ಯುವಕನಿಗೆ ಆರ್ಥಿಕ ನೆರವು

0
15
loading...

ಕಾರಟಗಿ: ಪಟ್ಟಣದ 13ನೇ ವಾರ್ಡಿನ ನಿವಾಸಿಯಾದ ವೆಂಕಟೇಶ ತಂ.ಸಂಗಪ್ಪ ಕುರುಬರ ಎಂಬ ಯುವಕನಿಗೆ ಸ್ಥಳೀಯ ಆಂಜನೇಯ ಯುವಕ ಸಂಘ ಹಾಗೂ ಕೆಜೆಪಿ ಮುಖಂಡ ಬಸವರಾಜ ಧಡೇಸೂಗುರು ಆರ್ಥಿಕ ನೆರವು ನೀಡಿದರು. ಯುವಕ ವೆಂಕಟೇಶ ಇತನು ಸುಮಾರು 3 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಬಡತನದಲ್ಲಿ ನೂಕುತ್ತಿದ್ದ ಜೀವನಕ್ಕೆ ಆಸರೆಯಂತಿದ್ದ ವೆಂಕಟೇಶನು ಇಂದು ಕಾಯಿಲೆಗೆ ಬಿದ್ದಿದ್ದು ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು.

ಇಂತಹ ಸಂದರ್ಭದಲ್ಲಿ ವಾರ್ಡಿನ ಯುವ ಸಮೂಹ ಹಾಗೂ ಗೆಳೆಯರ ಬಳಗವೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ಹಣ ಸಂಗ್ರಹಿಸಿದರು. ಇದರೊಂದಿಗೆ ಕೆಜೆಪಿ ಮುಖಂಡರಾದ ಬಸವರಾಜ ದಡೇಸೂಗುರು ಇವರು ಸಹ ಇದೇ ಮಾರ್ಚ 3 ರ ರವಿವಾರದಂದು ಸಂಘದ ಪದಾಧಿಕಾರಿಗಳು ಇತರರು ವೆಂಕಟೇಶ ಇತನ ಮನೆಗೆ ತೆರಳಿ ಮುಂದಿನ ಶಸ್ತ್ತ್ರ ಚಿಕಿತ್ಸೆಗೆ ಅನುಕೂಲವಾಗಲು ಅವಶ್ಯವಾದ ಆರ್ಥಿಕ ನೆರವು ನೀಡುವುದರ ಜೊತೆಗೆ ವೆಂಕಟೇಶನ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಂಜುನಾಥ ಮಸ್ಕಿ, ಮಹೇಶ, ಆಂಜನೇಯ, ಶರಣಪ್ಪ ದೇವರಮನಿ, ಶ್ರೀಆಂಜನೇಯ ಯುವಕ ಸಂಘದ ಮಂಜುನಾಥ ಗಣಾಚಾರಿ, ನಾಗರಾಜ ರೌಡಕುಂದಾ, ಅಯ್ಯನಗೌಡ, ಶಿವಕುಮಾರ ಕನಕರೆಡ್ಡಿ, ಶರಣಪ್ಪ ಪೂಜಾರಿ, ತಿಪ್ಪಯ್ಯ ಸ್ವಾಮಿ, ಮಹಾಂತೇಶ, ವೀರೇಶ ಪಲ್ಲೇದ, ವೆಂಕಟೇಶ,ಸಂತೋಷ ಇನ್ನೀತರ  ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here