ಜಾತಿ ಆಧಾರಿತ ರಾಜಕೀಯ, ಪ್ರಜಾಪ್ರಭುತ್ವದ ಒಂದು ದೊಡ್ಡ ದುರಂತ: ರಾಘವೇಂದ್ರ ಕುಷ್ಟಗಿ

0
43
loading...

ಕುಷ್ಟಗಿ: ಇಂದಿನ ಚುನಾವಣೆಗಳು ಜಾತಿಯ ಮೇಲೆ ಆಧಾರಿತವಾಗಿದ್ದು ನಮ್ಮ ಪ್ರಜಾಪ್ರಭುತ್ವ ಒಂದು ದೊಡ್ಡ ದುರಂತದಂತಹ ಪರಿಣಾಮ ಎದುರಿಸಬೇಕಾಗಿ ಬಂದಿದೆ ಎಂದು ಹೈ-ಕ ಹೋರಾಟ ಸಮಿತಿಯ ರಾಘವೇಂದ್ರ ಕುಷ್ಟಗಿ ಇಂದಿಲ್ಲಿ ಅಭಿಪ್ರಾಯಿಸಿದರು.

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ  ರಾಜಕೀಯ ನಿರ್ಲಕ್ಷಿತ ಸಮುದಾಯಗಳ ಮತ್ತು ಮತದಾರರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣಾ ನಿಮಿತ್ಯ ಮತದಾರರಿಗೆ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದಕ್ಕಾಗಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಇದನ್ನು ಆಯೋಜಿಸಿದ್ದಕ್ಕಾಗಿಧನ್ಯವಾದಗಳನ್ನು ಹೇಳಿದರು. ಮತದಾರರಿಗೆ ತಮ್ಮ ಹಕ್ಕು ಹಾಗೂ ಬದಲಾವಣೆಯ ಅರಿವಾಗಬೇಕುಇದರಿಂದ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕು.

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡ ಅವರು ಕೇಂದ್ರದಲ್ಲಿ ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಹುಲಗಾಂಧಿ ಇವರಿಬ್ಬರಲ್ಲಿ ಯಾರನ್ನು ತಂದರೆ ನಮ್ಮ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಚರ್ಚೆ ಮಾಡುತ್ತಿರುವಾಗ ಇವರಲ್ಲಿ ಯಾರನ್ನು ತಂದರೂ ಕೂಡ ನಮ್ಮ ದೇಶ ಅಭಿವೃದ್ದಿ ಹೊಂದಲು ಸಾದ್ಯವಿಲ್ಲ. ಯಾವೂದೇ ಬದಲಾವಣೆ ಹೊಂದಲು ಕೂಡ ಸಾದ್ಯವಿಲ್ಲ. ಹಾಗೆಯೇ  ನಮ್ಮ ರಾಜ್ಯದಲ್ಲಿಯೂ ಕೂಡ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಆಗಲೀ ಯಾವೂದೇ ಪಕ್ಷದಿಂದಲೂ ಬದಲಾವಣೆ ಅಸಾದ್ಯ. ನಮ್ಮ ರಾಜ್ಯ ಸ್ವರಾಜ್ಯವಾಗಬೇಕಾದರೆ ಬ್ರಷ್ಠಾಚಾರ, ಸ್ವಜನಪಕ್ಷಪಾತ, ಸ್ವಪ್ರತಿಷ್ಠೆ ಇಂತಹ ಮನೋಭಾವನೆ ಹೊಂದಿರುವವರನ್ನು ತರದೇ ಇಂತವರ ವಿರುದ್ಧ ಸಿಡಿದೆದ್ದು ಇಂದಿನ ಮತದಾರರು ಜನಪರ ಕಾಳಜಿ ಹೊಂದಿರುವ, ಭ್ರಷ್ಠಾಚಾರ ರಹಿತ, ಸಾಮಾಜಿಕ ಕಳಕಳಿ ಹೊಂದಿರುವಂತಹ ಮನೋಭಾವನೆ ಉಳ್ಳವರನ್ನು ಆರಿಸಿ ತರಬೇಕು. ಮತ್ತು ಜನಪ್ರತಿನಿಧಿಗಳು ಕೆಳವರ್ಗದ ಸಮುದಾಯಗಳಾದ ರಜಪೂತ, ಅಲೆಮಾರಿ, ಜ್ಯನ, ಈಡಿಗರ, ಗೊಂದಳಿ, ಹಡಪದ, ವಿಶ್ವಕರ್ಮ, ಕಲಾಲ, ಕೊರವರ, ಕುಂಬಾರ, ಮಡಿವಾಳ, ಉಪ್ಪರ, ಹೂಗಾರ, ಬ್ರಾಹ್ಮಣ, ನೇಕಾರ ಹಾಘೂ ಇನ್ನು ಮುಂತಾದ ಹಲವಾರು ಚಿಕ್ಕ ಸಮುದಾಯಗಳನ್ನು ಕಾಳಜಿ ಮಾಡುವಂತಹ ಅಭಿವ್ರದ್ದಿ ಮಾಡುವಂತಹ ಜನ ನಾಯಕನನ್ನು ಚುನಾಯಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು. ಈ ಎಲ್ಲ ಸಮುದಾಯಗಳ ಮುಖಂಡರು ಹರಕೆಯ ಕುರಿಗಳಾಗದೇ ಸಿಂಹದ ಮರಿಗಳಾಗಿ ನಿಮ್ಮ ಸುಮುದಾಯಕ್ಕೆ ರಾಜಕೀಯ ಅವಕಾಶ ರೂಪಿಸಿ ಸಾಮಾಜಿಕವಾಗಿ ಸದೃಢರಾಗಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಶೀವಪ್ಪ ನೀರಾವರಿ ವಹಿಸಿ ಮಾತನಾಡಿ ಎಲ್ಲ ಚಿಕ್ಕ ಸಮುದಾಯದವರು ಶೈಕ್ಷಣಿಕವಾಗಿ ಮುಂದುವರೆದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮುಂದುವರೆಯಲು ಸಾದ್ಯ. ಮತದಾರರು ಚುನಾವಣೆಗಳಲ್ಲಿ ವಿವಿಧ ಆಮಿಷಗಳಿಗೆ ಮಾರು ಹೋಗದೇ ಉತ್ತಮ ನಾಯಕನನ್ನು ಆರಿಸಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪರಪ್ಪ ಕಾಳಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೋಹನಲಾಲ್ ಜೈನ್, ರಾಮಣ್ಣ ಬಡಿಗೇರ, ಗೋಪಾಲರಾವ್.ಕೆ, ಬಿ ಚಂದಪ್ಪ, ಕೃಷ್ಣರಾವ್ ಕುಲಕರ್ಣಿ, ಹೇಮಲತಾ ಹಿರೇಮಠ ಹಾಗೂ ಹಲವಾರು ಸಮುದಾಯಗಳ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವಚೇತನ ಸಂಗಿತ ಶಾಲೆಯ ವೃಂದದವರಿಂದ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡಿದರು.

loading...

LEAVE A REPLY

Please enter your comment!
Please enter your name here