ಇಂದು ಭೋವಿ ಸಮಾಜದ ಬೃಹತ್ ಸಂಘಟನಾ ಸಮಾವೇಶ

0
19
loading...

ನವಲಗುಂದ-19,  ಧಾರವಾಡ ಜಿಲ್ಲೆಯ ನವಲಗುಂದ್ನ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಜನವರಿ 20ರಂದು ಭಾನುವಾರ ಮಧ್ಯಾಹ್ನ 1-30 ಗಂಟೆಗೆ ಭೋವಿ ಸಮಾಜದ ಬೃಹತ್ ಸಂಘಟನಾ ಸಮಾವೇಶದಲ್ಲಿ ಗುಲಬರ್ಗಾ ನಗರದ ವಿಟಿಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದ ಖ್ಯಾತ ಶಿಲ್ಪಕಲಾವಿದ ಹಾಗೂ ಬೆಳಗಾವಿಯ ಸುವರ್ಣ ಸೌಧದ ಅಶೋಕಸ್ಥಂಭದ ನಿರ್ಮಾತೃ ವಿಶ್ವೇಶ್ವರಯ್ಯ ಅವರಿಗೆ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸನ್ಮಾನಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೋದ್ದೇಶ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ್ ಭೋವಿ ಅವರು ತಿಳಿಸಿದ್ದಾರೆ.

ಸಾನಿಧ್ಯವನ್ನು ಗವಿಮಠದ ಬಸವಲಿಂಗ ಮಹಾಸ್ವಾಮೀಜಿ ಹಾಗೂ ಅಧ್ಯಕ್ಷತೆಯನ್ನು ಶಿವಮೊಗ್ಗ ಶಾಸಕ ಹಾಗೂ ಸಂಘದ ಗೌರವಾಧ್ಯಕ್ಷ ಕೆ.ಜಿ. ಕುಮಾರಸ್ವಾಮಿಯವರು ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯದ ಸಣ್ಣನೀರಾವರಿ ಮತ್ತು ಕನ್ನಡ ಮತ್ತು ಸಂಸ್ಕ್ಕತಿ ಸಚಿವ ಗೋವಿಂದ್ ಕಾರಜೋಳ್, ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಬಾಲಚಂದ್ರ ಜಾರಕಿಹೊಳಿ, ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ಶಾಸಕ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ್ ಪಾಟಿಲ್ ಮುನೇನಕೊಪ್ಪ, ಅತಿಥಿಗಳಾಗಿ ಸಂಸದರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಆಯನೂರು ಮಂಜುನಾಥ್, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಎನ್. ಮಂಜುನಾಥ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ಬಸವರಾಜ್ ಹೊರಟ್ಟಿ, ಸತೀಶ್ ಲ. ಜಾರಕಿಹೊಳಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಶಾಸಕ ಆನಂದ್ ಚ. ಮಾಮನಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಸಂಸದ ಮಂಜುನಾಥ್ ಕುನ್ನೂರ್, ಮಾಜಿ ಶಾಸಕ ಸಿ.ಎಸ್. ಶಿವಳ್ಳಿ, ಡಾ. ಆರ್.ಬಿ. ಶಿರಿಯಣ್ಣನವರ್, ವಿನಯ್ ಕುಲಕರ್ಣಿ, ವ್ಹಿ.ಜಿ. ನವಲಗುಂದ್, ಎಚ್.ವಿ. ಮಾಡಳ್ಳಿ, ಎನ್.ಎಚ್. ಕೋನರೆಡ್ಡಿ ಅವರು ಆಗಮಿಸುವರು.

ಸನ್ಮಾನಿತರ ಪರಿಚಯಃ ಖ್ಯಾತ ಲೋಹ ಕಲಾವಿದ ವಿಶ್ವೇಶ್ವರಯ್ಯ ಟಿ.ಎನ್. ಅವರು ಬೆಳಗಾವಿ ಸುವರ್ಣ ಸೌಧದ ಅಶೋಕ ಸ್ಥಂಭ ನಿರ್ಮಾಣ ಮಾಡಿದ್ದಲ್ಲದೇ, ಬೆಳಗಾವಿಯ ಮಹಾನಗರ ಪಾಲಿಕೆಯ ಮೇಲಿನ ಅಶೋಕ್ ವೃತ್ತದಲ್ಲಿನ ಅಶೋಕ್ ಸ್ಥಂಬ ಸಹ ನಿರ್ಮಾಣವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ವಿಶ್ವೇಶ್ವರಯ್ಯ ಅವರು ಗುಲಬರ್ಗಾದಲ್ಲಿ ಜನವರಿ 23ರಂದು ಮುಖ್ಯಮಂತ್ರಿಗಳಿಂದ ಅನಾವರಣಗೊಳ್ಳಲಿರುವ ಸ್ವಾಮಿ ವಿವೇಕಾನಂದರ 11 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಸಹ ಈಗಾಗಲೇ ತಯಾರಿಸಿದ್ದಾರೆ. ಅದರಂತೆ ಚಿತ್ತಾಪೂರ್ ತಾಲೂಕಿನ ವಾಡಿಯಲ್ಲಿ ಜಗಜ್ಯೌತಿ ಅಶ್ವಾರೂಡ ಬಸವೇಶ್ವರರ ಪ್ರತಿಮೆ, ಗುಲಬರ್ಗಾದ ಜಗತ್ ವೃತ್ತದಲ್ಲಿ ಮಹಾತ್ಮಾ ಗೌತಮ್ ಬುದ್ಧರ 11 ಅಡಿ ಕಂಚಿನ ಪುತ್ಥಳಿ ಸಹ ನಿರ್ಮಿಸಿದ್ದಾರೆ. ಇನ್ನೂ ಹಲವು ಮಹತ್ವದ ಪ್ರತಿಮೆಗಳನ್ನು ತಯಾರಿಸುವ ಮೂಲಕ ನಾಡಿನೆಲ್ಲೆಡೆ ಚಿರಪರಿಚಿತರಾಗಿದ್ದಾರೆ.

loading...

LEAVE A REPLY

Please enter your comment!
Please enter your name here