ಹುಬ್ಬಳ್ಳಿಯಲ್ಲಿ ಮನೆ ತೆರವಿಗೆ ಕೋರ್ಟ್ ಆದೇಶ ಪಾಲಿಕೆ ಸದಸ್ಯನ ಮನೆಯೆದರು ಬೃಹತ್ ಪ್ರತಿಭಟನೆ

0
12
loading...

ಹುಬ್ಬಳ್ಳಿ,ಪೆ.01- ನ್ಯಾಯಾಲದ ಆದೇಶದಂತೆ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಬೆಂಗೇರಿ ಖಾದಿ ಗ್ರಾಮೋದ್ಯೌಗ ಸಂಘದ ಹಿಂಭಾಗ ದಲ್ಲಿನ ಗಾಂಧಿನಗರ ಕೊಳಚಿ ಪ್ರದೇಶದ ನಿವಾಸಿಗಳಿಂದು ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ ತಮಗೆ ವಂಚಿದಿದ್ದಾರೆಂದು ಆರೋಪಿಸಿ ಅವರ ನಿವಾಸದೆದುರು ಪ್ರತಿಭಟನೆ ನಡೆಸಿದರು.

ಸುಮಾರು 108 ಬಡ ಕುಟುಂಬಗಳು ತಮ್ಮ ಮನೆ ನೆಲಸಮವಾಗುವ ಹಂತ ತಲುಪಿದ್ದು. ಇದಕ್ಕೆ ಜಾಗ ಖರೀದಿಯಲ್ಲಿ ಪಾಲಿಕೆ ಸದಸ್ಯ ದಾಯಗೋಡಿ ವಾಸ್ತವಿಕತೆಯನ್ನು ಮರೆಮಾಚಿ ತಮಗೆ ಮಂಚನೆ ಗೈದಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಬೆಂಗೇರಿ ಗ್ರಾಮದ ಸರ್ವೆ ನಂ. 147(ಸಿಟಿಎಸ್ ನಂ.949) ದಲ್ಲಿನ 2 ಎಕರೆ 22 ಗುಂಟೆ ಜಾಗವನ್ನು ಧಾರವಾಡದ ಸುಭಾಷನಾರಾಯಣ ಶೇಟ್ ಎಂಬುವರು ಲೀಲಾವಿನಲ್ಲಿ ಖರೀದಿಸಿದ್ದು, ಅದರಲ್ಲಿನ 34 ಗುಂಟೆ ಜಾಗವನ್ನು ಬೆಂಗೇರಿಯ ಉದಯನಗರ ಆಶೋಕ ತಿಪ್ಪಣ್ಣ ಅಮರಾವತಿ ಮತ್ತು ಸಿಕಂದರ ರುಸ್ತುಮ ಸಾಹೇಬ್ ಗಾಡಗೋಳಿ ಎಂಬುವರು ತಾವು ಮುಕ್ತಿಯಾರರೆಂದು ಹೇಳಿಕೊಂಡು ಪ್ಲಾಟುಗಳನ್ನು ತಯಾರಿಸಿ ಸನ್ 1999 ರಲ್ಲಿ ಸದ್ಯ ಪಾಲಿಕೆ ಸದಸ್ಯರಾಗಿರುವ ಹೂವಪ್ಪ ದಾಯಗೋಡಿ ಮಾರಾಟ ಮಾಡಿದ್ದರು.

ಈಗ ಈ ಭಾಗ ಆತೀಕ್ರಮಣ ಎಂದು ನ್ಯಾಯಾಲಯ ಘೋಷಿಸಿ ತೆರವುಗೊಳಿಸುವಂತೆ ಆದೇಶಿಸಿದ್ದು. ಇಲ್ಲಿನ ನಿವಾಸಿಗಳು ಈಗ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದಕ್ಕೆ ದಾಯಗೋಡಿ ಮಾಡಿದ ವಂಚನೆಯೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.

loading...

LEAVE A REPLY

Please enter your comment!
Please enter your name here