ಸ್ವಾಮಿ ವಿವೇಕಾನಂದರ ತತ್ವಗಳು ಇಂದಿಗೂ ಪ್ರಸ್ತುತ

0
141
loading...

ತೇರದಾಳ : ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಯುಜನತೆ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು. ಯುವಕರು, ದೇಶಾಭಿಮಾನ, ಧರ್ಮಾಭಿಮಾನ ಹೊಂದಿದಾಗಲೇ, ಬಲಿಷ್ಠ ರಾಷ್ಟ್ತ್ರ ನಿರ್ಮಾಣ ಸಾಧ್ಯವೆಂದು ವೀರವಾಣಿ ಮೂಲಕ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿಗೂ ಪ್ರಸ್ತುತವೆಂದು ಪ್ರಾಚಾರ್ಯ ಶಕುಂತಲಾ ಹಿರೇರೆಡ್ಡಿ ಹೇಳಿದರು.

ಇಲ್ಲಿಯ ಜೆವಿ ಮಂಡಳ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವೀಸನ್ಯಾಸಿ, ಶ್ರೇಷ್ಠ ದಾರ್ಶನಿಕ ಸ್ವಾಮಿವಿವೇಕಾನಂದರ 150ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ ವೈದ್ಯ ಡಾ.ಶೀತಲ ಸದಲಗಿ, ಡಾ.ಎಸ್.ಎಸ್.ಸಿದ್ದಾಪುರಮಠ, ಪ್ರದೀಪ ಸುನಕೆ ಮಾತನಾಡಿ ಭಾರತೀಯ ಸಂಸ್ಕ್ಕತಿ, ಧರ್ಮವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಅವರ ಸದ್ವಿಚಾರಗಳನ್ನು ಯುವಜನಾಂಗ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು.

ರೀಟಾ ಸಿಂಗ್ ಪ್ರಾರ್ತಿಸಿದರು. ಮಂಗಲ ದೇವರಾಯ್ ಸ್ವಾಗತಿಸಿದರು. ಸ್ನೇಹಾ ಸಿಂಗ್ ನಿರೂಪಿಸಿದರು. ರೂಪಾ ಬಾವಚಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here