ಹುಕ್ಕೇರಿಯಲ್ಲಿ ಬೆಳಗಾವಿ ಜಿಲ್ಲಾ ಕುರುಬರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ

0
31
loading...

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 31 : ಜಿಲ್ಲಾ ಕುರುಬರ ಸಂಘ ಹಾಗೂ ಭಕ್ತ ಕನಕದಾಸ ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ದಿನಾಂಕ 4 ಜನೇವರಿಯಂದು ಮುಂಜಾನೆ 11 ಘಂಟೆಗೆ ಶ್ರೀನಗರ ಮಾಳಮಾರುತಿ ಬಡಾವಣೆಯ ಮಹಾನಗರ ಪಾಲಿಕೆ ಮೈದಾನದಲ್ಲಿ 525 ನೇ ಶ್ರೀ ಭಕ್ತ ಕನಕದಾಸರ ಜಯಂತಿ ಹಾಗೂ ಬೆಳಗಾವಿ ಜಿಲ್ಲಾ ಕುರುಬರ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದ್ದು ಇದರ ಪೂರ್ವ ಸಿದ್ಧತೆಗಾಗಿ ನಗರದ ಡಾ. ಶಿವಾಜಿ ಗೋಟೂರೆ ಆಸ್ಪತ್ರೆಯ ಸಭಾಗೃಹದಲ್ಲಿ ಹಾಲಮತ ಸಮಾಜದ ಮುಖಂಡರಾದ ನಾಗಪ್ಪಣ್ಣ ಕರಜಗಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.

ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಿದ್ದಲಿಂಗ ದಳವಾಯಿಯವರು ಮಾತನಾಡಿ ಹಾಲಮತ ಸಮಾಜದ ಹೆಚ್ಚಿನ ಜನ ಅನಕ್ಷರಾಗಿದ್ದು ಅವರಿಗೆ ಕುರಿಗಳನ್ನು ಕಾಯುವದನ್ನು ಬಿಟ್ಟು ಹೊರಗಿನ ಜ್ಞಾನವಿಲ್ಲ ಹೀಗಾಗಿ ಸಮಾಜದಲ್ಲಿ ಒಡಕು ಹುಟ್ಟುತ್ತಿದ್ದು ಅವರಲ್ಲಿ ನಾವೆಲ್ಲರೂ ಒಂದು ಎಂಬ ತಿಳುವಳಿಕೆ ನೀಡಿ ಎಲ್ಲರನ್ನು ಒಗ್ಗೂಡಿಸಬೇಕಾಗಿದೆ ಕಾರಣ ಸಮಾಜದ ಯುವಕರು ಒಗ್ಗಟ್ಟಿನಿಂದ ಸಮಾಜದಲ್ಲಿ ಸಂಘಟನೆ ಮಾಡಲು ಅವರು ಯುವ ಸಮೂಹಕ್ಕೆ ಕಿವಿಮಾತು ಹೇಳಿದರು. ಸಮಾಜದ ಹೆಚ್ಚಿನ ಜನ ದುಶ್ಚಟಗಳಿಗೆ ಬಲಿಯಾಗುತ್ತಿರುವ ವಿಷಾದವನ್ನು ವ್ಯಕ್ತ ಪಡಿಸಿದ ಅವರು ಯುವಕರು ರಾಜಕೀಯದಿಂದ ದೂರವಿರುವದರಿಂದ ಅವರಿಗೆ ಸಮಾಜ ಮುಖಂಡರು ಪ್ರೌತ್ಸಾಹಿಸಿ ಮಾರ್ಗದರ್ಶನ ನೀಡುವದು ಅವಶ್ಯವಾಗಿದೆಯೆಂದರು.

ಸಮಾಜ ಮುಖಂಡರಾದ ಶಂಕರ ಹೆಗಡೆ ಹಾಗೂ ಜಿ. ಪಂ ಮಾಜಿ ಸದಸ್ಯ ಭೀಮಣ್ಣಾ ರಾಮಗೋನಟ್ಟಿ ಸಭೆಯನ್ನದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ನಾಗಪ್ಪಣ್ಣ ಕರಜಗಿ ಮಾತನಾಡಿ ಎಲ್ಲರನ್ನು ಒಗ್ಗೂಡಿಸಲು ಇಂತಹ ಸಮಾವೇಶಗಳು ಸಹಕಾರಿಯಾಗುತ್ತವೆ. ನಮ್ಮ ನಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾದರೆ ಸರಕಾರದ ಹಲವಾರು ಯೋಜನೆಗಳನ್ನು ಪಡೆಯುವದು ಸಾಧ್ಯ.ವಾಗಿದೆಯೆಂದ ಅವರು ಕುರುಬರ ಸಂಘ ಸಮಾಜದ ಜನರನ್ನು ಮೇಲಕ್ಕೆತ್ತಲು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಗುರಿ ಇಟ್ಟುಕೊಂಡಿದೆ. ಜನೇವರಿ ಮೂರರಂದು ನಡೆಯಲಿರುವ ಸಮಾವೇಶಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಹಾಲಮತ ಸಮಾಜದ ಯುವ ಧುರೀಣ ಭೀಮಸೇನ ಬಾಗಿ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಗೆ ವಂದಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಫ್.ಪೂಜೇರಿ, ಸ್ವಾಗತ ಸಮಿತಿ ಅಧ್ಯಕ್ಷ ವಸಂತ ದಳವಾಯಿ, ಮಡ್ಡೆಪ್ಪಾ ತೋಳಮರಡಿ, ವೆಂಕಪ್ಪಾ ಪೂಜೇರಿ, ಡಾ. ಶಿವಾಜಿ ಗೋಟೂರಿ, ಶಂಕರ ಕ್ವಳ್ಳಿ, ಭೀಮಣ್ಣಾ ಮಲ್ಲಾಡಿಗೋಳ, ಕೆ.ಕೆ.ಬೆಣಚಿನಮರಡಿ, ನ್ಯಾಯವಾದಿ ಬಾಬುರಾವ ಚಂದರಗಿ, ಸುರೇಶ ಗಾವಡಿ, ಆರ್.ಬಿ.ಘಂಟಿ, ಸತ್ಯೆಪ್ಪಾ ಬಾಗೆನ್ನವರ ಹಾಗೂ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಾಗೃತಿ ಸಮಾವೇಶದ ದಿವ್ಯ ಸಾನಿಧ್ಯವನ್ನು ಕಾಗಿನೆಲೆಯ ಜಗದ್ಗುರು ನಿರಂಜನಾನಂದಪುರಿ ಸ್ವಾಮಿಗಳು ವಹಿಸಲಿದ್ದು ವಿರೋಧಿ ಪಕ್ಷ ನಾಯಕ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಚಿವ ಬಾಲಚಂದ್ರ ಜಾರಕಿಹೊಳಿ, ವರ್ತೂರ ಪ್ರಕಾಶ, ಎಚ್.ಎಂ.ರೇವಣ್ಣಾ, ಸಂಸದ ಎಚ್.ವಿಶ್ವನಾಥ, ಸುರೇಶ ಅಂಗಡಿ, ಜೆ.ಡಿ.ಎಸ್ ಉಪನಾಯಕ ಬಂಡೆಪ್ಪಾ ಕಾಶ್ಯಾಪೂರ, ಶಾಸಕ ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಪ್ರಕಾಶ ಹುಕ್ಕೇರಿ, ಕಾಕಾಸಾಹೇಬ ಪಾಟೀಲ, ಫಿರೋಜ ಶೇಠ, ಮಾಜಿ ಸಾಂಸದ ಅಮರಸಿಂಹ ಪಾಟೀಲ, ಕೆ. ವಿರುಪಾಕ್ಷಪ್ಪಾ, ರಮೇಶ ಕುಡಚಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಸಿ.ಎಚ್.ವಿಜಯಕುಮಾರ, ರಘುನಾಥರಾವ ಮಲ್ಕಾಪೂರೆ, ಬಿ.ಎಸ್.ಸುರೇಶ, ಡಾ. ಹುಲಿ ನಾಯ್ಕರ, ಕೆ.ಎಂ.ರಾಮಚಂದ್ರಪ್ಪ, ಲಕ್ಷ್ಮಣರಾವ ಚಿಂಗಳೆ, ಅರವಿಂದ ದಳವಾಯಿ, ಶೀಶೈಲ ದಳವಾಯಿ, ರಾಜೇಂದ್ರ ಅಂಕಲಗಿ ಉಪಸ್ಥಿತರಿರಲಿದ್ದಾರೆ.

ಬೆಂಗಳೂರ ಮಹಾಪೌರ ವೆಂಕಟೇಶಮೂರ್ತಿ, ವಾಲ್ಮೀಕಿ ಪ್ರಶಸ್ತಿ ವಿಜೇತ ಡಾ. ರಾಜೇಂದ್ರ ಸಣ್ಣಕ್ಕಿ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಚಲನ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ, ಮಹಾರಾಷ್ಟ್ತ್ರ ಫೌಂಡೇಷನ್ ಸಮಾಜ ಸೇವಾ ಪ್ರಶಸ್ತಿ ವಿಜೇತ ಶಿವಾಜಿ ಕಾಗನೆಕರ.

loading...

LEAVE A REPLY

Please enter your comment!
Please enter your name here