ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

0
74
loading...

ಘಟಪ್ರಭಾ: ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗೂ ಶುಭೋದಯ ಶ್ರೀನಾಡು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಡಲಗಿ ಪಟ್ಟಣದಲ್ಲಿ ಎರ್ಪಡಿಸಲಾಗಿದ್ದ ಲಿಕರ್ನಾಟಕ ಅಂದು,ಇಂದುಳಿ ವಿಷಯ ಕುರಿತು ಸಾಮಾನ್ಯ ಜ್ಞಾನ ಸ್ಪರ್ದೆಯಲ್ಲಿ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ನಿಜಗುಣ ದೇವರ ವಿದ್ಯಾ ಸಂಸ್ಥೆಯ ಶ್ರೀ ಸಿದ್ಧಲಿಂಗೇಶ್ವರ ಪ್ರಾಥಮಿಕ ಶಾಲೆಯ ಕು.ಸಿದ್ದಾರ್ಥ ಬಸಪ್ಪಾ ಸುಂಕದ ಪ್ರಥಮ ಹಾಗೂ ಕು. ಅಕ್ಷತಾ ಲಕ್ಷ್ಮಣ ವಾಲಿ ದ್ವಿತೀಯ ಸ್ಥಾನ ಪಡೆದ ಪ್ರಯುಕ್ತ ಶ್ರೀಮಠದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಿಜಗುಣ ದೇವರು, ಬೈರನಟ್ಟಿಯ ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು, ಘಟಪ್ರಭಾದ ಮಹಾಂತೇಶ ಶಾಸ್ತ್ತ್ರಿಗಳು, ಶಾಲೆಯ ಪ್ರಧಾನ ಗುರುಮಾತೆ, ಕು.ಸುಕಣ್ಯಾ ಕಂಬಾರ, ಕು.ದಾನಮ್ಮಾ ಪಾಟೀಲ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here