ಕೆಜೆಪಿ ಸೇರ್ಪಡೆಯಾದ ಯಡ್ಡಿ ಬೆಂಬಲಿಗರ ದಂಡು

0
11
loading...

ಬೆಂಗಳೂರು, ಜ.31: ಬಿಜೆಪಿಗೆ ಗುಡ್ಬೈ ಹೇಳಿರುವ ಮಾಜಿ ಸಚಿವರಾದ ಶೋಭಾಕರಂದ್ಲಾಜೆ- ಸಿ.ಎಂ.ಉದಾಸಿ ಸೇರಿದಂತೆ 13 ಮಾಜಿ ಶಾಸಕರು ವಿದ್ಯುಕ್ತವಾಗಿ ಕರ್ನಾಟಕ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಕೆಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಸಿ.ಎಂ.ಉದಾಸಿ, ಶೋಭಾಕರಂದ್ಲಾಜೆ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡುವ ಮೂಲಕ ಕೆಜೆಪಿಗೆ ಬರ ಮಾಡಿಕೊಂಡರು.

ಇದೇ ವೇಳೆ ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಬಿ.ಪಿ.ಹರೀಶ್, ವಿಠ್ಠಲ ಕಠಕದೊಂಡ (ರಾಜೀನಾಮೆ ಅಂಗೀಕಾರವಾಗಿಲ್ಲ), ಜಿ.ಶಿವಣ್ಣ, ನೆಹರೂಓಲೇಕಾರ್ ಕೆಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.

ಮಾಜಿ ಶಾಸಕರಾದ ಬಸವರಾಜಪಾಟೀಲ್ಅಟ್ಟೂರು, ಚಂದ್ರಣ್ಣ, ಚಿಕ್ಕನಗೌಡರ್, ತಿಪ್ಪೇಸ್ವಾಮಿ ಅವರುಗಳು ಈಗಾಗಲೇ ಕೆಜೆಪಿಯ ಸದಸ್ಯತ್ವ ಪಡೆದು­ಕೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿಗಳಾದ ಬಾಬುರಾವ್ ಮುಡುಬಿ, ಗಂಗಾಧರಯ್ಯ ಹಾಗೂ ಹಿರಿಯ ವಕೀಲ ಶ್ರೀನಿವಾಸಬಾಬು ಅವರು ಕೆಜೆಪಿಗೆ ಸೇರ್ಪಡೆಯಾದರು.

 

loading...

LEAVE A REPLY

Please enter your comment!
Please enter your name here