ಸಂಸ್ಕ್ಕತ ಉಪನ್ಯಾಸಕರ ನೇಮಕಾತಿ : ಮಲ್ಲೇಪುರಂ ವಿರುದ್ಧ ಕಠಿಣ ಕ್ರಮ

0
16
loading...

ಬೆಂಗಳೂರು, ಫೆ.23-ಸಂಸ್ಕ್ಕತ ಉಪನ್ಯಾಸಕರ ನೇಮಕಾತಿಯಲ್ಲಿ ಭ್ರಷ್ಟಾಚಾರವೆಸಗಿರುವ ಕರ್ನಾಟಕ ಸಂಸ್ಕ್ಕತ ವಿಶ್ವವಿದ್ಯಾನಿಲಯದ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೊಳಲು ಮಠದ ಶಾಂತವೀರ ಮಹಾಸ್ವಾಮಿ ಹಾಗೂ ರಾಚೋಟಿ ಶಿವಾಚಾರ್ಯ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಉಪನ್ಯಾಸಕ ನೇಮಕಾತಿಗೆ ಸಂದರ್ಶನಕ್ಕೆ ಬಂದ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳದೆ ಅನರ್ಹರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

16 ವೃಂದ ಉಪನ್ಯಾಸಕ ಸೇರಿದಂತೆ, 37 ಬೋಧಕ ಉಪನ್ಯಾಸಕರ ನೇಮಕಾತಿ ಮಾಡಿಕೊಂಡು ಹಾಗೂ ವಿವಿಧ ಹುದ್ದೆಗಳ ನೇಮಕಾತಿ ಅಲ್ಲದೆ ಗರಿಷ್ಠ ವಯೋಮಿತಿಯನ್ನು ಮೀರಿ ಉಪಕುಲಪತಿಗಳನ್ನು ನೇಮಕ ಮಾಡಿ ಭ್ರಷ್ಟಾಚಾರ ವೆಸಗಿದ್ದಾರೆ ಎಂದು ಕಿಡಿಕಾರಿದರು.

ಈ ಹಿನ್ನಲೆಯಲ್ಲಿ ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here