ಕರ್ನಾಟಕ ವಿರುದ್ಧ ಸೌರಾಷ್ಟ್ತ್ರಕ್ಕೆ ಇನಿಂಗ್ಸ್ ಮುನ್ನಡೆ

0
7
loading...

ರಾಜ್ಕೋಟ್, ಮದ್ಯಮ ಕ್ರಮಾಂಕದ ಬ್ಯಾಟ್ಸಮನ್ ಮನೀಷ್ ಪಾಂಡೆಂುು ಅಮೋಘ ಹೋರಾಟದ ಹೊರತಾಗಿಂುೂ ಸೌರಾಷ್ಟ್ರ ವಿರುದ್ಧದ ರಣಜಿ ಮುಖಮುಖೀಂುುಲ್ಲಿ ಕರ್ನಾಟಕ ಇನಿಂಗ್ಸ್ ಹಿನ್ನಡೆಗೆ ಅನುಭವಿಸಿದೆ.

ಇಲ್ಲಿನ ಸೌರಾಷ್ಟ್ರ ಂುುುನಿವರ್ಸಿಟಿ ಗ್ರೌಂಡ್ನಲ್ಲಿ ನಡೆಂುುುತ್ತಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ 3ನೇ ದಿನ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 396 ರನ್ಗಳಿಗೆ ಆಲೌಟಾುತು. 469 ರನ್ ಪೇರಿಸಿದ್ದ ಸೌರಾಷ್ಟ್ರ 73 ರನ್ನುಗಳ ಮಹತ್ವದ ಮುನ್ನಡೆ ಸಂಪಾದಿಸುವಲ್ಲಿ ಂುುಶಸ್ವಿಂುುಾುತು.

ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಕರ್ನಾಟಕ ಸೆಮಿಪೈನಲ್ ಅರ್ಹತೆ ಸಂಪಾದಿಸಬೇಕಾದರೆ ಸೌರಾಷ್ಟ್ರ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿ ಪಂದ್ಯ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಸೌರಾಷ್ಟ್ರ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಲಿದೆ. ವಿಕೆಟ್ ನಷ್ಟವಿಲ್ಲದೇ 45 ರನ್ಗಳಿಂದ ದಿನದಾಟ ಮುಂದುವರಿಸಿದ ಕರ್ನಾಟಕಕ್ಕೆ ತಂಡಕ್ಕೆ ಕೆ.ಎಲ್. ರಾಹುಲ್ ಮತ್ತು ರಾಬಿನ್ ಉತ್ತಪ್ಪ ಉತ್ತಮ ಆರಂಭ ಒದಗಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾುತು. ಮೊದಲ ವಿಕೆಟಿಗೆ 95 ಬಂತು. ಆದರೆ 60 ರನ್ ಸಿಡಿಸಿದ ಉತ್ತಪ್ಪ ಓಟಾಗುತ್ತಿದ್ದಂತೆ ತಂಡ ಕುಸಿತದ ಹಾದಿ ಹಿಡಿತು.

ಅನಂತರ ಬಂದ ಕುನಾಲ್ ಕಪೂರ್ (2) ಮತ್ತು ಸಿ.ಎಂ. ಗೌತಮ್ (5) ಅಲ್ಪ ಮೊತ್ತಕ್ಕೆ ಓಟಾಗಿ ತೀವ್ರ ನಿರಾಸೆ ಮೂಡಿಸಿದರೆ. ಇವರ ಬೆನ್ನಲ್ಲೇ 55 ರನ್ ಬಾರಿಸಿದ್ದ ರಾಹುಲ್ ಕೂಡ ನಿರ್ಗಮಿಸಿದರು (111 ಎಸೆತ, 6 ಬೌಂಡರಿ). ಸ್ಟುವರ್ಟ ಬಿನ್ನಿ (16), ಅಮಿತ್ ವರ್ಮ (30) ಮತ್ತು ಕೆ. ಗೌತಮ್ (6) ದೊಡ್ಡ ಮೊತ್ತದ ಕೊಡುಗೆ ನೀಡುವಲ್ಲಿ ವಿಫಲರಾದರು.ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸೌರಾಷ್ಟ್ರ ಬೌಲರ್ಗಳ ಮೇಲೆ ದಂಡೆತ್ತಿ ಹೋದ ಮನೀಷ್ ಪಾಂಡೆ ಏಕಾಂಗಿ ಹೋರಾಟ ನಡೆಸಿ ಶತಕ ಬಾರಿಸಿ ಮುನ್ನುಗ್ಗಿದರು. 177 ರನ್ ಬಾರಿಸಿದ ಪಾಂಡೆ ಅಂತಿಮ ವಿಕೆಟ್ ರೂಪದಲ್ಲಿ ಪೆವಿಲಿಂುುನ್ ಸೇರುವುದರೊಂದಿಗೆ ಕರ್ನಾಟಕದ ಸೆಮಿಪೈನಲ್ ಗುರಿಗೆ ಕಂಟಕ ಎದುರಾಗಿದೆ.ಸೌರಾಷ್ಟ್ರ ಪರ ವಿಶಾಲ್ ಜೋಶಿ, ಧರ್ಮೆಂದ್ರ ಜಡೇಜ ಮತ್ತು ಕಮಲೇಶ್ ಮಕ್ವಾನಾ ತಲಾ 3 ವಿಕೆಟ್ ಕಬಳಿಸಿ ಕರ್ನಾಟಕದ ಇನಿಂಗ್ಸ್ ಮುನ್ನಡೆ ಕನಸಿಗೆ ತಣ್ಣೀರೆರಚಿದರು. ಜೈದೇವ್ ಉನದ್ಕತ್ ಒಂದು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೌರ್: ಸೌರಾಷ್ಟ್ರ-469. ಕರ್ನಾಟಕ-396 (ಪಾಂಡೆ 177, ಉತ್ತಪ್ಪ 60, ರಾಹುಲ್ 55, ಮಿಥುನ್ 31, ಮಕ್ವಾನಾ 91ಕ್ಕೆ 3, ಜೋಶಿ 103ಕ್ಕೆ 3, ಜಡೇಜ 122ಕ್ಕೆ 3).

loading...

LEAVE A REPLY

Please enter your comment!
Please enter your name here