ಚಿಂಚಲಿ ಮಾಯಕ್ಕಾದೇವಿಯ ಜಾತ್ರೆ

0
32
loading...

ಉತ್ತರ  ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ತ್ರದ ಪ್ರಸಿದ್ಧ ಶಕ್ತಿ ದೇವತೆ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಯ ಬೃಹತ್ ಜಾತ್ರೆ ಫೇ, ದಿ: 25 ರಿಂದ ಆರಂಭಗೊಂಡು 15 ದಿನಗಳ ಕಾಲ ನಡೆಯಲಿದ್ದು, ಮಾರ್ಚ 1ರಂದು ಮಹಾನೈವೇದ್ಯ ಜರುಗಲಿದ್ದು, ತನ್ನಮಿತ್ತ ಲೇಖನ.

                                                                – ಕೆ.ಮಂಜುನಾಥ

                ಚಿಂಚಲಿ (ರಾಯಬಾಗ) : ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾ ದೇವಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ತ್ರದ ಅತ್ಯಂತ ಪ್ರಖ್ಯಾತ ಶಕ್ತಿ ದೇವತೆ. ಈ ಭಾಗದಲ್ಲಿ ದೇವಿಯ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ರಾಯಬಾಗ ತಾಲೂಕಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಚಿಂಚಲಿ ಕ್ಷೇತ್ರ ಗಡಿಭಾಗದಲ್ಲಿಯ ಅತ್ಯಂತ ಜಾಗೃತ ಸ್ಥಳ.

ಜನಮಾಸದಲ್ಲಿ  ಇಂದಿಗೂ ಅಚ್ಚಳಿಯದ ಪ್ರಭಾವ ಉಳಿಸಿಕೊಂಡ ಈ ಶಕ್ತಿ ದೇವತೆಯನ್ನು ಮಾಯಕ್ಕಾ, ಮಹಾಕಾಳಿ, ಮಾಯಕಾರತಿ, ಮಾಯವ್ವಾ ಎಂಬೆಲ್ಲಾ ಹೆಸರಿನಿಂದ ದೇವಿಯೂ ಪೂಜಿಸಲ್ಪಡುತ್ತಾಳೆ.

ಭಾರತೀಯ ಸಂಸ್ಕ್ಕತಿಯಲ್ಲಿ ಸ್ತ್ತ್ರೀಯರಿಗೆ ಖಚಿತ ಹಾಗೂ ಗೌರವ ಪೂರ್ಣ ಸ್ಥಾನ ಇದೆ. ಅನೇಕ ಸ್ತ್ತ್ರೀಯರು ಗಂಡನೊಂದಿಗೆ ಸತಿಹೋದರು. ಕೆಲವರು ರಣರಂಗದಲ್ಲಿ ಹೋರಾಡಿ, ವೀರಮರಣ ಹೊಂದಿದರು. ವ್ಯಕ್ತಿಗತ ಸುತ್ತ ಹರಡಿಕೊಂಡಿರುವ ಐತಿಹ್ಯ ಹಾಗೂ ಸ್ಥಳ ಮಹಿಮೆಗಳಿಂದ ಕೆಲವು ದೇವತೆಗಳು ಹುಟ್ಟಿಕೊಂಡವು. ವೀರಪುರುಷ, ಚಾರಿತ್ರಿಕ ವ್ಯಕ್ತಿ, ಪವಾಡ ಪುರುಷ, ಮಹಾತ್ಮಾ ಹೀಗೆ ವಿವಿಧ ಹಿನ್ನಲೆಯಲ್ಲಿ ಗ್ರಾಮ ದೇವತೆಗಳು ಜನ್ಮತಳೆದವು. ಜನರಿಗಾಗುವ ತೊಂದರೆ ನಿವಾರಣೆಗಾಗಿ ಹಲವಾರು ದೇವತೆಗಳು ಹುಟ್ಟಿಕೊಂಡವು. ಹೀಗೆ ಹುಟ್ಟಿಕೊಂಡ ಗ್ರಾಮ ದೇವತೆಗಳಲ್ಲಿ ಚಿಂಚಲಿ ಮಾಯಕ್ಕಾ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವ ಉಳಿಸಿಕೊಂಡು ಬಂದಿದ್ದಾಳೆ.

ಐತಿಹಾಸಿಕ ಹಿನ್ನಲೆ : ಕ್ರಿ.ಶ. 1881 ರ ದಾಖಲೆಗಳ ಪ್ರಕಾರ ಮಾಯಕ್ಕಾ ದೇವಿಯ ಮೂಲಸ್ಥಳ ಮಹಾರಾಷ್ಟ್ತ್ರದ ಮಾನದೇಶ (ಕೊಂಕಣ) ಎಂದು ಹೇಳಲಾಗುತ್ತದೆ. ಮಾಯಕ್ಕಾ ಮಾನದೇಶದಿಂದ ಲೀಕೀಲ ಮತ್ತು ಕಟ್ಟಳಿ ಎಂಬ ಇಬ್ಬರು ರಾಕ್ಷಸರನ್ನು ಬೆನ್ನಟ್ಟಿಕೊಂಡು ಚಿಂಚಲಿಗೆ ಬಂದು ಸಂಹಾರ ಮಾಡಿದಳೆಂಬ ಐತಿಹ್ಯವಿದೆ. ರಾಕ್ಷಸರ ಸಂಹಾರದ ನಂತರ ಮಾಯಕ್ಕಾ ಇಲ್ಲಿಯೇ ನೆಲೆಯೂರಿ ನಿಂತಳೆಂದು ದಾಖಲೆಗಳಿಂದ ತಿಳಿದು ಬರುತ್ತದೆ.

ದೇವಿಯ ಲಿನೆಲೆಳಿ ಕುರಿತು ಒಂದು ಐತಿಹ್ಯವಿದೆ. ದೇವಿಯ ನೆಲೆಗಾಗಿ ಚಿಂಚಲಿಯಲ್ಲಿ ಕ್ಯಾರಿಪೊಪ್ಪ, ಎಡಿಮಾಯವ್ವಾ, ಕರಗುತ್ತಿ, ಬಂಗಾರಗಿಡ ಮೊದಲಾದ ಕಡೆ ಅಲೆದಳೆಂದು ಕೊನೆಗೆ ಇಲ್ಲಿಯ ದೊಡ್ಡಹಾಳು ಮಣ್ಣಿನ ದಿಣ್ಣೆ ಇರುವ ಸ್ಥಳದಲ್ಲಿ ಹಿರಿದೇವಿ ಗುಡಿ ಇತ್ತಂತ್ತೆ. ಹಿರಿದೇವಿ ಬಳಿ ಬಂದು ತನಗೆ ಆಶ್ರಾಯ ನೀಡುವಂತೆ ಮಾಯಕ್ಕಾ ಕೇಳಿಕೊಂಡಾಗ, ಹಿರಿದೇವಿಯು ಆಗ ಶಿಭಕ್ತರಿಂದ ಮೊದಲ ಮಾನ ನನಗೆ ಸಿಗಬೇಕು, ಭಕ್ತರ ಮೊದಲ ದರ್ಶನ ನನ್ನದೇ ಆಗಬೇಕುಷಿ ಎಂಬ ಕರಾರುಗಳೊಂದಿಗೆ ಮಾಯಕ್ಕನಿಗೆ ಚಿಂಚಲಿಯಲ್ಲಿ ಆಶ್ರಯ ನೀಡಿದಳೆಂಬ ಇತಿಹಾಸವಿದೆ. ಇಂದಿಗೂ ಮೊದಲು ಹಿರಿದೇವಿಯ ದರ್ಶನವಾಗಿ, ನೈವೇದ್ಯ ಸಲ್ಲಿಸಿದ ನಂತರವೇ ಮಾಯಕ್ಕನಿಗೆ ಪೂಜಿಸಲ್ಲಿಸುವ ವಾಡಿಕೆ ಇದೆ.

ಪವಾಡ ಸದೃಶ ಘಟನೆಗಳು : ಮಾಯಕ್ಕಾ ಒಂದು ದಿನ ಚಿಂಚಲಿ ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋಗಿದ್ದಳಂತೆ ಆ ಸಂದರ್ಭದಲ್ಲಿ ಅಲ್ಲಿ ಕುರಿ ಕಾಯುತ್ತಿದ್ದ ಕುರುಬನ ಬಳಿ ಸ್ವಲ್ಪ ಹಾಲುಬೇಕೆಂದು ಕೇಳಿಕೊಂಡಳಂತೆ. ಆ ಕಾರಣ ಹಾಲು ಕೊಡಲು ನಿರಾಕರಿಸಿದಾಗ, ಅವಳು ತನ್ನ ಶಕ್ತಿಯಿಂದ ಹಳ್ಳವೆಲ್ಲವೂ ಹಾಲಾಗಿ, ಹರಿಯಲಿ ಎಂದಳಂತೆ. ಆಗ ಹಳ್ಳವೆಲ್ಲ ಹಾಲಾಗಿ, ತುಂಬಿ, ಹರಿಯಿತೆಂಬ ಪವಾಡವಿದೆ. ಅದಕ್ಕಾಗಿ ಇಂದಿಗೂ ದೇವಿಯ ಲಕ್ಷಾವದಿ ಭಕ್ತರು ಈ ಹಾಲಹಳ್ಳದಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ ಮಾಡುತ್ತಿರುವುದುಂಟು.

ಇದೇ ಹಾಲಹಳ್ಳದ ಪಕ್ಕದಲ್ಲಿ  ಕುರಿ ಕಾಯುತ್ತಿದ್ದ ಕುರುಬರಲ್ಲಿ   ಕುರಿಯ ಉಣ್ಣೆ ಕೊಡುವಂತೆ ಕೇಳಿದಾಗ, ಅವರು ಕೊಟ್ಟಿಲ್ಲ. ಆಗ ಸಿಟ್ಟಿನಿಂದ ದೇವಿಯು ಲಿಕುರಿಗಳೆಲ್ಲವೂ ಕಲ್ಲಾಗಲಿಳಿ ಎಂದು ಶಪಿಸಿದಳಂತೆ. ಹೀಗಾಗಿ ಕುರಿಗಳೆಲ್ಲಾ ಕಲ್ಲಾಗಿ ಬಿದ್ದವು. ಹಾಲ ಹಳ್ಳದ ದಡದಲ್ಲಿ ಗುಂಪಾಗಿ ಬಿದ್ದಿರುವ ಕಲ್ಲುಗಳನ್ನು ಲಿಉಣ್ಣೆ ಮುತ್ತಪ್ಪನ ಕಲ್ಲುಳಿ ಎಂಬ ನಾಮದಿಂದ ಕರೆಯುವುದುಂಟು.

ಮಾಯಕ್ಕನ ಕುದುರೆ : ದೇವಿಯ ಮುಖ್ಯ ವಾಹನ ಕುದುರೆ. ಅವಳ ವಿಗ್ರಹಗಳು, ಪಲ್ಲಕ್ಕಿ ಉತ್ಸವ ಮೂರ್ತಿ ಇವೆಲ್ಲವೂ ಅಶ್ವಾರೂಢವಾಗಿರುವುದು. ಮಾಯಕ್ಕನ ಕುದುರೆಗೆ ಆಕೆಯೊಂದಿಗೆ ಇಂದಿಗೂ ವಿಶಿಷ್ಟ ಮಹತ್ವ ನೀಡಲಾಗಿದೆ. ಸದ್ಯ ಮಾಯಕ್ಕಾ ದೇವಿಯ ಕುದುರೆ ಮೂರ್ತಿ ಇದ್ದು, ಭಕ್ತರು ಅದರ ಹಣೆಯ ಮೇಲೆ ಭಂಡಾರ ಲೇಪಿಸಿ, ತಮ್ಮ ಹಣೆಗೂ ಲೇಪಿಸಿಕೊಳ್ಳುವುದು ವಾಡಿಕೆ.

ದೇವಸ್ಥಾನದ ಜೀರ್ಣೊದ್ದಾರ : ಮಾಯಕ್ಕಾ ದೇವಿಯ ದೇವಸ್ಥಾನ ಇಂದಿನ ಈ ಮಟ್ಟಕ್ಕೆ ಬೆಳೆದು ತಲುಪಲು ಯಾವುದೇ ರಾಜ ಮನೆತನದ ಹಿನ್ನಲೆ ಕಂಡು ಬಂದಿಲ್ಲ. ಆದರೆ ಗ್ರಾಮದ ಹಿರಿಯರೇ ದೇವಾಲಯದ ಜೀರ್ಣೊದ್ದಾರಗಳಿಗೆ ಶ್ರಮಿಸಿದ್ದಾರೆ. ದೇವಿಯ ಆರಾದ್ಯ ಭಕ್ತ ದೇವರಸಿ ಅಜ್ಜಾ ಎಂಬುವರು ಈ ದೇವಸ್ಥಾನದ ಬೆಳವಣಿಗೆಗೆ ಪೂರ್ವದಲ್ಲಿ ಕೆಲಸ ಮಾಡಿದ ಇತಿಹಾಸವಿದೆ. ಅವರ ಕಾಲದಲ್ಲಿಯೇ ಗ್ರಾಮದ ಇನ್ನುಳಿದ ಹಿರಿಯರೊಂದಿಗೆ ಸೇರಿ, ದೇವಸ್ಥಾನದ ನಗಾರಿಖಾನೆ, ಮಂಟಪ, ದೇವಿಯ ಶಿಖರ ಕಟ್ಟಿಸಿದ್ದಾಗಿ ತಿಳಿದು ಬರುತ್ತದೆ. ಇವೆಲ್ಲಾ 1935 ರಲ್ಲಿ ನಿರ್ಮಿತವಾಗಿವೆ.

1988 ರಲ್ಲಿ ದೇವಸ್ಥಾನದ ಟ್ರಸ್ಟ ಸಮಿತಿ ರಚನೆಯಾಗಿದೆ. ದೇವಿಯ ಕಾಣಿಕೆ ಸಂಗ್ರಹ, ಜೀರ್ಣೊದ್ದಾರ, ಭಕ್ತರಿಗೆ ಧರ್ಮಶಾಲೆಗಳ ವ್ಯವಸ್ಥೆ, ನಿರಂತರ ಅನ್ನದಾಸೋಹ ಹೀಗೆ ಹಲವಾರು ವ್ಯವಸ್ಥೆಗಳಲ್ಲದೆ ಅಭಿವೃದ್ದಿ ಹಾಗೂ ಭಕ್ತರ ಹಿತದೃಷ್ಟಿಗೆ ಪೂರಕವೆನಿಸುವ ಈ ಎಲ್ಲ ಯೋಜನೆಗಳನ್ನು ಹಾಕಿಕೊಂಡು ನೀರೀಕ್ಷೆಗೂ ಮೀರಿ ದೇವಸ್ಥಾನದ ಸುಧಾರಣೆಗೈದಿದ್ದಾರೆ.

ಜಾತ್ರೆಯ ಐತಿಹಾಸಿಕ ಸೊಬಗು : ಚಿಂಚಲಿ ಜಾತ್ರೆ ನೋಡಲು ಕರ್ನಾಟಕಕ್ಕಿಂತ ಮಹಾರಾಷ್ಟ್ತ್ರದ ಭಕ್ತರೇ ಹೆಚ್ಚು. ಭಾರತ ಹುಣ್ಣಿಮೆಯಿಂದ ಶಿವರಾತ್ರಿ ಅಮವಾಸ್ಯೆಯ ವರೆಗೆ ಸುಮಾರು 15-20 ದಿನಗಳ ಕಾಲ ಸವದತ್ತಿ ಯಲ್ಲಮ್ಮಾ ದೇವಿ ಜಾತ್ರೆ ನೆನಪಿಸುವಂತೆ ಅಥವಾ ಅದರ ಪ್ರತಿರೂಪವೇ ಎಂಬಂತೆ ಚಿಂಚಲಿ ಮಾಯಕ್ಕಾದೇವಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಗುಡಿಯ ಸುತ್ತ ಸುಮಾರು ಆರೇಳು ಕಿ.ಮೀ. ಪ್ರದೇಶವು ಹಲವಾರು ಲಕ್ಷ ಭಕ್ತ ಸಮೂಹದಿಂದ ಗಿಜಗುಡುತ್ತಿರುತ್ತದೆ.

ಹತ್ತಾರು ಎಕರೆ ಪ್ರದೇಶಗಳಲ್ಲಿ ಕಣ್ಣುಕುಕ್ಕುವಂತಹ ಮೂಡಲ ಹೊರಿಗಳ ಬೃಹತ್ ಮಾರಾಟ, ಅಧಿಕ ಸಂಖ್ಯೆಯಲ್ಲಿ ಜಾನುವಾರಗಳ ಮಾರಾಟವಾಗಿರುವುದು ಇತಿಹಾಸದ ದಾಖಲೆ.

 

 

loading...

LEAVE A REPLY

Please enter your comment!
Please enter your name here