ಸಾಲ ಮಾಡಿದ ರೈತರಿಗೆ ಶಾಸಕರಿಂದ ಅಭಯಹಸ್ತ

0
13
loading...

ಕುಷ್ಟಗಿ.ಡಿ30 : ರೈತರ ನಾಡಾಗಿರುವ ನಮ್ಮ ಭಾಗದ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯಗೆ ಶರಣಾಗದಿರಿ.  ಸಾಲ ಕೇಳಲು ಬಂದವರನ್ನು ಹೊಡೆದು ಓಡಿಸಿ ನಾವಿದ್ದೇವೆ ಸಾಲ ತೀರಿಸುವ ಶಕ್ತಿಯನ್ನು ರೂಡಿಸಿಕೊಂಡು ಮರುಪಾವತಿ ಮಾಡಿರಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ರೈತರಿಗೆ ಅಭಯಹಸ್ತ ನೀಡಿದರು.  ಸ್ಥಳೀಯ ಶೀತಿಲ ಸರಪಳಿ ಘಟಕ (ಕೋಲ್ಡ್ ಸ್ಟೌರೇಜ್) ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ತಾಲೂಕ ಕೃಷಿ ಮಾಹಿತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.

ರೈತ ಕೃಷಿ ಬೆಳೆಗೆ ಮಾಡಿಕೊಂಡಿರುವ ಸಾಲವನ್ನು ಬ್ಯಾಂಕುಗಳಿಗೆ ಪಾವತಿಸಿದಂತೆ, ಹೇಳಲಾರೆ ಆದರೆ ತಾಲೂಕ ಬರಸ್ಥಿತಿಯಲ್ಲಿ ನೆರಳುತ್ತಿದ್ದು,   ಈ ಸ್ಥಿತಿಯಲ್ಲಿ ರೈತರು ಮಾಡಿದ ಹಣವನ್ನು ಮರು ಪಾವತಿ ಮಾಡಲು ಕಾಲಾವಕಾಶ ಕೊಡಬೇಕೆಂದು ಬ್ಯಾಂಕುಗಳಿಗೆ ಮನವಿ ಮಾಡಿಕೊಂಡರು.

ಬರಗಾಲದಿಂದ ಆಹಾರ ಉತ್ಪಾಧನೆಯ ಮೇಲೆ ಪರಿಣಾಮ ಬೀರುವದಿಲ್ಲ.  ಆದರೆ ಅಂತರ್ಜಲ ಕಳೆದ ಹಿಂಗಾರಿನಲ್ಲಿ ನೀರು ಜಮೀನಿಗೆ ಬಿಟ್ಟು ಹರಿದಿಲ್ಲ.  ಹೀಗಾಗಿ ಎಲ್ಲಾ ಗ್ರಾಮಗಳಲ್ಲಿ ಅಂತರ್ಜಲದ ತೀರ್ವತೆಯಾಗುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸಲಿದೆ.  ಎಂದು ಆತಂಕ ವ್ಯಕ್ತಪಡಿಸಿದರು.  ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪದ್ಮನಯನ್ ನಾಯಕ ಮಾತನಾಡಿದರು.  ತಾ.ಪಂ. ಅಧ್ಯಕ್ಷ ತಳ್ಳಿಕೇರಿ ಜಿ.ಪಂ. ಸದಸ್ಯ ವಿದ್ಯಾಶ್ರೀ ಗಜೇಂದ್ರಗಡ, ಹನಮಕ್ಕ ಚೌಡ್ಕಿ, ತಾ.ಪಂ. ಉಪಾಧ್ಯಕ್ಷ ಶರಣಮ್ಮ ಅಂಗಡಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮೀನುದ್ದೀನ್ ಮುಲ್ಲಾ, ಪುರಸಭೆ ಸದಸ್ಯ ಉಮೇಶ ಮಂಗಳೂರು  ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಶಿವಣ್ಣ ಮೋಲಾಲಿಮನೆ, ತಾಲೂಕು ಕೃಷಿ ಅಧ್ಯಕ್ಷೆ ಚಂದಪ್ಪ ತಳವಾರ ಕಾರ್ಯಕ್ರಮದಲ್ಲಿ ಮತ್ತಿತರರು ಇದ್ದರು.

 

loading...

LEAVE A REPLY

Please enter your comment!
Please enter your name here