ಮತ್ತೆ ಮೌಲ್ಯಮಾಪನ ಸ್ಥಗಿತದ ಬೆದರಿಕೆ

0
2
loading...

ಬೆಂಗಳೂರು,ಮಾ.20-ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ಸೇರಿದಂತೆ ನ್ಯಾಯುತ ಬೇಡಿಕೆಗಳನ್ನು ಇದೇ 31ರೊಳಗೆ ಈಡೇರಿಸದಿದ್ದರೆ ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ ಎಚ್ಚರಿಸಿದೆ.

ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ ಹಾಗೂ ವೇತನ ತಾರತಮ್ಯ ನಿವಾರಿಸಬೇಕೆಂದು ಈಗಾಗಲೇ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರ್ಕಾರ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಮಿತಿಯ ಬಸವರಾಜ ಗುಡಿಕಾರ, ತಿಮ್ಮಯ್ಯ ಪುರ್ಲೆ, ಮಂಜುನಾಥ್, ಕೋಶಾಧ್ಯಕ್ಷ ನಾರಾಯಣಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಇದೇ ತಿಂಗಳ 31ರೊಳಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿವಾರ್ಯವಾಗಿ ಒಂದನೇ ತರಗತಿಯಿಂದ 10ನೇ ತರಗತಿ ಹಾಗೂ ಪಿಯುಸಿ ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here