ರಾಜ್ಯ ಮಟ್ಟದ ಕವಿ ಕಾವ್ಯ ಮೇಳಕ್ಕೆ ಕವನಗಳ ಆಹ್ವಾನ

1
31
loading...

ಮಂಡ್ಯ: ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ಮತ್ತು ಸಂಸ್ಕ್ಕತ ಇಲಾಖೆ, ಮಂಡ್ಯ ಇವರ ಇವರ ಸಹಯೋಗದೊಂದಿಗೆ 15ನೇ ವರ್ಷದ ರಾಜ್ಯ ಮಟ್ಟದ ಕವಿಕಾವ್ಯ ಮೇಳವನ್ನು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದು, ಆಸಕ್ತರಿಂದ ಎರಡು ಸ್ವರಚಿತ ಕವನಗಳನ್ನು ಅಹ್ವಾನಿಸಲಾಗಿದೆ.

ಉತ್ತಮ ನೂರು ಕವನಗಳನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಅವುಗಳಲ್ಲಿ ಹತ್ತು ಅತ್ಯುತ್ತಮ ಕವನಗಳನ್ನು ಆಯ್ಕೆ ಮಾಡಿ ಕಾವ್ಯಶ್ರೀ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅತ್ಯುತ್ತಮ ಕವಿಯನ್ನು ಕವಿಕಾವ್ಯಮೇಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು.

ಕಾವ್ಯ ಮೇಳದಲ್ಲಿ ಎಲ್ಲಾ ಕವಿಗಳಿಗೂ ಕವನ ವಾಚಿಸಲು ಅವಕಾಶ ನೀಡಲಾಗುವುದು. ಮುದ್ರಿತ ಐದು ಕೃತಿಗಳು ಮತ್ತು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಆಸಕ್ತ ಕವಿಗಳು ತಮ್ಮ ಸ್ವರಚಿತ ಇಪ್ಪತ್ತು ಸಾಲಿನ ಎರಡು ಕವನಗಳು, ಎರಡು ಭಾವಚಿತ್ರ, ಕಿರುಪರಿಚಯ, ವಿಳಾಸ ಮತ್ತು ದೂರವಾಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬಗ್ಗೆ ವಿವರಗಳನ್ನು ಸಲ್ಲಿಸತಕ್ಕದ್ದು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿಗೆ ಕನ್ನಂಬಾಡಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರ ಹೆಸರನ್ನು ಪ್ರಶಸ್ತಿಗೆ ಸೂಚಿಸಬಹುದಾಗಿದೆ.

ಸ್ವವಿವರ ಮತ್ತು ಕವನಗಳನ್ನು ಫೆ.15ರೊಳಗೆ ಎಸ್.ಕೃಷ್ಣಸ್ವರ್ಣಸಂದ್ರ, ಅಧ್ಯಕ್ಷರು, ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ, ಕವಿಮಿತ್ರ, ಸಂಖ್ಯೆ. 767, ಸ್ವರ್ಣಸಂದ್ರ, ಮಂಡ್ಯ-2., ಕವನಗಳು ಮತ್ತು ವಿವರಗಳನ್ನು ನುಡಿಯಲ್ಲಿ ಮುದ್ರಿಸಿ www.kannambadik@gmail.com ಇಲ್ಲಿಗೆ ಕಳುಹಿಸಬೇಕಾಗಿದೆ. ಹೆಚ್ಚಿವ ವಿವರಗಳಿಗಾಗಿ ಮೊ.9448424380 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

loading...

1 COMMENT

LEAVE A REPLY

Please enter your comment!
Please enter your name here