ನಿಸ್ವಾರ್ಥ ಸಮಾಜ ಸೇವೆ ಅಗತ್ಯ

0
14
loading...

ಗೋಕಾಕ ಫೆ, 4 ;- ಹಣಕೊಟ್ಟು ಪ್ರಶಸ್ತಿ ಪಡೆಯುವದಕ್ಕಿಂತ ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಸಾಧನೆ ಮಾಡಿದ್ದೆಯಾದರೆ ಪ್ರಶಸ್ತಿ ತಾನಾಗಿಯೆ ಮನೆ ಬಾಗಿಲಿಗೆ ಬರುತ್ತದೆ ಎಂದು ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ನಗರದ ಐಟಿಐ ಕಾಲೇಜಿನ ಸಭಾಭವನದಲ್ಲಿ ಜನಮೆಚ್ಚಿದ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಬಸವಜ್ಯೌತಿ ಐಟಿಐ ಕಾಲೇಜಿನ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಅವರಿಗೆ ಸೋಮವಾರದಂದು ಏರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಅಶೋಕ ಲಗಮಪ್ಪಗೋಳ ಅವರು ಕಳೆದ 2 ದಶಕಗಳಿಂದ ಹಲವಾರು ಪ್ರಗತಿಪರ ಕಾರ್ಯಗಳನ್ನು ಮಾಡಿದ್ದಾರೆ ಹಾಗೂ ಸಾಮಾಜಿಕವಾಗಿ ನಿಸ್ವಾರ್ಥ ಸೇವೆಗೈದಿದ್ದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದ್ದನ್ನು ಶ್ರೀಗಳು ಪ್ರಶಂಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ನಗರಾಧ್ಯಕ್ಷ ಸಿದ್ದಲಿಂಗ ದಳವಾಯಿ ಮತ್ತು ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ, ರಾಮಚಂದ್ರ ಕಾಕಡೆ ಮಾತನಾಡಿದರು.

ಕೆಂಪಣ್ಣ ಹರಿಜನ, ಜಯಾನಂದ ಮಾದರ, ಮಹಾದೇವ ಮಠಪತಿ, ನಾಮದೇವ ಜುಟ್ಟದವರ, ಜೈನುಲ್ಲಾ ಅಂಕಲಗಿ, ಮಹಾನಿಂಗ ನೀಲಣ್ಣವರ, ಆಶಾರಾಣಿ ನಿಡಸೋಸಿ ಇದ್ದರು.

loading...

LEAVE A REPLY

Please enter your comment!
Please enter your name here