ಸುವರ್ಣ ಗ್ರಾಮ ಯೋಜನೆಗೆ ಚಾಲನೆ

0
28
loading...

ಗೋಕಾಕ ಫೆ, 3 ;- ಹಲವಾರು ಯೋಜನೆಗಳೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.

ಅವರು, ತಾಲೂಕಿನ ಮ  ಾಲದಿನ್ನಿ ಗ್ರಾಮದಲ್ಲಿ ರವಿವಾರದಂದು ಸುವರ್ಣ ಗ್ರಾಮ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತ, ಜನತೆ ಸಂಘಟಿತರಾಗಿ ಯೋಜನೆಗಳ ಸದುಪಯೋಗಪಡಿಸಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾಲದಿನ್ನಿ ಗ್ರಾಮದಲ್ಲಿ 97 ಲಕ್ಷ ರೂ.ಗಳ ಸುವರ್ಣ ಗ್ರಾಮ ಯೋಜನೆ ಹಾಗೂ ನೀರಾವರಿ ನಿಗಮದ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ, ಉಪ್ಪಾರಟ್ಟಿ ಗ್ರಾಮದಲ್ಲಿ 80 ಲಕ್ಷ ರೂ. ವೆಚ್ಚದ ಸುವರ್ಣ ಗ್ರಾಮ ಯೋಜನೆ, ಕೊಳವಿ ಗ್ರಾಮದಲ್ಲಿ ನೀರಾವರಿ ನಿಗಮದ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿದರು. ಕೊಳವಿ ಸರ್ಕಾರಿ ಪ್ರೌಢಶಾಲೆಗೆ ಕುಡಿಯುವ ನೀರಿನ ಘಟಕ ಮತ್ತು ಪ್ರಾಥಮಿಕ ಶಾಲೆಯ ಕೊಠಡಿಯನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮಗಳಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ್, ಜಿ.ಪಂ.ಸದಸ್ಯ ನಿಂಗಪ್ಪ ಗಡಜನವರ, ತಾ.ಪಂ.ಸದಸ್ಯ ವಿಠ್ಠಲ ಗುಂಡಿ, ಮಾಲದಿನ್ನಿ ಗ್ರಾ.ಪಂ.ಅಧ್ಯಕ್ಷ ಲಕ್ಕಪ್ಪ ಮಾಳಗಿ ಹಾಗೂ ಸದಸ್ಯರು, ಯಲ್ಲಪ್ಪ ನಂದಿ, ಉಪ್ಪಾರಟ್ಟಿ ಗ್ರಾಮದ ಪರಸಪ್ಪ ಚೂನನ್ನವರ, ಯಲ್ಲಪ್ಪ ಗೂದಿಗೊಪ್ಪ, ಬಾಳಪ್ಪ ಚೂನನ್ನವರ, ಸಿದ್ದಪ್ಪ ಆಡಿನ, ವಿಠ್ಠಲ ಮುರ್ಕಿಬಾಂವಿ, ಎಪಿಎಮ್ಸಿ ಉಪಾಧ್ಯಕ್ಷ ಲಕ್ಷ್ಮಣ ಕಡಕೋಳ, ನಿರ್ದೇಶಕ ಮಡ್ಡೆಪ್ಪ ತೋಳಿನವರ, ಕೊಳವಿ ಗ್ರಾ.ಪಂ.ಅಧ್ಯಕ್ಷ ಮುಕ್ತಾ ಭಾಗೋಜಿ ಹಾಗೂ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಜಿ.ಪಂ.ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಎಮ್.ಎಮ್.ಗೂಳಪ್ಪಗೋಳ ಹಲವರು ಮುಖಂಡರು ಇದ್ದರು.

loading...

LEAVE A REPLY

Please enter your comment!
Please enter your name here