ಪ್ರಣವ ವಿಚಾರಣೆ ಸಾಧ್ಯವೆ?

0
20
loading...

ನವದೆಹಲಿ,15-ಇತ್ತೀಚೆಗೆ ಬಹಿರಂಗಗೊಂಡ ದೇಶದ ರಾಜಕೀಯದಲ್ಲಿ ಭಾರೀ ಪ್ರಮಾಣದ ಸಂಚಲನ ಮೂಡಿಸಿರುವ ಹೆಲಿಕ್ಯಾಪ್ಟರ್ ಖರೀದಿ ವ್ಯವಹಾರದಲ್ಲಿ ನಡೆದಿದೆ ಎಂದು ಹೇಳಲಾದ ಲಂಚದ ಹಗರಣದಲ್ಲಿ ರಾಷ್ಟ್ತ್ರಪತಿ ಪ್ರಣವ್ ಮುಖರ್ಜಿ ಅವರನ್ನು ಪ್ರಶ್ನಿಸಬೇಕಾದ ಸಂದರ್ಭ ಈಗ ಸಿಬಿಐಗೆ ಎದುರಾಗಿದೆ.

ಈಗಾಗಲೇ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಿರುವ ಕೇಂದ್ರ ಸರಕಾರ ಈ ಪ್ರಕರಣದ ವಾಸ್ತವ ಅಂಶಗಳನ್ನು ಒಳಗೊಂಡ ವರದಿಯಲ್ಲಿ ಅಂದಿನ ರಕ್ಷಣಾ ಸಚಿವ ಇಂದಿನ ರಾಷ್ಟ್ತ್ರಪತಿ ಪ್ರಣವ್ ಮುಖರ್ಜಿ ಅವರ ಹೆಸರವು ಇದೆ.

ಆದರೆ ಈಗ ಅವರು ರಾಷ್ಟ್ತ್ರಪತಿ ಸ್ಥಾನದಲ್ಲಿ ಇರುವುದರಿಂದ ಸಿಬಿಐ ಸೇರಿದಂತೆ ಇತರ ಕಾನೂನು ವಿಚಾರಗಳಿಂದ ಅವರಿಗೆ ವಿನಾಯಿತಿ ಇದೆ. ಹೀಗಿರುವುದರಿಂದ ಈ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರಾಷ್ಟ್ತ್ರಪತಿಗಳನ್ನು ಪ್ರಶ್ನಿಸಲಿದ್ದಾರೆಯೇ ? ಇಲ್ಲವೇ ಎಂಬ ಕುತೂಹಲ ಈಗ ಉಂಟಾಗಿದೆ.

ಈಗ ಸರಕಾರದ ಮೇಲಿರುವ ಹಗರಣ ಕುರಿತ ವಾಸ್ತವಾಂಶಗಳ ವರದಿಯನ್ನು ಇಟಲಿಯ ಪಿನ್ಮೇಕ್ಯಾನಿಕಕೆ ಅತಿ ಗಣ್ಯರಿಗಾಗಿ ಹೆಲಿಕ್ಯಾಪ್ಟರ್ ಸರಬರಾಜು ಮಾಡುವಂತೆ ಒಪ್ಪಂದವನ್ನು 2005ರಲ್ಲಿ ಮಾಡಿಕೊಳ್ಳಲಾಗಿತ್ತು. ಆಗ ಪ್ರಣವ ಮುಖರ್ಜಿ ರಕ್ಷಣಾ ಸಚಿವರಾಗಿದ್ದರು. ಅಲ್ಲದೇ ಈ ಪ್ರಕರಣದಲ್ಲಿ ಎನ್ಡಿಎ ಆಡಳಿತ ಅವಧಿಯಲ್ಲಿ ರಾಷ್ಟ್ತ್ರೀಯ ಭದ್ರತಾ ಸಲಹೆಗಾರರಾಗಿದ್ದ ಬ್ರಿಜೆಶ್ ಮಿಶ್ರಾ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ತ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣ, ಎಸ್ಜಿಪಿ ವರಿಷ್ಠರಾಗಿದ್ದ ಬಿ.ವ್ಹಿ.ವಾಂಚೂ ಅವರ ಹೆಸರು ಇವೆ. ಈಗ ಅವರು ಪಶ್ಚಿಮ ಬಂಗಾಳ ಮತ್ತು ಗೋವಾ ರಾಜ್ಯಗಳ ರಾಜ್ಯಪಾಲರಾಗಿರುವುದರಿಂದ ಅವರನ್ನು ಸಹ ಪ್ರಶ್ನಾವಳಿಗೆ ಒಳಪಡಿಸುವಂತಿಲ್ಲ.

ಈ ಹಗರಣದ ಬೇರುಗಳು ಎನ್ಡಿಎ ಆಡಳಿತಕ್ಕೂ ಚಾಚಿವೆ. 2003ರಲ್ಲಿ ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎನ್ಡಿಎ ಸರಕಾರದಲ್ಲಿ ರಾಷ್ಟ್ತ್ರೀಯ ಭದ್ರತಾ ಸಲಹೆಗಾರರಾಗಿದ್ದ ಬ್ರಿಜೇಶ ಮಿಶ್ರಾ ಅವರು ಅಂದಿನ ರಕ್ಷಣಾ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ಹೆಲಿಕ್ಯಾಪ್ಟರ್ ಖರೀದಿಯ ಪ್ರಸಕ್ತ ನಿಯಾಮವಳಿಗಳು ಬದಲಾವಣೆ ಮಾಡಲು ಸೂಚಿಸಿದ್ದಾರೆ.

loading...

LEAVE A REPLY

Please enter your comment!
Please enter your name here