ವಿದ್ಯಾರ್ಥಿ ದಾರುಣ ಸಾವು

0
11
loading...

ಗೋಕಾಕ 17- ಇಲ್ಲಿಗೆ ಸಮೀಪದ ಯೋಗಿಕೊಳ್ಳ ರಸ್ತೆಯಲ್ಲಿರುವ ಮಾರ್ಕಂಡೇಯ ನದಿಯಲ್ಲಿ ಕಳೆದ ದಿ.14 ರಂದು ವಿದ್ಯಾರ್ಥಿಯೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿ ಆದರ್ಶ ಮದವಾಲ (15) ನಗರದ ಎಲ್ಇಟಿ ಪ್ರೌಢ ಶಾಲೆಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಸಂಕ್ರಮಣ ಹಬ್ಬದ ನಿಮಿತ್ತ ತಮ್ಮ ಮನೆಯವರೊಂದಿಗೆ ಯೋಗಿಕೊಳ್ಳದ ಮಾರ್ಕಂಡೇ ನದಿ ದಂಡೆಗೆ ಊಟಕ್ಕೆ ಹೋಗಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಘಟನೆ ಸಂಭವಿಸಿದ ಕೂಡಲೇ ವಿದ್ಯಾರ್ಥಿಯ ಶವವನ್ನು ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಆರ್.ಎಮ್.ಪೂಜೇರಿ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

loading...

LEAVE A REPLY

Please enter your comment!
Please enter your name here