ಕಾಂಗ್ರೆಸ್ ಪಕ್ಷದ ಆಮರಣ ಉಪವಾಸ ಪ್ರಾರಂಭ, ನ್ಯಾಯ ದೋರೆಯುವವರಗೆ ಉಪವಾಸ ನಿಲ್ಲದು

0
22
loading...

ಅಥಣಿ 3-ತಾಲುಕ ಪಂಚಾಯಿತಿ ಅನುದಾನದಲ್ಲಿ ಪಕ್ಷ ಪಾತ -ತಾರತಮ್ಯ ಅವ್ಯಾಹತವಾಗಿ ನಡೆದಿದೆ. ಸರಕಾರ ತಮ್ಮದೆಂದು ಮನ ಬಂದತೆ ಅನುಧಾನ ಹಂಚಿಕೆಯಲ್ಲಿ ಕಾಂಗ್ರಸ್ ಸದಸ್ಯರನ್ನು ಕಡೆಗನಿಸುತ್ತಿದೆ.ಕಾಂಗ್ರಸ್ ಪಕ್ಷದ ಹಾಗೂ ಸದಸ್ಯರ ಪ್ರಭುತ್ವವನ್ನು ಕಡಿಮೆ ಮಾಡಲು ಹೊಂಚು ನಡೆದಿದೆ.ಜನ ಪ್ರತಿನಿಧಿಯಾಗಿ ಓರ್ವ ವ್ಯಕ್ತಿ ಬಹುಮತದಿಂದ ಆರಸಿ ಬಂದಾಗ ಅವರು ಈಡಿ ತಾವು ಆರಸಿ ಬಂದ ಮತ ಕ್ಷೇತ್ರದ ಅಭಿವೃದ್ದಿಪರ ಹಿತ ಕಾಪಾಡುವುದು ಅವರ ನೈತಿಕ ಹೊಣೆ ಆಗಿರುತ್ತದೆ. ಹೀಗಿರುವಾಗ ಯಾವುದೇ ಪಕ್ಷದ ಜಿನಪ್ರತಿನಿಧಿ ಈಡಿ 43 ಗ್ರಾಮ ಪಂಚಾತಿಗಳಿಗೆ ಸಮಾನ ಹಕ್ಕುದಾರರಾಗಿರುತ್ತಾರೆ. ಹೀಗಿರುವಾಗ ಆಡಳಿತ ಪಕ್ಷ ಎಲ್ಲ ಸದಸ್ಯರನ್ನು ಸಮಾನವಾಗಿ ನೋಡಿಕೊಂಡು ಸಮಾನ ರೀತಿಯಿಂದ ಅನುದಾನ ಹಂಚುವುದು ಅವರ ಕತ್ಯರ್ವವಾಗಿರುವುದು.ಆದರೆ ಇಲ್ಲಿ ತದ್ವಿರುದ್ದ ಅಸಮಾನತೆಯಿಂದ

ನಡೆದುಕೊಳ್ಳಲಾಗುತ್ತದೆ. ಹೀಗಾಗಿ ಅಧಿಕಾರಿಗಳು ಸಹ ಅದೇ ದಾರಿಯಲ್ಲಿ ನಡೆಯುತ್ತಾರೆ. ಪ್ರತಿಯೊಂದು ಕೆಲಸದಲ್ಲಿ ತಾರತಮ್ಯ ಅವ್ಯಾಹತವಾಗಿ ಸಾಗಿಬರುತ್ತದೆ. ಇದಕ್ಕೆ ಇಂದು ಕಡಿವಾನ ಹಾಕೇಲೆಬೇಕು ಎಂದು ಮಾಜಿ ಶಾಸಕ ಶಹಜಾನ ಡೋಂಗರಗಾವ ಹೇಳಿದರು.

ಸ್ಥಳಿಯ ತಾಲೂಕ ಪಂಚಾಯಿತಿ ಕಚೇರಿ ಮುಂದೆ ಆಮರಣ ಉಪವಾಸಕ್ಕಾಗಿ ಹಾಕಿರುವ ಭವ್ಯ ಮಂಟಪದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಅಂಬೆಡ್ಕರ ಇವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಆಮರಣ ಉಪವಾಸಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮುಂದುವರೆದು ಕುಡಿಯುವ ನೀರು, ರಸ್ತೆ,ಆಶ್ರಯಮನೆ, ದಾರಿ ದೀಪ.ಈ ರೀತಿ ಎಲ್ಲ ಯೋಜನೆಗಳಲ್ಲಿ,ಕಾಂಗ್ರಸ್ ಸದಸ್ಯರ ಮತಕ್ಷೇತ್ರಗಳಲ್ಲಿ ತಾರತಮ್ಯ ನಡೆದಿದೆ. ಈ ವಿಷಯ ಅನೇಕ ಬಾರಿ ಮನವಿ ಮೂಲಕ ಸತ್ಯಾಗ್ರಹ ಮೂಲಕ ಹೋರಾಟದ ಮೂಲಕ ವ  ುನವಿ ಮಾಡಿಕೊಂಡರು, ವಿನಂತಿಸಿಕೊಂಡರು ಯಾವುದೇ ಪ್ರಯೋಜನೆ ಆಗಿಲ್ಲ ನಿನ್ನೆ ತಾನೆ ಬಿ.ಜೆ.ಪಿ ಚಿಕ್ಕೌಡಿ ಜಿಲ್ಲಾ ಅಧ್ಯಕ್ಷರು ಕಾಗದ ಮೂಲಕ ಪತ್ರಿಕೆಯಲ್ಲಿ ಉಪವಾಸ ಕೈ ಬಿಡಿ ಎಂದು ಹೇಳಿದ್ದಾರೆ.ಆದರೆ ನಮ್ಮ ಉಪವಾಸ ಅಷ್ಟು ಸುಲಭದ್ದಲ್ಲಾ ಕಷ್ಟದಿಂದ ತಾಪತ್ರಯದಿಂದ ಕೂಡಿದವರ ಧ್ವನಿಯಾಗಿದೆ ಎಂದರು. ಗಜಾನನ ಮಂಗಸೂಳಿ ಮಾತನಾಡಿ, ಆಡಳಿತಾರೂಢ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿರ ಅಧಿಕಾರಿಗಳು ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ.ಅಭಿವೃಧ್ದಿ ಕಾರ್ಯಗಳಲ್ಲಿ ತಾರ್ಯತಮ್ಯ ಸಹಿಸಲಾಗುತ್ತಿಲ್ಲ ಅದ್ದರಿಂದ ಉಪವಾಸ ಕೈಗೊಳ್ಳಲಾಗುತ್ತಿದೆ ಎಂದರು. ಇದೇ ಸಮಯದಲಿ  ಬಿ.ಆರ್.ಗಂಗಪ್ಪನವರ,ಬಿ.ಎ.ಚವ್ಹಾಣ,ಮಹೇಶ ಕುಮಠ್ಠಳ್ಳಿ,ನ್ಯಾಯವಾದಿ ಸಂಕ ಮಾತನಾಡಿದರು.

ಈ ಸಮಯದಲ್ಲಿ ಕಿರಣಕುಮಾರ ಪಾಟೀಲ,ಆರ್ ಎನ್ ಸಿದ್ದಾಂತಿ,ಹರ್ಷದ ಗಧ್ಯಾಳ, ಎಸ್.ಎಂ ನಾಯಿಕ,ಮಹಾದೇವ ಕೋರೆ,ಚಂದ್ರಕಾಂತ ಇಮ್ಮಡಿ,ಬಿ.ಎನ್.ದಳವಾಯಿ,ಅನಿಲ ಸುಣಧೋಳಿ,ನೇಮಿನಾಥ ನಂದಗಾಂವ,ರುಸ್ತುಂ ಸುತಾರ,ರಾವಸಾಹೇಬ ಹಗೇದ,ಸಿದ್ರಾಯ ಬಸರಿಖೋಡಿ,ಸುವರ್ಣಾ ವಾಘಮೋಡೆ,ಹೇಮಲತಾ ಮೋರೆ,ಸಾವಿತ್ರಿ ಇಜಾರಿ,ಮಹಾನಂದ ಶಿಂಗಾಡಿ ಮೊದಲಾದವರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here