ಸರಕಾರಿ ಡಿಗ್ರೂ ಪ್ನೌಕರರ ಸಂಘದಿಂದ ಸ್ವಯಂ ಸೇವಾ ನಿವೃತ್ತಿ ಹೊಂದಿದ ಮುತಗಿ ಅವರಿಗೆ ಬೀಳ್ಕೊಡುಗೆ

0
19
loading...

ಬೆಳಗಾವಿ,20-ಸರಕಾರಿ ಡಿ ಗ್ರೂಪ್ ನೌಕರರ ಜಿಲ್ಲಾ ಸಂಘಟನೆಯಿಂದ ರವಿವಾರ ಸ್ವಯಂ ಸೇವಾ ನಿವೃತ್ತಿ ಹೊಂದಿದ ಬೆಳಗಾವಿ ಧರ್ಮದತ್ತಿ ಆಯುಕ್ತರ ಕಚೇರಿ ಸಿಬ್ಬಂದಿ ಹಾಗೂ ಸಂಘದ ಅಧ್ಯಕ್ಷ ಆರ್.ಎಸ್.ಮುತಗಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಸಂಘದ ತಾಲೂಕಾ ಅಧ್ಯಕ್ಷರಾದ ಎಸ್.ಕೆ.ರಾಮದುರ್ಗ ಕೆ.ಕಾರಜೋಳ, ಎಂ.ಕೆ.ಮಾಳಗಿ, ಆರ್.ಎಸ್.ಮೂರ್ತಿ, ಆಜಾದ ಮುಲ್ಲಾ, ಎನ್.ಬಿ.ರಾಜಾಪೂರ ಸೇರಿದಂತೆ ಸದಸ್ಯರು ಸೇವಾ ನಿವೃತ್ತಿ ಹೊಂದಿದ ರಾಜಶೇಖರ ಮುತಗಿಯವರನ್ನು ಅಭಿನಂದಿಸಿ ಬೀಳ್ಕೊಟ್ಟರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಎಸ್.ಮುತಗಿ ತಮ್ಮ ಕಳೆದ 36 ವಷಗಳ ಸೇವೆಯಲ್ಲಿ ಸಹಕರಿಸಿದ ಎಲ್ಲ ಅಧಿಕಾರಿ ಸಿಬ್ಬಂದಿಗೆ, ಸಹೋದ್ಯೌಗಿಗಳಿಗೆ ಹಾಗೂ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸೇವಾ ಅವಧಿಯ ಹಲವು ಘಟನಾವಳಿಗಳನ್ನು ಸ್ಮರಿಸಿಕೊಂಡರು. ಅಲ್ಲದೇ ನೌಕರರ ಸಂಘದ ಅಧ್ಯಕ್ಷರಾಗಿ ಡಿ ಗ್ರೂಪ ನೌಕರರ ಬೇಕುಬೇಡಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ ಸಮಾಧಾನ ತಮ್ಮದಾಗಿದೆ. ಸಂಘಕ್ಕೆ ಮುಂದೆಯೂ ಕೂಡ ತಮ್ಮಿಂದಾದ ಎಲ್ಲ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಪದಾಧಿಕಾರಿಗಳು ಮಾತನಾಡಿ ಮುತಗಿಯವರ ಸೇವಾ ಪ್ರಾಮಾಣಿಕತೆ, ಸಿಬ್ಬಂದಿಯೊಂದಿಗಿನ ಆತ್ಮೀಯ ಒಡನಾಟ ಹಾಗೂ ಸಮಾಜಮುಖಿ ಚಿಂತನೆಗಳನ್ನು ಶ್ಲಾಘೀಸಿದರು.ಕಾರ್ಯಕ್ರಮದಲ್ಲಿ ಡಿ ಗ್ರೂಪ ನೌಕರ ಸಂಘದ ಸದಸ್ಯರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here