ಜೀವನ ಸಾಧನೆಗೆ ನಿರ್ವಹಣಾ ಕೌಶಲ್ಯಗಳ ಅಗತ್ಯ : ಎಸ್.ಯು.ಜಮಾದಾರ

0
69
loading...

ಮೂಡಲಗಿ, 25-ಮಾನವನ ಜೀವನದ  ಸಾಧನೆಗೆ ನಿರ್ವಹಣಾ ಕೌಶಲ್ಯಗಳ ಅವಶ್ಯಕವಿದೆ. ಇಂದು ಮಾನವ ಭೂಮಿಯ ಮೇಲೆ ತನ್ನದೇಯಾದ  ಪರಾಕ್ರಮ ಕೌಶಲ್ಯದಿಂದ ಜೀವನ ನಿರ್ವಹಣೆ  ಮಾಡುತ್ತಿದ್ದಾನೆ.ಇಂತಹ ಜಗತ್ತಿನಲ್ಲಿ ವೈಜ್ಞಾನಿಕ ಜೀವನದಲ್ಲಿ ಕೌಶಲ್ಯಗಳ ಅರಿವು ಯುವಜನತೆಗೆ ಬೇಕಾಗಿದೆ ಇಲ್ಲ ಸಲ್ಲದ ಚಟಗಳಿಂದ ಯುವಕರು ಹಾಳಾಗುತ್ತಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ಅವಶ್ಯವಿದೆ ಎಂದು ಬೆಳಗಾವಿ ಎನ್.ವಾಯ್.ಕೆ ಸಮನ್ವಯಾಧಿಕಾರಿ ಎಸ್.ಯು.ಜಮಾದಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೋಮವಾರ ಇಲ್ಲಿಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಯುವಜನತೆಗೆ ಜೀವನ ಕೌಶಲ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೌ ಸಂಗಮೇಶ ಗುಜಗೊಂಡ ಮಾತನಾಡಿ, ಯುವಜನತೆ ದಿಕ್ಕುದಶೆಯಿಲ್ಲದ ಜೀವನದ ಗುರಿಗಳನ್ನು ಹೊಂದಿ ಜೀವನದ ಮೌಲ್ಯಗಳನ್ನು ಕಳೆದು ಕೋಳ್ಳುತ್ತಿದ್ದಾರೆ. ಇದರಿಂದ ಸರಿಯಾದ ದಶೆಯಲ್ಲಿ ಜೀವನದ ಕೌಶಲ್ಯಗಳು ಬೆಳೆದು ಬರುತ್ತಿಲ್ಲಾ ವಿಶ್ವದಲ್ಲಿ ಜಪಾನ ದೇಶ ಗುರುತಿಸಲ್ಪಡುವದು ಅಲ್ಲಿನ ಜನರ ಜೀವನ ನಿರ್ವಹಣೆಯ ಕೌಶಲ್ಯಗಳಿಂದ ಅಂತಹ ಕೌಶಲ್ಯಗಳ ತಿಳುವಳಿಕೆ ಜೊತೆಗೆ ಉತ್ತಮ ಆದರ್ಶಗಳನ್ನು ಹೂಂದುವುದು ಅವಶ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪೋ.ಶಶಿಕಾಂತ ದೇಶಪಾಂಡೆ ಮಾತನಾಡಿ, ಉತ್ತಮ ಕೌಶಲ್ಯ ಜೀವನದ ಮೌಲ್ಯವನ್ನು ನಿರ್ದೇಸುತ್ತೆದೆ ಎಂದರು.

ಗೋಕಾಕದ ಪ್ರೊ. ಬಸವರಾಜ ಪಾಟೀಲ ಮಾತನಾಡಿ, ಮಾನವನಿಗೆ ವ್ಯವಹರಿಸುವ ಕೌಶಲ್ಯಗಳ ಅರಿವು ಅವಶ್ಯಕವಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ತಮ್ಮಣ್ಣಾ ಪಾರ್ಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಜಗನ್ನಾಥ ಕೋರಾಡಿ, ಶಿವಾನಂದ ಸತ್ತಿಗೇರಿ, ಸಂಗಮೇಶ ಕುಂಬಾರ, ಪರುಶುರಾಮ ಬೀಸನಕೊಫ್ಪ, ಯಮನಪ್ಪಾ ಹೊಸಮನಿ, ಸಿ.ಸಿ.ಶೆಟ್ಟರ, ಹಣಮಂತ ಕುರಬೇಟ, ಸಂದೀಪ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಿಯಂಕಾ ದೇಶಪಾಂಡೆ ನಿರೂಪಿಸಿದರು. ಹಣಮಂತ ಪಾರ್ಶಿ ಸ್ವಾಗತಿಸಿದರು. ದೀಪಕ ಹಳ್ಳದಮನಿ ವಂದಿಸಿದರು. ಎಸ್.ಯು.ಜಮಾದಾರ ಉದ್ಘಾಟಿಸುತ್ತಿರುವುದು

loading...

LEAVE A REPLY

Please enter your comment!
Please enter your name here