ಗೌರಾಪುರ ಶಾಲೆಯಲ್ಲಿ ಶಿಅಯ್ನೌರ ಅವಾಂತರಷಿ

0
12
loading...

ಭದ್ರಾವತಿ:  ಶಾಲಾ ಮಕ್ಕಳಿಗಾಗಿ, ಒಂದು ನೂರು ನಾಟಕಗಳು, ಮೂರು ಸಾವಿರ ಮಕ್ಕಳು ಅಭಿನಯಿಸುವ ರಂಗ ಶತಕ ಕಾರ್ಯಕ್ರಮದಡಿ ಜ.7ರಂದು ಸೋಮವಾರ ಸಂಜೆ 6 ಗಂಟೆಗೆ ಕಳೆದ 20 ದಿನಗಳಿಂದ ರಂಗ ತರಬೇತಿ ಪಡೆದ ಅಂತರಗಂಗೆ ಕ್ಲಸ್ಟರ್ ವ್ಯಾಪ್ತಿಯ ಹಳೇಗೌರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ರಂಗ ತರಬೇತಿ ಪಡೆದ ಮಕ್ಕಳಿಂದ ಶಿ ಅಯ್ನೌರ ಅವಾಂತರ ಶಿ ಹಾಸ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಎರೇಹಳ್ಳಿ ಗ್ರಾಮಪಂಚಾಯತಿ ಸದಸ್ಯ ಸಿ.ಆರ್.ಶಿವರಾಮ್ ನಾಟಕ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ನಿರ್ದೇಶಕ ಎಸ್.ಜಿ.ಶಂಕರಮೂರ್ತಿ ಪ್ರಾಸ್ತಾವಿಕ ನುಡಿಯುವರು. ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಇ.ಶಿವರುದ್ರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮನುತ, ಗ್ರಾಮದ ಮುಖಂಡರುಗಳಾದ ಮಲಿಯಪ್ಪ ಶೆಟ್ಟಿ, ಎ.ಎಸ್.ಹಾಲೇಶಪ್ಪ, ತಿಮ್ಮಯ್ಯ ಮುಂತಾದವರು ಉಪಸ್ಥಿತರಿರುವರು.

ಸಾರ್ವಜನಿಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಿ ಬಾಲಪ್ರತಿಭೆಗಳಿಗೆ ಪ್ರೌತ್ಸಾಹಿಸಬೇಕೆಂದು ರಂಗಾಯಣ ನಿರ್ದೇಶಕ ಹಾಗೂ ಶಾಂತಲಾ ಆರ್ಟ್ಸ್ ಕಲಾವಿದ ಎಸ್.ಜಿ.ಶಂಕರಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here