ಕುಷ್ಟಗಿಯಲ್ಲಿ ಅಕ್ಕಿ ಸಂತೆ ಪ್ರಾರಂಭ

0
16
loading...

ಕೊಪ್ಪಳ,ಮಾ.03: ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೋನಾಮಸೂರಿ ಅಕ್ಕಿ ದೊರೆಯುವಂತೆ ಮಾಡುವ ಉದ್ದೇಶದಿಂದ ಕುಷ್ಟಗಿಯ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಕಿ ಸಂತೆಯನ್ನು ಮಾ. 01 ರಿಂದ ಪ್ರಾರಂಭಿಸಲಾಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಳದಿಂದಾಗಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಅಕ್ಕಿ ಪೂರೈಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದವರ ಸಹಾಯದೊಂದಿಗೆ ಕುಷ್ಟಗಿಯ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಕಿ ಸಂತೆ ಪ್ರಾರಂಭಿಸಲಾಗಿದೆ.  ಈ ಅಕ್ಕಿ ಸಂತೆಯಲ್ಲಿ ಪ್ರತಿ ಕ್ವಿಂಟಾಲ್ಗೆ ರೂ. 3500 ರಂತೆ ಸೋನಾಮಸೂರಿ ಅಕ್ಕಿ ಮಾರಾಟ ಮಾಡಲಾಗುವುದು.  ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here