ಕಾಂಗ್ರೆಸ್ 14 ಬಿಜೆಪಿಗೆ 5 ನಾಮಪತ್ರ ಸಲ್ಲಿಕೆೆ

0
14
loading...

ಹಳಿಯಾಳ :  ಪಟ್ಟಣ ಪಂಚಾಯತಿಗೆ ಮಾರ್ಚ 7 ರಂದು ನಡೆದಿರುವ ಚುಣಾವಣೆಗೆ ಶುಕ್ರವಾರ 14 ನಾಮ ಪತ್ರ ಸಲ್ಲಿಕೆಯಾಗಿವೆ. ಶುಕ್ರವಾರ ಸಂಜೆ ಸಿಕ್ಕ ಮಾಹಿತಿ ಪ್ರಕಾರ ಕಾಂಗ್ರೆಸ್ನಿಂದ 8, ಬಿ.ಜೆ.ಪಿ ಯಿಂದ ಮೊದಲ ಬಾರಿಗೆ -1 ಹಾಗೂ ಸ್ವತಂತ್ರ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ ಜೆಡಿಎಸ್ನ ಯಾವುದೆ ಅಭ್ಯರ್ಥಿ ಇದುವರೆಗೂ ನಾಮಪತ್ರ ಸಲ್ಲಿಸುವ ಗೋಜಿಗೆ ಹೋಗಿಲ್ಲ.

ಜಾತ್ರೆಯ ಗದ್ದಲ್ಲದಲ್ಲಿರುವ ತಾಲೂಕಾ ಅಧ್ಯಕ್ಷ ಅನಂತ ಬಿ. ಶಿಮನಗೌಡರನ್ನು ಕೇಳಿದಾಗ ಶನಿವಾರ ಕೊನೆ ದಿನ ಎಲ್ಲ 20 ವಾರ್ಡಗಳಿಗೆ ಅಭ್ಯರ್ಥಿಗಳನ್ನು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ವಾರ್ಡ-1 ಕ್ಕೆ ಶಿವಾಜಿ ನರಸಾನಿ (ಬಿಜೆಪಿ), ಶಿವಾಜಿ ಜಾಧವ, ಶಂಕರ ನಿಂಗಪ್ಪ ಬೆಳಗಾವಕರ ಇಬ್ಬರೂ ಪಕ್ಷೇತರು. ವಾರ್ಡ-3 ಯಲ್ಲಪ್ಪ ಸಾಗಿಕೊಪ್ಪ ಕಾಂಗ್ರೆಸ್, ಶಂಕರ ಗೌಳಿ (ಸ್ವತಂತ್ರ). ವಾರ್ಡ-4 ಗಾಯತ್ರಿ ನೀಲಕಂಠ ಮಹಾದೇವ, ನಂದಾ ಮಾ ಗೌಡಾ (ಕಾಂ). ವಾರ್ಡ-6 ನಯಾಜ ಅಹ್ಮದ ಹಾಜಿಬೇರಿ (ಸ್ವ). ವಾರ್ಡ-8 ಕಾಲೇದ ಅಹ್ಮದ ದುಸುಗೇಕರ (ಸ್ವ). ವಾರ್ಡ-10 ದುರ್ಗಾಡಿ ನಿಸಾರಅಹ್ಮದ, ಆಸಿಫ್ ಇಂ ಜಂಗುಬಾಯಿ (ಕಾಂ). ವಾರ್ಡ-12 ಪರಶುರಾಮ ಹ. ಹರ್ಲಿ (ಕಾಂ). ವಾರ್ಡ-14 ಬ್ರಗಾಂಜಾ ಮೆನಿನ್ (ಕಾಂ). ವಾರ್ಡ-18 ಮಲ್ಲೇಶಿ ಯಲ್ಲಪ್ಪ ಕೊರವರ (ಸ್ವ). ವಾರ್ಡ-19 ಸಿಕಂದರ ಅಪ್ಪಾಲಾಲ ಮುಲ್ಲಾ (ಸ್ವ).

ಹೀಗೆ ಇದುವರೆಗೂ ಅರ್ಧದಷ್ಟು ಅಂದರೆ 10 ವಾರ್ಡಗಳಿಗೆ ನಾಮ ಪತ್ರಗಳು ಬಂದಿಲ್ಲ. ಫೆ. 23 ಕೊನೆ ದಿನವಾಗಿದ್ದು, ನಾಮ ಪತ್ರ ಸಲ್ಲಿಕೆಯ ಭರಾಟೆ ನಡೆಯಲಿದೆ.

loading...

LEAVE A REPLY

Please enter your comment!
Please enter your name here