ಚುನಾವಣೆಗೆ ಆಯೋಗದ ಸದ್ದಿಲ್ಲದೇ ತಯಾರಿ

0
14
loading...

ಬೆಂಗಳೂರು, ಜ.8- ಮುಖ್ಯಮಂತ್ರಿ ಜಗದೀಶ್ಶೆಟ್ಟರ್ ನೇತೃತ್ವದ ಸರ್ಕಾರ ದಿನಗಣನೆ ಎಣಿಸುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗವು ಚುನಾವಣೆ ನಡೆಸಲು ಸದ್ದಿಲ್ಲದೆ ತಯಾರಿ ನಡೆಸಿದೆ.

ಬಿಜೆಪಿ ಸರ್ಕಾರದ ಅವಧಿ ಮೇ 30ರವರೆಗೂ ಇದ್ದು ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಾದ­ರೆ ಆಯೋಗವು ಚುನಾವಣೆ ನಡೆಸಲು ಭರದ ಸಿದ್ಧತೆ ಮಾಡಿಕೊಂಡಿದೆ.

ಏಪ್ರಿಲ್ 15ರವರೆಗೆ ರಾಜ್ಯದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ಈ ಹಿಂದೆ ಪತ್ರ ಬರೆದಿತ್ತು. ಆದರೆ ಇದೀಗ ಆಯೋಗವು ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಅಗತ್ಯವಾದ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ 30 ಸಾವಿರ ಇವಿಎಂ (ವಿದ್ಯುನ್ಮಾನ ಮತಪೆಟ್ಟಿಗೆ)ಯನ್ನು ಸಿದ್ಧಪಡಿಸಿರುವ ಆಯೋಗ ವಾರದೊಳಗೆ ಇನ್ನು 35 ಸಾವಿರ ಇವಿಎಂ ತರಿಸಲು ಸಜ್ಜಾಗಿದೆ.

ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ತ್ರ ಸೇರಿದಂತೆ ಒಟ್ಟು 6 ರಾಜ್ಯಗಳಿಂದ 35 ಸಾವಿರ ಇವಿಎಂಗಳನ್ನು ತರಿಸಲು ಆಯೋಗ ನಿರ್ಧರಿಸಿದೆ.

ಮಾರ್ಚ್ ಒಳಗೆ ಚುನಾವಣೆ ನಡೆದರೆ 65 ಸಾವಿರ ಇವಿಎಂ ಬೇಕೆಂದು ಕೇಂದ್ರಕ್ಕೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 15 ದಿನಗಳ ಹಿಂದೆಯೇ 30 ಸಾವಿರ ಇವಿಎಂಗಳನ್ನು ನೀಡಿದ್ದು ಉಳಿದಿರುವ 35 ಸಾವಿರ ಇವಿಎಂಗಳನ್ನು ಒಂದು ವಾರದೊಳಗೆ ನೀಡುವ ಭರವಸೆಯನ್ನು ಕೇಂದ್ರ ಚುನಾವಣಾ ಆಯೋಗ ಕೊಟ್ಟಿದೆ.

ಇದೇ ಮೊದಲ ಬಾರಿಗೆ 4 ಕೋಟಿ ರೂ. ಅಧಿಕ ಮತದಾರರು ತಮ್ಮ ಹಕ್ಕು ಚಲಾುಸಲಿದ್ದಾರೆ ಹೀಗಾಗಿ ಹೆಚ್ಚಿನ ಇವಿಎಂಗಳು ಬೇಕಾಗುತ್ತವೆ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು.

ಜನವರಿ 28ರೊಳಗೆ ಮತದಾರರ ಅಂತಿಮ ಪರಿಷ್ಕ್ಕತ ಪಟ್ಟಿ ಸಿದ್ಧವಾಗಲಿದೆ. ಬಳಿಕ ಒಂದು ತಿಂಗಳೊಳಗೆ ಚುನಾವಣೆ ನಡೆಸುವುದಾದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ರಾಜ್ಯ ಚುನಾವಣಾ ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.

ಮಾರ್ಚ್ನಿಂದ ಏಪ್ರಿಲ್ 15ರೊಳಗೆ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳು ನಡೆಯುತ್ತಿದ್ದು ಅಷ್ಟರೊಳಗೆ ನಡೆಸಬೇಕು ಇಲ್ಲವೇ ಏಪ್ರಿಲ್ 15ರ ನಂತರ ಚುನಾವಣೆ ನಡೆಸುವಂತೆ ಮನವಿ ಮಾಡಿದೆ.

ಆಯೋಗ ಚುನಾವಣೆ ನಡೆಸಲು ಈಗಾಗಲೇ ಸಂಪೂರ್ಣವಾಗಿ ಸಿದ್ಧವಿದೆ ಎರಡರಿಂದ ಮೂರು ಹಂತದಲ್ಲಿ ಚುನಾವಣೆ ನಡೆಸುವಂತೆ ಸಲಹೆ ಮಾಡಿದೆ.

ಒಂದು ವೇಳೆ ಅನೀರೀಕ್ಷಿತವಾಗಿ ಮಧ್ಯಂತರ ಚುನಾವಣೆ ಎದುರಾದರೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದರೆ ಮಾರ್ಚ್ ಒಳಗೆ ಚುನಾವಣೆ ನಡೆಯುವುದು ಖಚಿತ ಇಲ್ಲದಿದ್ದರೆ ಮೇ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

 

 

loading...

LEAVE A REPLY

Please enter your comment!
Please enter your name here