20 ನೇ ವಾರ್ಡ್: 9 ಲಕ್ಷ ರೂ.ವೆಚ್ಚದ ಚರಂಡಿ ಕಾಮಗಾರಿಗೆ ಚಾಲನೆ

0
20
loading...

ಕೊಪ್ಪಳ ಡಿ 29 : ನಗರದ 20 ನೇ ವಾರ್ಡ್ನ ವಿದ್ಯಾನಗರದ ಬಳಿ ನಗರಸಭೆಯ ಎಸ್.ಎಫ್.ಸಿ ಅನುದಾನದ 9 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ, ವಾರ್ಡ್ ನಗರಸಭೆಯ ಸದಸ್ಯ ಗವಿಸಿದ್ದಪ್ಪ ಮುಂಡರಗಿ ಚಾಲನೆ ನೀಡಿದರು.

ಶನಿವಾರದಂದು ಕಾಮಗಾರಿಗೆ ಪೂಜೆ ಸಲ್ಲಿಸಿ ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿ ಈ ಚರಂಡಿ ಕಾಮಗಾರಿ ಕಳಕಪ್ಪ ಶೆಟ್ಟರ್ ಮನೆಯಿಂದ ಅರೋನ ಮೇಸ್ತ್ತ್ರಿ ಮನೆಯವರೆಗೆ ಇದ್ದು ಕಾಮಗಾರಿಯನ್ನು ಗುತ್ತಿಗೆದಾರರು ತ್ವರಿತವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿದರು.

ನಗರಸಭೆಯ ಸದಸ್ಯ ಗವಿಸಿದ್ದಪ್ಪ ಮುಂಡರಗಿ ಮಾತನಾಡಿ ಈ ಚರಂಡಿ ಕಾಮಗಾರಿ ವಾರ್ಡ್ನ ನಾಗರಿಕರ ಬೇಡಿಕೆಯಾಗಿತ್ತು, ಇಂದು ಈ ಕಾಮಗಾರಿ ಚಾಲನೆ ನೀಡಲಾಗಿದೆ, ವಾರ್ಡ್ನಲ್ಲಿ ರಾಜಕಾಲುವೆಯನ್ನು ನಗರೋತ್ತನ ಅನುದಾನದ ಬಿಡುಗಡೆಗೊಂಡಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು, ಇದೇ ಸಂದರ್ಭದಲ್ಲಿ ವಾರ್ಡ್ನ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಗರಸಭೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಡಾ.ಉಪೇಂದ್ರ, ವಿಷ್ಣು ತೀರ್ಥ ಗುಬ್ಬಿ, ನಗರಸಭೆ ಇಂಜನೀಯರ್ ಶಿಲ್ಪಾ ಮತ್ತೀತರರು ಉಪಸ್ಥಿತರಿದ್ದರು.

 

 

loading...

LEAVE A REPLY

Please enter your comment!
Please enter your name here