ಸಾಹಿತ್ಯದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತ ಕೆಲಸ ನಡೆಯಬೇಕ

0
20
loading...

ಯಲಬುರ್ಗಾ,ಫೆ,13- ಮಹಿಳೆಯರ ಮೇಲೆ  ಅತ್ಯಾಚಾರ ಪ್ರಕರಣಗಳು ಕೇಳಿ ಬರುತ್ತಿದ್ದು.ಅವರಲ್ಲಿ ಜಾಗೃತಿ ಮೂಡಿಸುವಂತಾ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಮಾಡುವಂತಾ ಕೆಲಸ ಮಾಡಬೆಕೆಂದು ಟಿಎಪಿಸಿಎಮ್ ಎಸ್ ಅಧ್ಯಕ್ಷರು.ಸಾಹಿತಿ

ಮುನಿಯಪ್ಪ ಹುಬ್ಬಳ್ಳಿ ಹೇಳಿದರು.ತಾಲೂಕ ಕನ್ನಡ ಸಾಹಿತ್ಯ ಪರಿಷತ್  ಬುಧವಾರ ಪಟ್ಟಣದ ಕಿತ್ತೂರು ಚೆನ್ನಮ್ಮ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಕನ್ನಡ ಸಾಹಿತ್ಯಕ್ಕೆ ತನ್ನದೇ ಆದಾ ಇತಿಹಾಸವಿದೆ.ಕನ್ನಡ ಸಾಹಿತ್ಯದಲ್ಲಿ ಕೂಡಾ ಪುರುಷರಿಗಿಂತ ಮಹಿಳಾ ಸಾಹಿತ್ಯಿಗಳು ಕೂಡಾ ಸಾಕಷ್ಟು ಹೆಸರು ಪಡೆದುಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯವನ್ನು ಗ್ರಾಮೀಣ ಭಾಗದಲ್ಲಿ ಪಸರಿಸುವಂತಾ ಕೆಲಸ ಇವತ್ತು ಮಾಡಬೇಕು.ಮಹಿಳೆಯರ ಮೇಲೆ ಅತ್ಯಾಚಾರದಂತ ಪ್ರಕರಣಗಳು ಹೆಚ್ಚುತ್ತಲೆ ಇದೆ.ಇದಕ್ಕೆ ಕಡಿವಾಣ ಹಾಕುವಂತಾ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತಾ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ,ಪತ್ರಕರ್ತರಾದ ರುದ್ರಪ್ಪ ಭಂಡಾರಿ,ಶರಣಪ್ಪ ಪಾಟೀಲ್,ಸೇರಿದಂತೆ ಮತ್ತಿತರರು ಮಾತನಾಡಿದರು.ಇದೇ ಸಂದರ್ಭದಲ್ಲಿ ಸ್ಥಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ,ಶಿವರಾಜ ಗುರಿಕಾರ ಅವರನ್ನು ತಾಲೂಕಾ ಕಸಾಪ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದರು.ರೋಣ ತಾಲೂಕಿನ ನಿಡಗುಂದಿ ಗ್ರಾಮದ ಅನ್ನದಾನೇಶ್ವರ ಪ್ರೌಢ ಶಾಲೆಯ ಸಹ ಶಿಕ್ಷಕ ಎಸ್.ವ್ಹಿ.ಹಳ್ಳಿಕೇರಿ ಅವರು ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಬಸವಲಿಂಗಪ್ಪ ಭೂತೆ ವಹಿಸಿ ಮಾತನಾಡಿದರು.ಸಮಾರಂಭದಲ್ಲಿ ವೀರಣ್ಣ ಕಮತರ,ಪ್ರಾಚಾರ್ಯ ಸುಮಾ ಹುಲಿಕಂತಿಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ತಾಲೂಕಾ ಕಸಾಪ ಅಧ್ಯಕ್ಷ ಶಿವಮೂರ್ತಿ ಇಟಗಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಉಪನ್ಯಾಸಕ ಮಹಾಂತೇಶ ನೆಲಗಣಿ ನಿರೂಪಿಸಿ,ವಂದಿಸಿದರು.

loading...

LEAVE A REPLY

Please enter your comment!
Please enter your name here