ವಿವೇಕ ಸಪ್ತಾಹ ಕಾರ್ಯಕ್ರಮ

0
21
loading...

ಘಟಪ್ರಭಾ 13: ಸ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕೆಂದು ಸಿಆರ್ಪಿ ಅಧಿಕಾರಿ ಎನ್.ಕೆ.ಹುಡೇದ ಹೇಳಿದರು.

ಅವರು ಇಲ್ಲಿಯ ಎಸ್ಡಿಟಿ ಬಾಲಕ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಜರುಗಿದ ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆ ಅಂಗವಾಗಿ ವಿವೇಕ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಶ್ಚಾತ್ಯ ದೇಶದ ಸಂಸ್ಕ್ಕತಿಗೆ ಮಾರುಹೋಗದೇ ದೇಶದ ಸಂಸ್ಕ್ಕತಿಯನ್ನು ಉಳಿಸಿ ಬೆಳಸಬೇಕಾದ ಅಗತ್ಯತೆ ಇದೆ. ಯುವ ಜನಾಂಗವು ದುಶ್ಚಟಗಳಿಗೆ ಬಲಿಯಾಗದೇ ಸಮಾಜದಲ್ಲಿ ಶಿಸ್ತಿನ ಸಿಪಾಯಿಗಳಾಗಿ ಹೊರಹೊಮ್ಮಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೌಪಾದ್ಯಾಯ ಬಿ.ಬಿ.ಕಾರಗಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಜಿ.ಅಂಗಡಿ, ಎಸ್.ವ್ಹಿ.ನಾಯಕ, ಎಂ.ಜಿ. ಘೀವಾರಿ, ಸುರೇಂದ್ರ ಹೊನಕುಪ್ಪಿ, ಎಸ್.ಆರ್.ಪಾಟೀಲ, ಜಗದೀಶ ಮಠಪತಿ, ಎಸ್.ಬಿ.ದೇಯಣ್ಣವರ, ಮಹಾಂತೇಶ ರಾಯರ, ಎಂ.ಎಂ.ಬಳ್ಳಾರಿ, ಎಸ್.ಪಿ. ಸಿದ್ದಪ್ಪಗೋಳ, ಸೇರಿದಂತೆ ಇತರರು ಇದ್ದರು. ವಿದ್ಯಾಥಿಗಳು ಜಾಥಾದಲ್ಲಿ ಸ್ವಾಮಿ ವಿವೇಕಾನಂದರ ನಾಣ್ಣುಡಿಗಳನ್ನು ಘೋಷಣೆಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ಕಾರ್ಯಕ್ರಮವನ್ನು ಬಿ.ಆರ್.ಕರಿಗಾರ ಸ್ವಾಗತಿಸಿದರು. ಆರ್.ಡಿ.ಉಪ್ಪಾರ ನಿರೂಪಿಸಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here