ಕರಡಿಕೊಪ್ಪ ಪೈಲ್ವಾನ್ ಹತ್ಯೆ ಪ್ರಕರಣ : ಸಾಕ್ಷಿಯ ಹತ್ಯೆಗೆ ವಿಫಲ ಪ್ರಯತ್ನ

0
27
loading...

ಆರೋಪಿಗಳಿಗೆಶಾಸಕಎಸ್.ಐ.ಚಿಕ್ಕನಗೌಡ್ರಬೆಂಗಾವಲು: ಆರೋಪ

ವಿಷಕುಡಿಸಿಹತ್ಯೆಗೆಯತ್ನ.ಚಿಕಿತ್ಸೆಗಾಗಿಬೆಳಗಾವಿಗೆ

ಹುಬ್ಬಳ್ಳಿ, ಜ. 3- ಕಳೆದ ವರ್ಷ ಇದೇ ತಿಂಗಳಿನಲ್ಲಿ ಇಡೀ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕರಡಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ಪ ಮಳ್ಳಪ್ಪನವರ ಹತ್ಯೆ ಆರೋಪಿಗಳು ಗುರುವಾರ ಬೆಳಿಗ್ಗೆ ಪ್ರಕರಣದ ಪ್ರಮುಖ ಸಾಕ್ಷಿಯಾದ ಮಂಜುನಾಥ ಮಳ್ಳಪ್ಪನವರಿಗೆ ಬಲವಂತದ ವಿಷ ಪ್ರಾಷನ ಮಾಡಿಸುವುದರ ಮೂಲಕ ಸಾಯಿಸುವ ವಿಫಲ ಯತ್ನ ನಡೆಸಿದ್ದಾರೆ.

ಗುರುವಾರ ಬೆಳಿಗ್ಗೆ 6 ರ ಸುಮಾರಿಗೆ ತನ್ನ ಹೊಲಕ್ಕೆ ನೀರು ಹಾಯಿಸಲು ಹೊರಟಿದ್ದ ಹತ್ಯೆಯಾದ ಶಿವಪ್ಪನ ಅಣ್ಣನ ಮಗ, ಪ್ರಮುಖ ಸಾಕ್ಷಿ ಮಂಜುನಾಥನನ್ನೇ ಮುಗಿಸುವುದರ ಮೂಲಕ ಇಡೀ ಪ್ರಕರಣಕ್ಕೇ ಅಂತಿಮ ತೆರೆ ಎಳೆಯಲು ಸಂಚು ರೂಪಿಸಿದ್ದರೆನ್ನಲಾಗಿದೆ.

ಆತನನ್ನು ಬಲವಂತದಿಂದ ಎಳೆದೊಯ್ದು ಕೈ ಕಾಲುಗಳನ್ನು ಕಟ್ಟಿ ಹಾಕಿ ಕ್ರಿಮಿನಾಶಕವನ್ನು ಕುಡಿಸಿ ಕೊಲ್ಲಲು ಯತ್ನಿಸಿದ್ದಾರೆ. ಅವರಿಂದ ಹೇಗೊ ತಪ್ಪಿಸಿಕೊಂಡು ಬಂದು ಮನೆಯಲ್ಲಿ ವಿಷಯ ತಿಳಿಸಿದ ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪರಿಸ್ಥಿತಿ ಗಂಭಿರವಾದ ಹಿನ್ನೆಲೆಯಲ್ಲಿ ಮದ್ಯಾಹ್ನ 12 ರ ಸುಮಾರಿಗೆ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕಿಮ್ಸ್ ಆಸ್ಪತ್ರೆಯ ಎದುರು ನೂರಾರು ಜನ ಜಮಾಯಿಸಿದ್ದರು. ಸಧ್ಯ ಆತ ಅಪಾಯದಿಂದ ಪಾರಾಗಿದ್ದರೂ ಸ್ಥಿತಿ ಗಂಭಿರವಾಗಿದೆ ಎಂದು ಹೇಳಲಾಗಿದೆ.

ಕಳೆದ 2-3 ದಿನಗಳಿಂದ ಮಳ್ಳಪ್ಪನವರ ಹತ್ಯೆ ಆರೋಪಿಗಳಾದ ಲಕ್ಷ್ಮಣ ಹುಬ್ಬಳ್ಳಿ, ರಾಮನಗೌಡ ನಾಗನಗೌಡರ, ಫಕ್ಕಿರಪ್ಪ ಕಾಡದೇವರಪ್ಪನವರ ಸೇರಿದಂತೆ ಮುಂತಾದವರ ತಂಡ ಈತನ ಹತ್ಯೆಗೆ ಸಂಚು ರೂಪಿಸಿದ್ದರಲ್ಲದೇ ಆತನ ಬೈಕ್ ಅಡ್ಡಗಟ್ಟಿ ಮನೆಗೂ ಬಂದು ಪ್ರಾಣಬೆದರಿಕೆ ಹಾಕಿದ್ದರೆನ್ನಲಾಗಿದೆ.

ಈ ಕುರಿತು ಗ್ರಾಮೀಣ ಠಾಣೆಗೆ ದೂರು ದಾಖಲಿಸಲು ಹೋದಾಗ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಬುಧವಾರ ಡಿಎಸ್ಪಿ ರಾಜೀವ ಬನಹಟ್ಟಿಯವರ ನಿರ್ದೇಶನದ ಮೇರೆಗೆ ದೂರು ದಾಖಲಿಸಿಕೊಳಲಾಗಿತ್ತು.

ಮಂಜುನಾಥನ ದೂರಿಗೆ ಪ್ರತಿಯಾಗಿ ಅವರೇ ಬಂದೂಕು ತೊರಿಸಿದ್ದಾರೆಂದು ಪ್ರತಿ ದೂರು ಸಹ ಅಂದೇ ದಾಖಲಾಗಿದೆ.

ಈ ನಡುವೆ ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡ್ರ ಹಾಗೂ ಜಿ.ಪಂ ಸದಸ್ಯರಾದ ಗದಿಗೆಪ್ಪ ಕಳ್ಳಿಮನಿ ಆರೋಪಿಗಳಿಗೆ ಬೆಂಗಾವಲಾಗಿ ರಕ್ಷಣೆ ಒದಗಿಸುತ್ತಿದ್ದಾರೆಂದು ಹತ್ಯೆಯಾದ ಶಿವಪ್ಪನ ಸೋದರ ಚನ್ನಪ್ಪ ಮಳ್ಳಪ್ಪನವರ ನೇರ ಆರೋಪ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here