ಬಸ್ ಅಪಘಾತ: 20 ಜನರಿಗೆ ಗಾಯ

0
18
loading...

ರಾಮದುರ್ಗ 4: ಇಲ್ಲಿಂದ ಸುಮಾರು 10 ಕಿ. ಮೀ ದೂರದಲ್ಲಿರುವ ಮುಳ್ಳೂರು ಕಣಿವೆಯಲ್ಲಿ ಭಾನುವಾರ ರಾತ್ರಿ 8-30ಕ್ಕೆ ಚಾಲಕನ ಹತೋಟಿ ತಪ್ಪಿ ಸುಮಾರು 40 ಅಡಿಗಳಷ್ಟು ಕಂದಕಕ್ಕೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ನೆಗೆದು ಸುಮಾರು 20 ಜನರಿಗೆ ಗಾಯಗಳಾಗಿವೆ.

ಅದೃಷ್ಟವಶಾತ್ ಯಾವದೇ ಸಾವು ಸಂಭವಿಸಿಲ್ಲ. ಒಬ್ಬನ ಸ್ಥಿತಿ ಗಂಭೀರವಾಗಿದೆ. ಆತನನ್ನು ಫಕೀರಪ್ಪ ಬಸರಗಿ ಎಂದು ಗುರುತಿಸಲಾಗಿದೆ. ಅವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.

ಮಧ್ಯಾಹ್ನ 3ರ ಸುಮಾರಿಗೆ ಬಿಜಾಪೂರ ನಗರವನ್ನು ಬಿಟ್ಟಿದ್ದ ಬಿಜಾಪೂರ ಹಳಿಯಾಳ ಬಸ್ ರಾತ್ರಿ 11 ಕ್ಕೆ ಹಳಿಯಾಳ ತಲುಪಬೇಕಾಗಿತ್ತು. ಭಾನುವಾರ ಸಂತೆ ದಿನಾವಗಿದ್ದರಿಂದ ಬಸ್ನಲ್ಲಿ ಸುಮಾರು 53ಕ್ಕೂ ಅಧಿಕ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಅಪಘಾತದ ತೀವೃತೆಯನ್ನು ಗಮನಿಸಿದರೆ ಬಸ್ನಲ್ಲಿದ್ದ ಬಹುತೇಕರು ಸಾವನ್ನಪ್ಪಬಹುದಿತ್ತು ಆದರೆ ಎಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವದು ಪವಾಡವೇ ಸರಿ ಎಂದು ಅಪಘಾತ ಸ್ಥಳದಲ್ಲಿದ್ದವರು ತಿಳಿಸಿದರು.

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಬಸ್ ಅಪಘಾತಕ್ಕೊಳಗಾದ ಸಮಯದಲ್ಲಿ ಅದೇ ಮಾರ್ಗವಾಗಿ ಹೊರಟಿದ್ದ ರಾಮದುರ್ಗದ ಶಾಸಕ ಅಶೋಕ ಪಟ್ಟಣ ಅವರು ತುರ್ತು ಚಿಕಿತ್ಸಾ ಘಟಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಮುಳ್ಳೂರ ಕಣಿವೆಯ ಸುಧಾರಣೆಗೆ ಶೀಘ್ರ ಕ್ರಮ ತೆಗೆದುಕೊಳ್ಳುವದಾಗಿ ವರದಿಗಾರರಿಗೆ ತಿಳಿಸಿದರು.

 

loading...

LEAVE A REPLY

Please enter your comment!
Please enter your name here