ಹಿರೇಬನ್ನಿಗೋಳ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಬಿ.ಎಸ್.ಆರ್ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

0
27
loading...

ಕುಷ್ಟಗಿ,29: ಬಳ್ಳಾರಿಯಲ್ಲಿ ಬಿ.ಎಸ್.ಆರ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ  ಹಿರೇಬನ್ನಿಗೋಳ ಗ್ರಾಮ ಪಂಚಾಯಿಯ ಅಧ್ಯಕ್ಷರು ಶರಣಗೌಡ ಗೌಡ್ರು ಬಿಸನಾಳ ಹಾಗೂ 9 ಸದಸ್ಯರಾದ ದಾನನಗೌಡ, ಲಕ್ಷ್ಮಣ ಬುಕ್ಕನಟ್ಟಿ, ವನ್ನನಗೌಡ, ಈರಪ್ಪ ಪೂಜಾರಿ ಗಿರಿಯಪ್ಪ ಮಲ್ಲಣ್ಣ ಯಲಬುರ್ತಿ ಹಾಗೂ ಹಿರೇಬನ್ನಿಗೋಳ ತಿಮ್ಮಣ್ಣ, ಕನಕೊಪ್ಪ ರಾಚಪ್ಪ ಅಂಗಡಿ, ಪರಶುರಾಮ ಮೇಟಿ, ಇವರು ಸ್ವಾಭಿಮಾನಿ ಶ್ರೀರಾಮುಲು ಸೋಮಶೇಖರೆಡ್ಡಿ ಗೋನಾಳ ರಾಜಶೇಖರಗೌಡ ಅವರ ನೆತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು ಶ್ರೀರಾಮುಲು ಅವರು ಹೂವಿನಹಾರ ಪಕ್ಷದ ಶಾಲುವೊದಿಸಿ ಪಕ್ಷಕ್ಕೆ ಸ್ವಾಗತಿಸಿದರು,

ಅಧ್ಯಕ್ಷರು ಹಾಗೂ ಉಳಿದ ಸದಸ್ಯರಿಗೆ ಸ್ವಾಭಿಮಾನಿ ಶ್ರೀ ರಾಮುಲು ಹಾಗೂ ಸೋಮಶೇಖರರೆಡ್ಡಿ ಅವರು ಅಧ್ಯಕ್ಷರನ್ನು ಹಾಗೂ ಸದಸ್ಯರನ್ನ ಅಭಿನಂದಿಸಿದರು. ಶ್ರೀರಾಮುಲು ಅವರು ಮಾತನಾಡುತ್ತ ಕರ್ನಾಟಕದಲ್ಲಿಯೇ ಮಾದರಿಯಾಗಿರುವ ಒಬ್ಬ ಅಂದ ಗ್ರಾಮ ಪಂಚಾಯಿಯ ಸದಸ್ಯ ಅಧ್ಯಕ್ಷರಾಗಿರುವುದು ಹಾಗೂ ಉಳಿದ ಸದಸ್ಯರು ಅವರಿಗೆ ಬೆಂಬಲವಾಗಿ ನಿಂತಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಗ್ರಾಮ ಪಂಚಾಯ್ತಿಯನ್ನ ಅಭಿವೃದ್ದಿ ಮಾಡಬೇಕು ಹಾಗೂ ನಿಮ್ಮ ಭವಷ್ಯ ಉಜ್ಜವಲಗೊಳ್ಳಬೇಕು ಎಲ್ಲರೂ ಸೇರಿ ಬಿ.ಎಸ್.ಆರ್ ಕಾಂಗ್ರೇಸ್ ಪಕ್ಷವನ್ನ ಬೆಂಬಲಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರಣಿಬೂತರಾದ ತಮ್ಮಲ್ಲರಿಗೂ ಧನ್ಯವಾದಗಳೆಂದು ಹೇಳಿದರು.

ಗೋನಾಳ ರಾಜಶೇಖರಗೌಡ ಅವರು ಮಾತನಾಡಿ ಸ್ವಾಭಿಮಾನಿ ಶ್ರೀರಾಮುಲು ಅವರ ಆದರ್ಶದಂತೆ ಬದುಕಬೇಕು ಹಾಗೂ ಬಿ.ಎಸ್.ಆರ್ ಕಾಂಗ್ರೇಸ್ ಪಕ್ಷದ ಸಂಘಟನೆಗೆ ಕುಷ್ಟಗಿ ತಾಲೂಕಿನಲ್ಲಿ ನನಗೆ ಇವರ ಮೂಲಕ ಬಲಬದ್ದಂತಾಗಿದೆ ಎಲ್ಲರೂ ಸೇರಿ ಪಕ್ಷವನ್ನು ಬಲಿಷ್ಠಗೊಳಿಸೋಣ ಎಂದು ತುಂಬ ಹೃದಯದಿಂದ ಅಭಿನಂದಿಸಿದರು.

ಅದೆ ರೀತೀಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶರಣಗೌಡ್ರು ಮಾತನಾಡಿ ಶ್ರೀರಾಮುಲು ಅವರ ರಾಜಕೀಯ ಬದುಕನ್ನು ಆದರ್ಶವಾಗಿ ಇಟ್ಟುಕೊಂಡು ರಾಜಕೀಯ ಸೇರಿ ಗ್ರಾಮ ಪಂಚಾಯ್ತಿಯ ಸದಸ್ಯನಾಗಿ ಹಾಗೂ 9 ಜನ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೆನೆ. ಅದೆ ರೀತಿಯಲ್ಲಿ ಕುಷ್ಟಗಿಯ ಕ್ಷೇತ್ರದ ಪಕ್ಷದ ಮುಖಂಡರಾದ ಗೋನಾಳ ರಾಜಶೇಖರಗೌಡ ಅವರ ಸಂಘಟನೆ ಹಾಗೂ ಪ್ರೀತಿ ಆತ್ಮೀಯತೆಗೆ ಒಪ್ಪಿ ಈ ಪಕ್ಷವನ್ನು ಸೇರಿಕೊಂಡಿದ್ದೆವೆ ಸ್ವಾಭಿಮಾನಿ ಶ್ರೀರಾಮುಲು ಅವರ ಹಾಗೂ ಗೋನಾಳ ರಾಜಶೇಖರಗೌಡರ ಜೋತೆಗೂಡಿ ಪಕ್ಷವನ್ನ ಎಲ್ಲರೂಸೇರಿ ಬಲಿಷ್ಠಪಡಿಸುತ್ತೆವೆ ಎಂದು ಹೇಳುತ್ತ ಹರ್ಷವ್ಯಕ್ತಪಡಿಸಿದರು.

ಈ ಕಾರ್ಯಾಕ್ರಮದಲ್ಲಿ ಬಿ.ಎಸ್.ಆರ್ ಕಾಂಗ್ರೇಸ್ ಕುಷ್ಟಗಿ ತಾಲೂಕ ಅಧ್ಯಕ್ಷರದ ನಾಗಪ್ಪ ಸೂಡಿ ಗೋನಾಳ ನಾಗರಾಜ ಹಲವಾರು ಮುಖಂಡರು ಭಾಗಿಯಾಗಿದ್ದರು.

 

loading...

LEAVE A REPLY

Please enter your comment!
Please enter your name here