ಅನ್ನ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ: ಎಸ್. ಕೆ. ದಾನಕೈ

0
72
loading...

ಹುಬ್ಬಳ್ಳಿ: ಇಂದು ಅನ್ನದ ಪ್ರಸಾದ ಮಹಿಮೆ ಬಹು ದೊಡ್ಡದು. ಮದುವೆ, ಜವಳ, ಹುಟ್ಟು ಹಬ್ಬ, ದೀಡುನಮಸ್ಕಾರ, ಜಾತ್ರೆಗಳಲ್ಲಿ ಮಠಮಂದಿರಗಳಲ್ಲಿ ಊರಿನ ಕಾರ್ಯಕ್ರಮಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಹಬ್ಬ ಹರಿದಿನಗಳಲ್ಲಿ, ಅನೇಕ ಉತ್ಸವಗಳಲ್ಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ, ಊಟ ಮಾಡುವಾಗ ಅನೇಕ ಪದಾರ್ಥಗಳನ್ನು ಕೆಡಿಸಿ ಹಾಳು ಮಾಡುತ್ತೇವೆ. ಅನ್ನ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ ತಿನ್ನುವ ಪ್ರತಿ ಕಾಳಿನ ಮೇಲೆ ತಿನ್ನುವವನ ಹೆಸರು ಬರೆದಿದೆ. ಇಂದು ಮನುಷ್ಯನ ಹೊಟ್ಟೆ ಸೇರುವ ಅನ್ನ ಕಸದ ತೊಟ್ಟೆ ಸೇರುತ್ತಿರುವುದು ವಿಷಾದದ ಸಂಗತಿಯಾಗಿದೆ. ಅಕ್ಕಿ ಉಳಿದರೆ ಇಂದಲ್ಲ ನಾಳೆ ತಿನ್ನಬಹುದು, ನಾವು ಮಾಡಿದ ಅನ್ನ ನಾಶವಾಗಿ ಹಾಳಾಗಿ ಹೋಗುತ್ತದೆ. ಧಾರ್ಮಿಕ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಮೊದಮೊದಲು ಮುಂಚಿತವಾಗಿ ಅನ್ನ ಬಸಿದು ಯಾರು ಊಟಮಾಡಾಲಾರದಂತೆ ಕೆಡಿಸುತ್ತೇವೆ. ನಮಗೇಷ್ಟು ಬೇಕು ಅಷ್ಟೇ ಬಳಸಬೇಕು. ಅನ್ನದ ಬಗ್ಗೆ ಪ್ರಾಮುಖ್ಯತೆ ಕೊಡಬೇಕು. ಅನ್ನ ಪರಬ್ರಹ್ಮ ವಸ್ತು ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ. ಪ್ರತಿ ಅನ್ನದ ಅಗುಳು ತಿಪ್ಪೆ ಸೇರದಿರಲಿ. ಜನರು ತಾತ್ಸರ ಭಾವನೆಯಿಂದ ದೇಶದಲ್ಲಿ ಲಕ್ಷಾಂತರ ಟನ್ ಅನ್ನ ಕಸದತೊಟ್ಟೆ ಗಟಾರ ಸೇರುತ್ತದೆ. ಅನ್ನಕ್ಕಾಗಿ ಪರದಾಡುವ ಲಕ್ಷಾಂತರ ಬಡ ಜನರಿದ್ದಾರೆ ಅನ್ನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾಯಕ ಸಮಾಜದ ಸೇವೆ ಮಾಡಬೇಕೆಂಬ ಬಯಕೆ ನನ್ನದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್, ಯಲಬುರ್ಗಾ ತಾಲೂಕ ರಂಗಭೂಮಿ, ಸಾಂಸ್ಕ್ಕತಿಕ ಕಲಾವಿದರ  ಸಂಘದ ಕಾರ್ಯದರ್ಶಿ ಶರಣಬಸಪ್ಪ ದಾನಕೈ ಜನರಲ್ಲಿ ಕರಪತ್ರ, ಮಾಹಿತಿ, ನೀಡುತ್ತಾ ಜಾಗೃತಿ ಮೂಡಿಸುವ ಸಂಧರ್ಬದಲ್ಲಿ ವಿವರಿಸಿದರು. ಬೆವರು ಸುರಿಸಿ ಬೆಳೆದ ಬೆಳೆ-ಬೆಲೆಕಟ್ಟಲು ಅಸಾಧ್ಯ ಆದ್ದರಿಂದ ಮಹಾಜನತೆ ಶುಭ ಸಮಾರಂಭಗಳಲ್ಲಿ, ಅಗತ್ಯಕ್ಕಿಂತ ಹೆಚ್ಚಾಗಿ ಬಡಿಸಿಕೊಂಡು ಚೆಲ್ಲದಿರಿ. ಒಂದು ಅಗಳಿಗೂ ಪರಿತಪಿಸಬೇಕಾಗುವ ಪ್ರಸಂಗ ಬರುತ್ತದೆ. ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ನಾವು ನೀವೆಲ್ಲರೂ ಗೌರವಿಸಬೇಕು. ಅದು ನಮ್ಮನ್ನು ಗೌರವಿಸುತ್ತದೆ.

ಬೆಳೆ ಭೂಮಿಯೋಳೊಂದು ಪ್ರಳಯದ ಕಸ ಹುಟ್ಟಿ

ತಿಳಿಯಳಿಯದು ಎಚ್ಚರಳಿಯದು,

ಎನ್ನವಗುಣಗಳೆಂಬ ಕಸವ ಕಿತ್ತು ಸಲುಹಯ್ಯ

ಸುಳಿದೇಗೆದು ಬೆಳೆಯುವೆನು ಕೂಡಲಸಂಗಮದೇವ. 

ಎನ್ನುವಂತೆ ಇಂದು ರೈತ ಕಷ್ಟಪಟ್ಟು  ಬೆವರು ಸುರಿಸಿ ರಕ್ತ ಚೆಲ್ಲಿ ಅನ್ನ ಬೆಳೆಯತ್ತಾನೆ. ಅದನ್ನು ಬಿಸಾಕಿ (ಚೆಲ್ಲಿ) ಅವನಿಗೆ ಅವಮಾನ ಮಾಡುವುದು ಸರಿಯಲ್ಲ. ಹೊಲದಲ್ಲಿ ಬಡ ರೈತ ಮಹಿಳೆಯರ ಸೊಂಟ ಬಗ್ಗಿದರೆ, ಶ್ರೀಮಂತರ ಮನೆಯಲ್ಲಿ ಊಟ. ಅನ್ನಕ್ಕಾಗಿ ಪರದಾಡುತ್ತಿರುವ ಸಮಯದಲ್ಲಿ ನಾವು ನಮ್ಮ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಊಟ ಸಿಗುತ್ತದೆ ಅಥವಾ ಇಲ್ಲವೂ ಅಂಥ ಮುಗಿಬಿದ್ದು ನಮ್ಮ ತಟ್ಟೇಯಲ್ಲಿ (ತಾಟಿನಲ್ಲಿ) ಹೆಚ್ಚಿನ ಪ್ರಮಾಣದಲ್ಲಿ ಅನ್ನ ಬಡಿಸಕೊಂಡು ಕಸದ ರಾಸಿಗೆ ಚೆಲ್ಲುವದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಅನ್ನ ದೇವತೆಯನ್ನು ಕಸದ ರಾಸಿ ಮಾಡುವುದು ಬೇಡವೇ ಬೇಡ. ಅನ್ನ ಇಲ್ಲದೆ ಬಿಕ್ಷೇ ಬೇಡುತ್ತಾ ಅತ್ತು ಅತ್ತು ಸುಸ್ತಾಗಿ ಮಲಗುವ ಬಡ ಮಕ್ಕಳು ಎಷ್ಟಿಲ್ಲ ನಮ್ಮ ದೇಶದಲ್ಲಿ. ಹೊಟ್ಟೆ ತುಂಬಾ ತಿನ್ನಬೇಕು ಆದರೆ ರಸ್ತೆ ತುಂಬ ಚೆಲ್ಲುವಷ್ಟು ಎಸೆಯಬಾರದು.

ಉಚಿತ ಸಾಮೋಹಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾಜನತೆ ಅಗತ್ಯಕ್ಕಿಂತ ಅಧಿಕ ಅನ್ನ ಬಡಿಸಿಕೊಂಡು ತಿಪ್ಪಿಗೆ ಎಸೆಯುವಲ್ಲಿ ಮುಂದಾಗಿದ್ದಾರೆ. ಕೆಡಿಸಲಾರದೆ ಉಳಿದ ಆಹಾರ ಉಳಿದವರಿಗೆ ಆಗುವುದು ಉಪಹಾರ. ಜನಸೇವೆಯೇ ಜನಾರ್ಧನ ಸೇವೆ ಎಂದು ಜನಜಾಗೃತಿ ಮೂಡಿಸುವ ಅನ್ನ ಮತ್ತು ನೀರಿಗೆ ತಾವೆಲ್ಲರೂ ಮಹತ್ವ ಕೊಡುವಲ್ಲಿ ಶ್ರಮವಹಿಸಬೇಕೆಂದು ಜನರಲ್ಲಿ ಎಸ್. ಕೆ. ದಾನಕೈ ಕರೆ ನೀಡಿದರು.

loading...

LEAVE A REPLY

Please enter your comment!
Please enter your name here