ಚಿಣ್ಣರ ಕೃಷಿ ದರ್ಶನಕ್ಕೆ ಚಾಲನೆ

0
15
loading...

ಕೊಪ್ಪಳ: ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಚಿಣ್ಣರ ಕೃಷಿ ದರ್ಶನಕ್ಕೆ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆವರಣದ ಮುಂದೆ ಬಿ.ಆರ್.ಪಿ.ವಿಜಯಕುಮಾರ ಕುರುಗೊಡ ಚಾಲನೆ ನೀಡಿದರು.

ನಂತರ ಬಿ.ಆರ್.ಪಿ.ವಿಜಯಕುಮಾರ ಮಾತನಾಡಿ,ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,ಅದರಲ್ಲಿ ಚಿಣ್ಣರ ಕೃಷಿ ದರ್ಶನ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಕರಾದ ಭರಮಪ್ಪ ಕಟ್ಟಿಮನಿ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಸಿ.ಆರ್.ಪಿ.ವಿಜಯಲಕ್ಷ್ಮಿ ಜಗಳೂರು,ಶಿಕ್ಷಕರಾದ ವೆಂಕೋಬಿ ಕಲ್ಲುಡಿ,ಜಿ.ವಿಜಯಾ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here