ಗಂಗಾಮತಸ್ಥರ ರಾಜ್ಯಮಟ್ಟದ ಸ್ವಾಭಿಮಾನಿ ಸಮಾವೇಶ ಮುಂದೂಡಿಕೆ

0
9
loading...

ಹಾನಗಲ್ಲ: ಹಾನಗಲ್ಲಿನಲ್ಲಿ ಫೆ 14 ರಂದು ನಡೆಯಲಿದ್ದ ಗಂಗಾಮತಸ್ಥರ ರಾಜ್ಯಮಟ್ಟದ  ಸ್ವಾಭಿಮಾನಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಸಮಾಜದ ರಾಜ್ಯ ಅಧ್ಯಕ್ಷ ಬಿ.ಕೆ.ಮೋಹನಕುಮಾರ ಸೋಮವಾರ ಸಂಜೆ ನಡೆಸಿದ ಸುದ್ದಿಗೊಷ್ಠಿಯಲ್ಲಿ ಪ್ರಕಟಿಸಿದರು.

ಸಮಾಜದ ರಾಜ್ಯ ಸಮಾವೇಶದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಸಮಾಜದ ಹಿರಿಯರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಸಮಾವೇಶದ ದಿನಾಂಕವನ್ನು ನಿಗದಿಗೊಳಿಸಲಾಗುವುದು ಎಂದೂ ಅವರು ಸ್ಪಷ್ಠಪಡಿಸಿದರು. ಆದರೆ ಚೌಡಯ್ಯದಾನಪುರದಿಂದ ಹೊರಟಿರುವ ರಥಯಾತ್ರೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪೂರ್ವ ನಿಗದಿಯಂತೆ ಫೆ 14 ರಂದು ರಥಯಾತ್ರೆ ಹಾನಗಲ್ಲಿಗೆ ತಲುಪಲಿದ್ದು, ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಪನ್ನಗೊಳ್ಳಲಿದೆ. ಈಗಾಗಲೆ ರಥಯಾತ್ರೆ ಹಾನಗಲ್ಲ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಗುರುವಾರ ಹಾನಗಲ್ಲ ನಗರ ಪ್ರವೇಶಿಸಲಿದೆ. ಅಂದು ಪೂರ್ಣಕುಂಭದೊಂದಿಗೆ ರಥವನ್ನು ಸ್ವಾಗತಿಸಲಾಗುವುದು. ಮೆರವಣಿಗೆಯಲ್ಲಿ ದೊಳ್ಳುಕುಣಿತ, ಕರಡಿಮಜಲು, ಭಜನೆ, ವಿವಿಧ ಕಲಾತಂಡಗಳಿಂದ ಕಲಾಪ್ರದರ್ಶನಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದ ಮೋಹನಕುಮಾರ ಸಮಾಜ ಜಾಗೃತಿಗಾಗಿ ರಥಯಾತ್ರೆ ನಡೆಸಲಾಗುತ್ತಿದ್ದು,ಎಲ್ಲೆಡೆ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ರಥಯಾತ್ರೆ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು.

ರಾಜ್ಯಾದ್ಯಂತ ಸಮಾಜ ಬಾಂಧವರು ಹಾನಗಲ್ಲಿನಲ್ಲಿ ಸಂಪನ್ನಗೊಳ್ಳುವ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸಮಾಜ ಬಾಂಧವರೊಡನೆ ಚರ್ಚಿಸಿ ಇದರ ಸಮಾರೋಪ ಸಮಾರಂಭವನ್ನು ನಿರ್ಧರಿಸಲಾಗುವುದು ಎಂದು ಮೋಹನಕುಮಾರ ತಿಳಿಸಿದರು.

loading...

LEAVE A REPLY

Please enter your comment!
Please enter your name here