ಮಹಾದೇವ ದೇವಸ್ಥಾನಕ್ಕೆ ಅನುದಾನ ಬಿಡುಗಡೆ

0
17
loading...

ಚಿಕ್ಕೌಡಿ 22: ರಾಜ್ಯ ಸರಕಾರದಿಂದ ಪಟ್ಣಣದ ಶ್ರೀ ಮಹಾದೇವ ದೇವಸ್ಥಾನಕ್ಕೆ 15 ಲಕ್ಷ ರೂಗಳು ಮಂಜೂರಾತಿ ದೊರೆತಿದ್ದು, ದೇವಸ್ಥಾನದ ಕಮೀಟಿಯು ಈ ಹಣವನ್ನು ದೇವಸ್ಥಾನದ ಅಭಿವೃದ್ದಿಗಾಗಿ ಖರ್ಚು ಮಾಡಬೇಕು ಎಂದು ಶಾಸಕ ಪ್ರಕಾಶ ಹುಕ್ಕೇರಿ ಹೇಳಿದರು.

ಇಲ್ಲಿನ ಹೊಸ ಪೇಠ ಗಲ್ಲಿಯಲ್ಲಿರುವ ಶ್ರೀ ಮಹಾದೇವ ಮಂದಿರಕ್ಕೆ ರಾಜ್ಯ ಸರಕಾರದಿಂದ ಮಂಜೂರಾದ 15 ಲಕ್ಷ ರೂಗಳ ಚೆಕ್ನ್ನು ದೇವಸ್ಥಾನ ಕಮೀಟಿಗೆ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಚಿಕ್ಕೌಡಿ-ಸದಲಗಾ ಮತಕ್ಷೇತ್ರದಲ್ಲಿ ಬರುವ ದೇವಸ್ಥಾನಗಳ ಅಭಿವೃದ್ದಿಗಾಗಿ ರಾಜ್ಯ ಸರಕಾರ ಅನುದಾನ ನೀಡಿದೆ ಎಂದ ಅವರು, ಚಿಕ್ಕೌಡಿ ಪರಟಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ನಿರ್ಮಿಸುತ್ತಿರುವ ಯಾತ್ರಿ ನಿವಾಸ ಬರುವ ಆರು ತಿಂಗಳಲ್ಲಿ ಮುಕ್ತಾಯವಾಗಲಿದ್ದು. ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಕಮೀಟಿ ಸದಸ್ಯರಾದ ರವಿ ಹಂಪನ್ನವರ, ಬಸವರಾಜ ಮುಸಂಡಿ, ಶಿವಾನಂದ ಮಿರ್ಜೆ, ರಾಜು ಗುಲಂಗಜಿ, ರಾಜು ಮಿರ್ಜಿ, ಶೇಖರ ಮುಂಡೆ, ಬಸವರಾಜ ಖಿಲಾರೆ, ಸಿದ್ದೇಶ್ವರ ಪಾಟೀಲ, ದೀಲಿಪ ಕೊಳೆಕರ, ಸಂತೋಷ ಮುಸಂಡಿ, ಮುದ್ದಸರ ಜಮಾದರ ಸೇರಿದಂತೆ ಮುಂತಾದವರು ಉಪಸ್ಥಿತ           ರಿದ್ದರು.

 

loading...

LEAVE A REPLY

Please enter your comment!
Please enter your name here