ಮಹಿಳಾ ಕ್ರಿಕೆಟ್ ಆಸ್ಟ್ತ್ರೇಲಿಯಾ ವನಿತೆಯರು ಬೆಸ್ಟ್

0
16
loading...

ಮುಂಬಯಿ: ಫೆವರಿಟ್ ಆಸ್ಟ್ರೇಲಿಂುು ತಂಡ ವನಿತೆಂುುರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಂುುಲ್ಲಿ 6ನೇ ಬಾರಿಗೆ ಚಾಂಪಿಂುುನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಕ್ರಿಕೆಟ್ನಲ್ಲಿ ತನ್ನ ಪ್ರಭುತ್ವ ಮರಳಿ ಸ್ಥಾಪಿಸಿದೆ.

ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಂುುಗೆ ಸೋಲಿನ ರುಚಿ ತೋರಿಸಿದ್ದ ವೆಸ್ಟ್ ಇಂಡೀಸ್ ತಂಡ ಪೈನಲ್ನಲ್ಲಿ ಎಡವಿ 114 ರನ್ಗಳ ಬಾರೀ ಅಂತರದಿಂದ ಮಣ್ಣುಮುಕ್ಕಿತು. ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಹೊಂದಿದೆ ವಿಂಡೀಸ್ ವನಿತೆಂುುರು ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಂುುುವ ಅವಕಾಶವನ್ನು ಕಳೆದುಕೊಂಡರು.

ಬ್ರೆಬೋರ್ನ ಕ್ರೀಡಾಂಗಣದಲ್ಲಿ ನಡೆದ ಪೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಂುು ತಂಡ ಜೆಸ್ ಕ್ಯಾಮರಾನ್ ಸಿಡಿಸಿದ 75 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ಗೆ 259 ರನ್ನುಗಳ ಉತ್ತಮ ಮೊತ್ತ ಸಂಪಾದಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ವೆಸ್ಟ್ ಇಂಡೀಸ್ ಮದ್ಯಮ ವೇಗಿ ಎಲಿಸ್ ಪೆರ್ರಿ ದಾಳಿಗೆ ತತ್ತರಿಸಿ 43.1 ಓವರ್ಗಳಲ್ಲಿ 145 ರನ್ಗಳಿಗೆ ಗಂಟುಮೂಟೆ ಕಟ್ಟಿತು.

ವೆಸ್ಟ್ ಇಂಡೀಸ್ ತಂಡದ ಮೂವರೂ ಅಗ್ರ ಕ್ರಮಾಂಕದ ಬ್ಯಾಟ್ಸಮನ್ಗಳನ್ನು ಅಲ್ಪ ಮೊತ್ತಕ್ಕೆ ಪೆರ್ರಿ ಕಟ್ಟಿ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಕೈಶೊನಾ ನೈಟ್ (21), ನಾಂುುಕಿ ಮೆರಿಸ್ಸಾ ಅಗುಲಿರಾ (23) ಮತ್ತು ಡೊಟಿನ್ (22) ತಕ್ಕ ಮಟ್ಟಿಗೆ ಹೋರಾಟ ನಡೆಸಿದ ರ ಾದ ರ ೂ ಪ್ರಂುೋಜನವಾಗಲಿಲ್ಲ.

ಆಸ್ಟ್ರೇಲಿಂುು ಪರ ಪೆರ್ರಿ ಮೊದಲ ಕಂತಿನ 6 ಓವರ್ಗಳಲ್ಲೇ 3 ವಿಕೆಟ್ ಪಡೆದರು. ಅಂತಿಮವಾಗಿ 10 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ಗೆ ತೃಪ್ತಿ ಹೊಂದಿದರು. ಸ್ಟಾಲೆಕರ್, ಒಸಾಬರ್ನ ಮತ್ತು ಮೆಘಾನ್ ತಲಾ 2 ವಿಕೆಟ್ ಗಳಿಸಿ ವಿಂಡೀಸ್ ಹೋರಾಟಕ್ಕೆ ತೆರೆ ಎಳೆದರು.ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಂುುಾ ತಂಡಕ್ಕೆ ಲ್ಯಾನಿಂಗ್ (31) ಮತ್ತು ರಶೆಲ್ ಹೇಂು್ನು ಮೊದಲ ವಿಕೆಟ್ಗೆ 52 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು.ಹೇಂು್ನು ಮತ್ತು ಜೆಸ್ ಕ್ಯಾಮರಾನ್ ಎರಡನೇ ವಿಕೆಟ್ಗೆ 64 ರನ್ ಪೇರಿಸಿ ತಂಡದ ಸ್ಥಿತಿಂುುನ್ನು ಮತ್ತಷ್ಟು ಉತ್ತಮ ಪಡಿಸಿದರು. ಹೇಂು್ನು 74 ಎಸೆತಗಳಲ್ಲಿ 6 ಬೌಂಡರಿ ಸೇರಿದ 52 ರನ್ ಗಳಿಸಿ ಓಟಾದರೆ, ಕ್ಯಾಮರಾನ್ 76 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 75 ರನ್ ಚಚ್ಚಿದರು. ಕೆಳ ಕ್ರಮಾಂಕದಲ್ಲಿ ಪೀಲ್ಡ (ಅಜೇಂುು 36 ರನ್) ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

loading...

LEAVE A REPLY

Please enter your comment!
Please enter your name here