ಕ್ಯಾನ್ಸರ್ಗೆ ವಿಕಿರಣ ಚಿಕಿತ್ಸೆ ಆರಂಭ

0
40
loading...

ಬೆಂಗಳೂರು, ಫೆ.23-ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿರುವವರು ಇನ್ನು ಮುಂದೆ ಚಿಕಿತ್ಸೆಯೇ ಇಲ್ಲವೆಂದು ಆತಂಕ ಪಡಬೇಕಾಗಿಲ್ಲ…!

ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಬಿಜಿಎಸ್ ಗ್ಲೌಬಲ್ ಆಸ್ಪತ್ರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಶ್ವಾಸಕೋಶದ ಕ್ಯಾನ್ಸರನ್ನು ವಿಕಿರಣ ಚಿಕಿತ್ಸೆ ಮೂಲಕ ಗುಣಪಡಿಸುವ ಚಿಕಿತ್ಸಾ ವಿಧಾನ ಪ್ರಾರಂಭಿಸಲಾಗಿದೆ.

4ನೇ ಹಂತದಲ್ಲಿರುವ ಶ್ವಾಸಕೋಶ ಕ್ಯಾನ್ಸರನ್ನು ಎಫ್ಎಫ್ಎಫ್ ವಿಕಿರಣ ಚಿಕಿತ್ಸೆ ಮೂಲಕ ಗುಣಪಡಿಸಲಾಗುತ್ತದೆ. ಕೇವಲ 2 ನಿಮಿಷಗಳ ಅವಧಿಯಲ್ಲಿ ಈ ವಿಕಿರಣ ಚಿಕಿತ್ಸೆ ನೀಡುವ ಅತ್ಯಾಧುನಿಕ ಟ್ರ್ಯುವ್ ಭೀಮ್ ಎಸ್ಟಿಎಕ್ಸ್ ಯಂತ್ರವನ್ನು ಬಿಜಿಎಸ್ ಗ್ಲೌಬಲ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದು ಇದರ ಮೂಲಕ ಶ್ವಾಸಕೋಶ ಕ್ಯಾನ್ಸರನ್ನು ಗುಣಪಡಿಸಲು ಸಾಧ್ಯವಾಗಿದೆ.

ಬಿಜಿಎಸ್ ಗ್ಲೌಬಲ್ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ಬಿಜಿಎಸ್ ಗ್ಲೌಬಲ್ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಈ ವಿಧಾನದ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಇದರಿಂದ ಯಶಸ್ವಿಯೂ ಆಗಿದ್ದೇವೆ ಎಂದು ಹೇಳಿದರು.

ಗುಣಮಟ್ಟದ ಹಾಗೂ ಪರಿಣಾಮಕಾರಿ ಚಿಕಿತ್ಸೆ ವಿಕಿರಣ ಚಿಕಿತ್ಸೆಯಿಂದ ದೊರೆಯಲಿದೆ. ಅದೂ ಬಹಳ ಕಡಿಮೆ ಅವಧಿಯಲ್ಲಿ ಫಲ ನೀಡುವುದರಿಂದ ರೋಗಿಗಳಿಗೆ ಲಾಭವಾಗಲಿದೆ. ಕ್ಷಿಪ್ರ ಹಾಗೂ ನೋವು ರಹಿತವಾಗಿರುವುದು ಈ ಚಿಕಿತ್ಸಾ ವಿಧಾನದ ವಿಶೇಷ ಎಂದು ತಿಳಿಸಿದರು.

ಶ್ವಾಸಕೋಶದ ಕ್ಯಾನ್ಸರ್, ಪಿತ್ತಜನಕಾಂಗ ಮತ್ತು ಪ್ರೋ ಕ್ಯಾನ್ಸರ್, ಪದೇ ಪದೇ ಕಾಣಿಸಿಕೊಳ್ಳುವ ಗಡ್ಡೆಗಳ ಶಸ್ತ್ತ್ರ ಚಿಕಿತ್ಸೆ ಬದಲಿಗೆ ಈ ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ ಎಂದು ಹೇಳಿದರು.

ಮೆದುಳಿನ ಗಡ್ಡೆ, ಸೂಕ್ಷ್ಮವಾದಂತಹ ರಕ್ತನಾಳದ ಕಾರ್ಯರೂಪಗಳು ಮೆದುಳಿನ ಪ್ರಮುಖ ನರಗಳ ಮೇಲಿನ ಗಡ್ಡೆಗಳು ಮುಂತಾದವುಗಳಲ್ಲೂ ಈ ಚಿಕಿತ್ಸೆಯನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.

ತೀವ್ರತರವಾದ ಶ್ವಾಸಕೋಶದ ತೊಂದರೆಗೆ ಒಳಗಾಗಿದ್ದ 28 ವರ್ಷದ ಕೃಷ್ಣ ಅವರಿಗೆ ಈ ವಿಕಿರಣ ಚಿಕಿತ್ಸೆ ನೀಡಿ ಕ್ಯಾನ್ಸರನ್ನು ಗುಣಪಡಿಸಲಾಗಿದೆ. ಹಾಗೆಯೇ ಎರಡೂ ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ಇದ್ದ 50 ವರ್ಷದ ಪುರುಷರೊಬ್ಬರಿಗೂ ಈ ವಿಕಿರಣ ಚಿಕಿತ್ಸೆ ಮೂಲಕ ಕ್ಯಾನ್ಸರ್ ಗುಣಪಡಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ರೋಗಿ ಕೃಷ್ಣ ಮಾತನಾಡಿ ನಾನು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದೆ, ಶ್ವಾಸಕೋಶದ ಅರ್ಧಭಾಗವನ್ನು ಗಡ್ಡೆ ಆವರಿಸಿಕೊಂಡಿತ್ತು. ನಾನು ಬಿಜಿಎಸ್ ಗ್ಲೌಬಲ್ ಆಸ್ಪತ್ರೆಗೆ ಬಂದು ತೋರಿಸಿಕೊಂಡೆ. ಇಲ್ಲಿ 6 ವಾರಗಳ ಚಿಕಿತ್ಸೆ ನೀಡಿದರು. ವಿಕಿರಣ ಚಿಕಿತ್ಸೆ ಮೂಲಕ ನನ್ನ ಕ್ಯಾನ್ಸರನ್ನು ವೈದ್ಯರು ಗುಣಪಡಿಸಿದ್ದಾರೆ. ನಾನೀಗ ಆರಾಮವಾಗಿದ್ದೇನೆ. ನನಗೆ ಯಾವುದೇ ನೋವಿಲ್ಲ ಎಂದು ಮಾಧ್ಯಮದವರ ಮುಂದೆ ಸಂತಸ ವ್ಯಕ್ತಪಡಿಸಿ, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಬಿಜಿಎಸ್ ಗ್ಲೌಬಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಹಲವು ವಿಧದ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಜೀವ ಉಳಿಸಲಾಗಿದೆ. ವಿಶ್ವದ ಅತ್ಯಂತ ಉನ್ನತ ತಂತ್ರಜ್ಞಾನದ ಯಂತ್ರ ಇಲ್ಲಿದೆ . ಹಾಗಾಗಿ ಕ್ಯಾನ್ಸರ್ ರೋಗಿಗಳು ನಿರಾಶರಾಗಬೇಕಿಲ್ಲ.

ಮುಖ್ಯ ವಿಕಿರಣ ಕ್ಯಾನ್ಸರ್ ರೋಗ ತಜ್ಞೆ ಡಾ.ಎಸ್.ನಿರ್ಮಲಾ ಅವರು ಮಾತನಾಡಿ, ನಾಲ್ಕನೇ ಹಂತ ತಲುಪಿದ್ದರೂ ಕ್ಯಾನ್ಸರ್ರೋಗಿಗಳು ಭರವಸೆ ಕಳೆದುಕೊಳ್ಳಬಾರದು. ವಿಕಿರಣದ ಮೂಲಕ ಯಶಸ್ವಿ ಚಿಕಿತ್ಸೆ ಸಾಧ್ಯವಿದೆ. ಕ್ಯಾನ್ಸರ್ ಗುಣವಾಗಲಿದೆ. ಭಯಪಡಬಾರದು ಹಾಗೂ ನಿರಾಶರಾಗಬಾರದು ಎಂದು ಮನವಿ ಮಾಡಿದರು.

ಶ್ವಾಸಕೋಶ ಕ್ಯಾನ್ಸರ್ ಇರುವುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಇದು ನಿಧಾನವಾಗಿ ತಿಳಿದುಬರುತ್ತದೆ. ಈ ರೋಗಕ್ಕೆ ಚಿಕಿತ್ಸೆಯೂ ಇರಲಿಲ್ಲ. ಈಗ ಬಿಜಿಎಸ್ ಗ್ಲೌಬಲ್ ಆಸ್ಪತ್ರೆಯಲ್ಲಿ ವಿಕಿರಣ ಚಿಕಿತ್ಸೆ ಮೂಲಕ ಶ್ವಾಸಕೋಶ ಕ್ಯಾನ್ಸರನ್ನು ಗುಣಪಡಿಸಬಹುದಾಗಿದೆ. ಇದು ಹೆಚ್ಚಿನ ಫಲ ನೀಡಿದೆ ಎಂದು ಹೇಳಿದರು.

 

loading...

LEAVE A REPLY

Please enter your comment!
Please enter your name here