆ ಸರಕಾರದ ಸೌಲಭ್ಯದ ಅರಿವು ಮೂಡಿಸಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಸಂಘ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್.ಆಸೀಫ್ ಅಲಿ ವಹಿಸಿ ಮಾತನಾಡಿ ಸಂಘ-ಸಂಸ್ಥೆಗಳನ್ನು ಛಲದಿಂದ ಮುನ್ನೇಡೆಸಿ ಸಾಮಾಜಿಕ ಸೇವೆಯಲ್ಲಿ ತೊಡಗಬೇಕು, ಸಂಘದ ಧ್ಯೇಯಗಳು ಬೇಗನೆ ಈಡೇರಲಿ ಮನುಷ್ಯನಲ್ಲಿ ಅಭಿಮಾನ ಮುಖ್ಯ ಎಂದ ಅವರು ಸಂಘ ಆರಂಭಗೊಂಡಿರುವುದು ಸಂತಸ, ಸಮಾಜದ ಬಡವರಿಗೆ-ಹಿಂದುಳಿದವರಿಗೆ ಸರಕಾರದ ಸೌಲಭ್ಯಗಳು ತಲುಪುವ ಕಾರ್ಯ ಸಂಘದಿಂದ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೌಂಡಿದ್ದ ಜೆಡಿಎಸ್ ಮುಖಂಡ ಸುರೇಶ ಭೂಮರಡ್ಡಿ ಮಾತನಾಡಿ ಸಮಾಜದ ಬಡವರಿಗೆ ಈ ಸಂಘದ ಮೂಲಕ ಸಹಾಯ-ಸಹಕಾರವಾಗಬೇಕು, ಅಂದಾಗ ಸಂಘದ ಶ್ರಮದ ಸಾರ್ಥಕವಾಗುತ್ತದೆ ಎಂದರು.

ವೇದಿಕೆ ಮೇಲೆ ಜಿಲ್ಲಾ ವಕ್ಪ್ ಕಮೀಟಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ, ನಗರಸಭೆ ಸದಸ್ಯರಾದ ಜಾಕೀರಹುಸೇನ ಕಿಲ್ಲೇದಾರ, ಎಂ.ಕಾಟನ್ ಪಾಷ, ಮಾನ್ವಿ ಪಾಷ, ಮಹೆಬೂಬ್ ಹುಸೇನ್ ನಾಲಬಂದ್, ಸಮಾಜದ ಮುಖಂಡರಾದ ಹನೀಫ್ ಸಾಬ ಅರಗಂಜಿ, ಅಫಸರಸಾಬ ಅತ್ತಾರ, ರಾಜ್ಯ ಉಪಾಧ್ಯಕ್ಷ ಖಲಂದರ್ ಪಾನವಾಲೆ, ಜಿಲ್ಲಾಧ್ಯಕ್ಷ ಸೈಯದ್ ಖಾದ್ರಿ, ನಜೀರ್ ಅಹ್ಮದ್, ಜಾಫರ್ ಸಾದೀಕ್, ಮತ್ತೀತರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here