ಕಾಳಿನದಿ ನೀರು ಶೀಘ್ರದಲ್ಲಿ ನೀರಾವರಿಗೆ ಸರ್ಕಾರದ ಅಸ್ತು: ಶಾಸಕ ಸುನೀಲ

0
28
loading...

ಹಳಿಯಾಳ,ಮಾ.21: ಹಲವು ವರ್ಷಗಳ ಕನಸು ಸರ್ಕಾರ ನನಸು ಮಾಡಲು ಹೊರಟಿದ್ದು, ಹಳಿಯಾಳ ತಾಲೂಕಿನ ರೈತರಿಗೆ ನೀರಾವರಿಗಾಗಿ ಹಣ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈ ಯೋಜನೆ ಜಾರಿಗೊಳಿಸಲು 200 ಕೋಟಿ ರೂ. ಹಣ ತೆಗೆದಿರಿಸಿದೆ ಎಂದು ಶಾಸಕ ಸುನೀಲ ಹೆಗಡೆ ತಿಳಿಸಿದರು.

ಅವರು ಇಂದು ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಧಿವೇಶನದ ಬಜೆಟ್ನಲ್ಲಿ ನೀರಾವರಿ ನಿಗಮಕ್ಕೆ ಹಣ ನೀಡಿದ್ದು, ಆ ಹಣದಲ್ಲಿ ಕಾಳಿನದಿಯಿಂದ ತಾಲೂಕಿನ ರೈತರಿಗೆ ನೀರು ಹಂಚಿಕೆಗೆ ಧಾರವಾಡ ನಿಗಮಕ್ಕೆ 200 ಕೋಟಿ ಬಿಡುಗಡೆ ಮಂಜೂರಾತಿ ನೀಡಿದ್ದು, ಏಪ್ರಿಲ್ ವರೆಗೆ ಈ ಯೋಜನೆ ಜಾರಿಗೆ ಬರಲಿದ್ದು, ಇದಕ್ಕೆ ಹಿನ್ನಡೆಯಾಗಲು ಸರ್ವೇ ಕಾರ್ಯದಲ್ಲಿನ ಕೆಲವು ಲೋಪ ದೋಷಗಳೇ ಕಾರಣ ಎಂದು ತಿಳಿಸಿದ ಸುನೀಲ ಹೆಗಡೆ ದಾಂಡೇಲಿ ತಾಲೂಕು ರಚನೆಯಾಗುವದರಲ್ಲಿ ಯಾವ ಸಂಶಯವಿಲ್ಲವೆಂದರು.

ಸರ್ಕಾರದ ಮುಂದೆ ಈಗಾಗಲೇ ಈ ಭಾಗದ ರೈತರ ನೀರಿನ ಅವಶ್ಯಕತೆ ಕುರಿತು ಚರ್ಚಿಸಿದ್ದು, ಶೇ. 75ರಷ್ಟು ಜನ ಬೇರೆ ರಾಜ್ಯಗಳಿಗೆ ಕೆಲಸದ ನಿಮಿತ್ಯ ವಲಸೆ ಹೊರಟಿದ್ದು, ಇದನ್ನು ತಡೆಯಲು ನೀರಾವರಿ ಯೋಜನೆ ಅತೀ ಅವಶ್ಯವಾಗಿದೆ ಎಂದು ಸರ್ಕಾರಕ್ಕೆ ಗಮನಕ್ಕೆ ತಂದ ನಂತರ ವರ್ಷದ ಐದು ತಿಂಗಳ ನೀರಿನ ಅಭಾವ ನೀಗಿಸಲು ಕ್ರಮ ಕೈಗೊಂಡಿದ್ದು, ಬಾಂದಾರ, ಹೂಳೆತ್ತುವದು ಮತ್ತು ನೀರಾವರಿಗೆ 13 ಸಾವಿರ ಹೆಕ್ಟೇರ್ ಭೂಮಿಗೆ ನೀರು ಹಂಚಿಕೆಗೆ ಕಾಳಿನದಿಯಿಂದ 1.2 ಟಿ.ಎಂ.ಸಿ. ನೀರು ನೀರಾವರಿಗೆ ಮತ್ತು ಕುಡಿಯಲು ಅವಶ್ಯಕವಾಗಿದ್ದು, ಈ ಯೋಜನೆ ಐದು ವರ್ಷಗಳ ಒಳಗೆ ಮುಕ್ತಾಯಗೊಳ್ಳಲಿದ್ದು, ತಾಲೂಕಿನ ಎಲ್ಲ ಹಳ್ಳಿಗಳಿಗೆ ಹಂಚಿಕೆಯಾಗಲಿದೆ ಎಂದರು.

loading...

LEAVE A REPLY

Please enter your comment!
Please enter your name here