ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ

0
23
loading...

ಕುಕನೂರ ಮಾ-03 ಸುಕ್ಷೇತ್ರ ಚಿಕ್ಕವಂಕಲಕುಂಟಾ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವವು ಸಡಗರ ಸಂಭ್ರದಿಂದ ಅತಿ ವೈಭವವಾಗಿ ಸೋಮವಾರ ಸಾಯಂಕಾಲ 5-30 ರಥೋತ್ಸವ ಜರುಗಿತು. ಈ ರಥೋತ್ಸವದಲ್ಲಿ ಸಾವಿರ ಸಾವಿರ ಜನ ಸಾಗರೋಪಾದಿಯಲ್ಲಿ ಸೇರಿ ವರ್ಷಕ್ಕೊಮ್ಮೆ ನಡೆಯುವ ಈ ರಥೋತ್ಸವಕ್ಕೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ತಮ್ಮ ಹರಕೆ ತೀರಿಸುತ್ತಾ ಮಾರುತೇಶ್ವರನ ದರ್ಶನ ಪಡೆದು ಪುನಿತರಾಗಲು ಈ ಒಂದು ರಥೋತ್ಸವದಲ್ಲಿ ತಮ್ಮ ತನು ಮನವನ್ನು ಅರ್ಪಿಸಿ ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಗ್ರಾ.ಪಂ. ದವರು ರಸ್ತೆ ತುಂಬಾ ವಿದ್ಯುತ್ ಬಲ್ಬಗಳನ್ನು ಅಳವಡಿಸಿ, ನೀರಿನ ವ್ಯವಸ್ಥೆ, ಸ್ವಚ್ಛತೆ ಕಾರ್ಯಗಳಲ್ಲಿ ತಮ್ಮ ಸಿಬ್ಬಂಧಿಗಳೆಲ್ಲವನ್ನು ವ್ಯವಸ್ಥೆ ಮಾಡಿದ್ದರು.

ಅದೇ ತೆರನಾಗಿ ಆರಕ್ಷಕ ಸಿಬ್ಬಂಧಿಯವರು ಏನು ಗಲಾಟೆಯಾಗದ ರೀತಿಯಲ್ಲಿ ನೋಡಿಕೊಂಡರು.

ಈ ಒಂದು ಜಾತ್ರ ಮಹೋತ್ಸವವು ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಪ್ರಸಿದ್ದಿ ಪಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

loading...

LEAVE A REPLY

Please enter your comment!
Please enter your name here