ಮುಂದಿನ ಚುನಾವಣೆಯಲ್ಲಿ ಎಚ್ಡಿ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ

0
16
loading...

 

ಹಳಿಯಾಳ,ಮ.21: ಪ್ರಸಕ್ತ ಸಾಲಿನಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅತಿ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಬರಲಿದ್ದು, ಇಂತಹ ಯೋಜನೆಗಳನ್ನು ಮತ್ತು ರೈತ ಪರ ಯೋಜನೆಗಳನ್ನು ಸಹ ಜಾರಿಗೆ ತರಲು ಬದ್ಧವಿದೆ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾಳಿನದಿ ನೀರಿನ ಯೋಜನೆ ಜಾರಿಯಾಗುವುದಿಲ್ಲ ಎಂದು ಸಭೆ-ಸಮಾರಂಭಗಳಲ್ಲಿ ಹೇಳುತ್ತಾ ತಪ್ಪು ಕಲ್ಪನೆ ನೀಡುತ್ತಿದ್ದಾರೆ. ನಾನು ಶಾಸಕನಾಗಿ ಮಾಡಿದ ಅನೇಕ ಕಾರ್ಯಗಳನ್ನು ನಾನೇ ಮಾಡಿದ್ದೇನೆ ಎಂದು ಬೆನ್ನುತಟ್ಟಿಕೊಳ್ಳುತ್ತಿರುವುದು ಖೇದದ ವಿಷಯ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು.

ಮತದಾರರು 25 ವರ್ಷಗಳಿಂದ ಹಿಂದಿನ ಶಾಸಕರ, ಸಚಿವರ ಆಡಳಿತಾವಧಿಯಲ್ಲಿ ಅನುಭವಿಸಿದ ನೋವು ಇನ್ನು ಮರೆತಿಲ್ಲಾ. ಮುಂದಿನ ದಿನಗಳಲ್ಲಿ ಮತದಾರರು ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಿದರೆ ರೈತರ ಅಭಿವೃದ್ದಿ ಮತ್ತು ಇತರೆ ಅಭಿವೃದ್ದಿಯನ್ನು ಸಹ ಮಾಡುತ್ತೇವೆ ಎಂದರು.

ಸಂಸದರ ನಿಧಿ ಸದ್ಬಳಕೆಯಿಲ್ಲ: ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕ್ಷೇತ್ರದ ಅಭಿವೃದ್ದಿಗೆ 6 ಕೋಟಿ ಹಣ ಸಂಸದರ ನಿಧಿಯಿಂದ ಪಡೆದಿದ್ದು, 25 ಲಕ್ಷ ರೂ. ವಿವಿಧ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಹಣ ನೀಡಿದ್ದೇವೆಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಯಾವ ಕಾಮಗಾರಿಗಳು ಆರಂಭವಾಗಿವೆ ಎಂಬುದು ಕ್ಷೇತ್ರದ ಜನತೆಗೆ ತಿಳಿದಿಲ್ಲ. ಇದರಿಂದ ಸಂಸದರ ನಿಧಿ ಸದ್ಬಳಕೆಯಾಗದೇ ಮರಳುತ್ತಿದೆ. ಇಂತಹ ಪೊಳ್ಳು ಹೇಳಿಕೆ ನೀಡುತ್ತಿರುವ ದೇಶಪಾಂಡೆಯವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ದಿ ಏನು ಎಂಬುದು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಚಟಾಕಿ ಹಾರಿಸಿದರು. ನಮ್ಮ ಶಾಸಕರ ನಿಧಿಯಿಂದ ಅಭಿವೃದ್ದಿಗೆ ಬಂದ ಹಣ ಸರಿಯಾಗಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಅಂತಹದರಲ್ಲಿ ಬೇರೆ ಸಂಸದರ ನಿಧಿ ಹಣವನ್ನು ಸದ್ಬಳಕೆ ಮಾಡಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಕ್ಷೇತ್ರದ ಅತಿಕ್ರಮಣ ಸಕ್ರಮಕ್ಕೆ ಕುಣಬಿ ಹಾಗೂ ಗೌಳಿ ಜನಾಂಗವನ್ನು ಎಸ್ಟಿಗೆ ಸೇರಿಸಲು ಕಾರ್ಯ ಮಾಡದ ಆರ್.ವಿ. ದೇಶಪಾಂಡೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಆ ಜನರಿಗೆ ನ್ಯಾಯ ಒದಗಿಸಬೇಕಾಗಿತ್ತು ಅದನ್ನು ಬಿಟ್ಟು ಈ ಹಿಂದೆ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ನೆರೆಹಾವಳಿಗೆ ಜನ ನೀಡಿದ ಒಂದೂವರೆ ಕೋಟಿ ಹಣ ಅವ್ಯವಹಾರ ಮಾಡಿ ಮೋಸ ವೆಸಗಿ ರಾಜ್ಯದ ಜನತೆಗೆ ಅನ್ಯಾಯ ಮಾಡಿದ ಕಾರಣ ರಾಜ್ಯದ ಕಾಂಗ್ರೆಸ್ ಮುಖಂಡರು ಆರ್.ವಿ. ದೇಶಪಾಂಡೆಯವರಿಗೆ ಯಾವುದೇ ಹುದ್ದೆ ನೀಡದೇ ಕೇವಲ ಅವರ ಕ್ಷೇತ್ರದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ತಿರುಗುವಂತೆ ಮಾಡಿದ್ದಾರೆ ಎಂದರು.

ದಾಂಡೇಲಿಯಲ್ಲಿ ಸರ್ಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಸಚಿವ ಸಿ.ಟಿ. ರವಿ ಜೊತೆ ಚರ್ಚೆ ನಡೆಸಿ ಕಾಲೇಜ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಈ ವಿಷಯ ತಿಳಿದ ಆರ್.ವಿ. ದೇಶಪಾಂಡೆ ಕಾಲೇಜು ಆರಂಭಿಸಲು ನಾನೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದ ಅವರು ಮುಂದಿನ ಮುಖ್ಯಮಂತ್ರಿ ಆರ್.ವಿ. ದೇಶಪಾಂಡೆ ಎಂದು ಕಾಂಗ್ರೆಸ್ ಪಕ್ಷದ ರಾಷಾ್ತ್ರಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜ್ಯಾಧ್ಯಕ್ಷ ಜಿ. ಪರಮೇಶ್ವರ ಘೋಷಿಸಿದರೆ ಎಲ್ಲ ಪಕ್ಷದ ಮುಖಂಡರುಗಳು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಂಡು ದೇಶಪಾಂಡೆಯವರ ಆಯ್ಕೆಗೆ ಯೋಚಿಸುತ್ತೇವೆ ಎಂದು ಶಾಸಕ ಸುನೀಲ ಹೆಗಡೆ ನುಡಿದರು.

 

 

loading...

LEAVE A REPLY

Please enter your comment!
Please enter your name here