ಗೋ ಸಂರಕ್ಷಣಾ ಯಾತ್ರೆ ಆರಂಭ

0
45
loading...

ಚಿಕ್ಕೌಡಿ 18: ನೆರೆಯ ಮಹಾರಾಷ್ಟ್ತ್ರದ ಕೊಲ್ಲಾಪೂರ ಸಮೀಪದ ಕನೇರಿಯ ಸಿದ್ದಗಿರಿ ಮಠದಿಂದ ದೇಶಿ ಗೋ ತಳಿ ಸಂರಕ್ಷಣೆಗಾಗಿ ಇದೇ 16 ರಿಂದ 22ರವರೆಗೆ ಗೋ ಸಂರಕ್ಷಣಾ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಕನೇರಿಯ ಸಿದ್ದಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ 140 ಕೋಟಿಯಷ್ಟಿದ್ದ ದೇಶಿ ಹಸುಗಳ ಸಂಖ್ಯೆ ಇಂದು 7 ರಿಂದ 8 ಕೋಟಿಗೆ ಕುಸಿದಿದೆ. ದಿನವೂ 3 ರಿಂದ 4 ಲಕ್ಷ ಗೋವುಗಳು ಕಸಾಯಿಖಾನೆಗೆ ಸರಬರಾಜು ಆಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಮಧೇನು ಎಂದೇ ಪೂಜಿಸಲಾಗುವ ದೇಸಿಯ ಹಸುಗಳ ಸಂರಕ್ಷಣೆ ಅಗತ್ಯವಾಗಿದೆ. ಸಿದ್ದಗಿರಿ ಮಠದ ಗೋಶಾಲೆಯಲ್ಲಿ ದೇವನಿ, ಖಿಲಾರಿ, ಮಲೆನಾಡಗಿಡ್ಡ, ಲಾಲ ಕಂದಾರಿ, ಅಮೃತ ಮಹಲ್, ಸಾಹಿವಾಲ್, ಕಾಂಕ್ರಿಜ್, ಥಾರಪಾರ್ಕರ್ ಸೇರಿದಂತೆ 13 ತಳಿಗಳ 300ಕ್ಕೂ ಹೆಚ್ಚು ದೇಸಿ ಹಸು ಮತ್ತು ಹೋರಿಗಳನ್ನು ಸಾಕಲಾಗಿದೆ ಎಂದು ಹೇಳಿದರು. ದೇಸಿ ಹಸುಗಳು ಹೆಚ್ಚಾಗಿ ಹಾಲು ಕರೆಯದೇ ಇದ್ದರೂ ಅವುಗಳಿಂದ ಪರಿಸರ, ಮಾನವನ ಆರೋಗ್ಯಕ್ಕೆ ತುಂಬಾ ಉಪಯುಕ್ತವಿದೆ. ಹಸುವಿನ ಹಾಲಿನ ಉಪ ಉತ್ಪನ್ನಗಳಿಂದ ಸಾಕಷ್ಟು ಲಾಭ ಗಳಿಸಬಹುದಾಗಿದೆ ಎಂದು ಹೇಳಿದರು.

ಶ್ರೀಮಠದಲ್ಲಿ ಗೋ ಆಧಾರಿತ 15ಕ್ಕೂ ಹೆಚ್ಚು ಉತ್ಪನ್ನಗಳ ಘಟಕಗಳನ್ನು ಆರಂಭಿಸಲಾಗಿದೆ. ತುಪ್ಪ ಕೆಜಿಯೊಂದಕ್ಕೆ 1500 ರೂ, ಗಳಿಗೆ ಮಾರಾಟವಾಗುತ್ತದೆ ಎಂದು ಹೇಳಿದರು. ದೇಶಿ ಗೋ ತಳಿ ಸಂರಕ್ಷಣೆಗಾಗಿ ಶ್ರೀಮಠವು ಆಸಕ್ತರಿಗೆ ಉಚಿತವಾಗಿ ಹಸುಗಳನ್ನು ವಿತರಿಸುತ್ತದೆ ಎಂದು ಹೇಳಿದರು.

ದೇಸಿ ಗೋ ತಳಿ ಸಂರಕ್ಷಣೆಗಾಗಿ ಗೋ ಸಂರಕ್ಷಣಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಾಗೂ 23 ಮತ್ತು 24 ನೇ ತಾರೀಖಿನಂದು ದೇಸಿ ಗೋವುಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಜವಾರಿ ಖಿಲಾರಿ, ಕಾಜಳಿ ಖಿಲಾರ, ಕೋಶಿ ಖಿಲಾರ, ದೇವನಿ, ಕೋಂಕಣ ಗಿಡ್ಡ, ಗಿರ್, ಲಾಲ್ ಕಂದಾರಿ, ಕಾಂಕ್ರಿಜ್, ಸಾಹಿವಾಲ್, ಡಾಂಗಿ, ಹಳ್ಳಿಕಾರ, ಅಮೃತ ಮಹಲ್, ಥಾರ ಪಾರ್ಕರ್ ತಳಿಯ ಗೋವುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಪ್ರತಿ ತಳಿಯಲ್ಲಿ 10 ಹಸುಗಳು ಪಾಲ್ಗುಂಡರೆ ಮಾತ್ರ ಆಯಾ ತಳಿಯ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯ ಪ್ರತಿ ತಳಿಯಲ್ಲಿ 5 ವಿಭಾಗಗಳಲ್ಲಿ ನಡೆಯಲಿದ್ದು, ಹಲ್ಲು ಹಚ್ಚದ, ಎರಡು ಹಲ್ಲು ಹಚ್ಚಿದ, ನಾಲ್ಕು ಹಲ್ಲು ಹಚ್ಚಿದ, ಆರು ಹಲ್ಲು ಹಚ್ಚಿದ ಮತ್ತು ಬಾಯ್ಗೂಡಿದ ಹೀಗೆ 5 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 7 ಸಾವಿರ ರೂ, ದ್ವಿತೀಯ 5 ಸಾವಿರ ರೂ., ತೃತೀಯ 3 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಈ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಹಸುವಿಗೆ ಲಿಕಾಮಧೇನುಳಿ ಪ್ರಶಸ್ತಿಯೊಂದಿಗೆ 51 ಸಾವಿರ ರೂ.ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

loading...

LEAVE A REPLY

Please enter your comment!
Please enter your name here