ಕಲಕೇರಿ: ಗ್ರಾಮ ಸಭೆ ಮತ್ತು ಜಾಥಾ ಕಾರ್ಯಕ್ರಮ

0
27
loading...

ಕೊಪ್ಪಳ ಫೆ 04: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜಿಲ್ಲಾ ಜಲಾನಯನ ಅಭಿವೃದ್ದಿ ಇಲಾಖೆ  ಕೊಪ್ಪಳ ಹಾಗೂ ಮಹಿಳೆ ಮತ್ತು ಪರಿಸರ ಅಭಿವೃದ್ದಿ ಸಂಸ್ಥೆ ಬಳ್ಳಾರಿ   ಇವರ ಸಹಯೋಗದೊಂದಿಗೆ ಸಮಗ್ರ ಜಲಾಯನಯನ ನಿರ್ವಹಣೆ ಯೋಜನೆ

3ನೇ ಹಂತದ ಅರಿವು ಮೂಡಿಸುವ ಸಲುವಾಗಿ ಗ್ರಾಮದಲ್ಲಿ ಜಾಥಾ ಹಾಗೂ ಗ್ರಾಮಸಭೆ ಏರ್ಪಡಿಲಾಯಿತು.

ಸಭೆಯ ಪೂರ್ವಬಾವಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಮಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಜನರಿಗೆ ಅರಿವು ಮೂಡಿಸಲಾಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ  ಬಿ.ಎಂ.ಗೊಬ್ಬರಗುಂಪಿ ಸಹಾಯಕ ಕೃಷಿ ಅಧಿಕಾರಿಗಳು ಕೊಪ್ಪಳ ಇವರು ಯೋಜನೆಯಲ್ಲಿ ಅನುಷ್ಠಾನಗಳ್ಳಲಿರುವ ಕಾಮಗಾರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.  ಜಿ.ಪಿ.ಹಿರೇಮಠ ಸಹಾಯಕ ಕೃಷಿ ಅಧಿಕಾರಿಗಳು ಕೊಪ್ಪಳ ಇವರು ಸಮುದಾಯ ಸಂಘಟನೆಗಾಗಿ ಸ್ವ ಸಹಾಯ ಸಂಘಗಳು ಬಳಕೆದಾರರ ಗುಂಪುಗಳು, ಬಾದ್ಯತಾ ಗುಂಪುಗಳನ್ನು ಮಾಡಿ ವಿವಿಧ ರೀತಿಯ ಕೌಶಲ್ಯ ಅಭಿವೃದ್ದಿ ತರಭೆತಿ ನೀಡಲಾಗುತ್ತದೆ ಎಂದು ತಿಳಿಸಿದರು.

ನಂತರ  ಎಚ್.ಎ.ಲಮಾಣಿ ಸಹಾಯಕ ಕೃಷಿ ಅಧಿಕಾರಿಗಳು ಮಾತನಾಡಿಯೋಜನೆಯ ಕಿರು ಪರಿಚಯ ಮಾಡಿಕೊಟ್ಟರು. ಸಭಾಧ್ಯಕ್ಷತೆಯನ್ನು  ಗೌರಮ್ಮ ಚೆಂಡೂರ ಅಧ್ಯಕ್ಷರು ಗ್ರಾಮಪಂಚಾಯತ ಮಾದನೂರ ವಹಿಸಿದ್ದರು  ಪರಸಪ್ಪ ರಾಠೋಡ ಉಪಾಧ್ಯಕ್ಷರು ಗ್ರಾಮಪಂಚಾಯತ ಮಾದನೂರ, ಸದಸ್ಯರಾದ  ವೀರುಪಾಕ್ಷಗೌಡ ಈಳಗೇರ,  ಮಂಜುನಾಥ ಮಾಲಾಜಿ ಹಾಗೂ ರೇಣುಕಾ ಮುದ್ದಾಬಳ್ಳಿ ಸಭೆಯಲ್ಲಿ ಉಪಸ್ಥಿತರಿದ್ದರು.  ಸಭೆಯಲ್ಲಿ ಗ್ರಾಮದ ರೈತರು, ಮಹಿಳೆಯರು ಯುವಕರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಬಸವರಾಜ ಅಂಗಡಿ ಸ್ವಾಗತಿಸಿದರು ಲಾಯಪ್ಪ ನಂದ್ಯಾಳ ನಿರೂಪಿಸಿದರು ಶರಣಪ್ಪ ಗುಡದಪ್ಪನ್ನವರ ವಂದಿಸಿದರು.

loading...

LEAVE A REPLY

Please enter your comment!
Please enter your name here