ಬೀಜಧನ ಸಾಲ ಮರುಪಾವತಿ: ಒಂದಾವರ್ತಿ ತೀರುವಳಿ ಯೋಜನೆ ಜಾರಿ

0
21
loading...

ಬೆಳಗಾವಿ 3: ರಾಜ್ಯ ಸರ್ಕಾರವು 1977 ರಿಂದ 2004 ರವರೆಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನೀಡಿದ ಬೀಜಧನ (ಸೀಡ್ ಮನಿ/ ಮಾರ್ಜಿನ್ ಮನಿ) ಸಾಲವನ್ನು ಮರುಪಾವತಿಸಲು ಒಂದಾವರ್ತಿ ತೀರುವಳಿ ಯೋಜನೆ (ಓ.ಟಿ.ಎಸ್) ಯನ್ನು ಜಾರಿಗೆ ತಂದಿರುತ್ತದೆ.

ಈ ಯೋಜನೆಯು ಸರ್ಕಾರ ಆದೇಶ ಹೊರಡಿಸಿದ ದಿನಾಂಕ: 4-12-2012 ರಿಂದ 9 ತಿಂಗಳು ಮಾತ್ರ ಜಾರಿಯಲ್ಲಿರುತ್ತದೆ. ಆದಕಾರಣ ಬೀಜಧನ ಸಾಲ ಪಡೆದ ಜಿಲ್ಲೆಯ ಎಲ್ಲ ಅತೀ ಸಣ್ಣ ಮತ್ತು ಸಣ್ಣ ಕೈಗಾರಿಕೆ ಘಟಕದವರು ಬೀಜಧನ ((ಸೀಡ್ ಮನಿ/ ಮಾರ್ಜಿನ್ ಮನಿ) ಸಾಲ ಮರುಪಾವತಿಗೆ ಒಂದಾವರ್ತಿ ತಿರುವಳಿ ಯೋಜನೆ ಸದುಪಯೋಗ ಪಡೆದು ನಿಯಮಾನುಸಾರ ಸಾಲ ಮರುಪಾವತಿಸಲು ಕೋರಿದೆ.

ಒಂದಾವರ್ತಿ ತಿರುವಳಿ ಯೋಜನೆಯ (ಓ.ಟಿ.ಎಸ್) ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕೆ ವಿಸ್ತರಣಾಧಿಕಾರಿಗಳನ್ನು, ಉಪನಿರ್ದೇಶಕರು (ಖಾಗ್ರಾ) ಜಿಲ್ಲಾ ಪಂಚಾಯಿತಿ ಬೆಳಗಾವಿಯವರ ಕಚೇರಿ ದೂರವಾಣಿ ಸಂಖ್ಯೆ: 0831-2407238 ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ ಬೆಳಗಾವಿ ಇವರ ಕಚೇರಿಯನ್ನು ದೂರವಾಣಿ ಸಂಖ್ಯೆ: 0831-2440430 ಗೆ ಸಂಪರ್ಕಿಸಬೇಕೆಂದು ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರದ (ಜಿಲ್ಲಾ ಪಂಚಾಯತ್) ಉಪನಿರ್ದೇಶಕರು (ಖಾಗ್ರಾ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here