ಕುರುಬರಿಗೆ ಟಿಕೆಟ್ ಕೊಡಿ ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕಾರ

0
24
loading...

ಗೋಕಾಕ 12 : ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜಕ್ಕೆ ಟಿಕೇಟ್ ಸಿಗದಿದ್ದರೆ ಜಿಲ್ಲೆಯ ಕುರುಬ ಸಮಾಜದವು ಚುನಾವಣೆಯನ್ನು ಬಹಿಷ್ಕಾರ ಹಾಕುವದಾಗಿ ಕಳೆದ ದಿ. 4 ರಂದು ಪತ್ರಿಕಾ ಹೇಳಿಕೆಯ ಮೂಲಕ ಕುರಬ ಸಮಾಜದ ಗುತ್ತಿಗೆ ಪಡೆದವರಂತೆ ಮಾತನಾಡುತ್ತಿರುವ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಅವರ ದ್ವಿಮುಖ ನೀತಿಯನ್ನು ಕೌಜಲಗಿ ಗ್ರಾಮದ ಕುರುಬ ಸಮಾಜದ ಯುವಧುರೀಣ ಮಹಾಲಿಂಗಪ್ಪ ಬ ಹಳ್ಳೂರ ಖಂಡಿಸಿದ್ದಾರೆ.

ಡಾ. ಸಣ್ಣಕ್ಕಿ ಕಾಂಗ್ರೆಸ್, ಬಿಜೆಪಿ, ಕೆಜಿಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಕುರುಬ ಸಮಾಜಕ್ಕೆ ಟಿಕೆಟ್ ನೀಡದಿದ್ದರೇ ಚುನಾವಣೆ ಬಹಿಷ್ಕಾರ ಹಾಕುವದಾಗಿ ಒಂದು ಕಡೆ ಹೇಳುತ್ತಿದ್ದಾರೆ, ಆದರೆ ಮತ್ತೊಂದು ಕಡೆ ಬೇರೆ ರೀತಿ ಹೇಳಿಕೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜದ ಮುಖಂಡರಾದ ವಿವೇಕರಾವ ಪಾಟೀಲ್ ಹಾಗೂ ಅರವಿಂದ ದಳವಾಯಿ ಅವರು ಸ್ಪರ್ಧಿಸಿದಾಗ ಡಾ. ಸಣ್ಣಕ್ಕಿ ಅವರು ಕುರುಬ ಸಮಾಜದ ಮತದಾರರನ್ನು ಒತ್ತಾಯಪೂರ್ವಕವಾಗಿ ಕೌಜಲಗಿ ಗ್ರಾಮದ ಶ್ರೀ ಉದ್ದಮ್ಮ ದೇವಸ್ಥಾನ ಹಾಗೂ ವಿಠ್ಠಲ ಬೀರದೇವರ ದೇವಸ್ಥಾನ ಮತ್ತು ಉದಗಟ್ಟಿ ಗ್ರಾಮದ ಉದ್ದಮ್ಮಾ ದೇವಸ್ಥಾನಗಳಲ್ಲಿ ಕರೆಯಿಸಿ ಭಂಡಾರ ಮುಟ್ಟಿಸಿ ಪ್ರಮಾಣ ಮಾಡಿಸಿ ಮತ ಹಾಕದಂತೆ ಮನವಿ ಮಾಡಿಕೊಂಡಿರುವ ಅವರು ಸಮಾಜದವರಲ್ಲದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮತ ನೀಡುವಂತೆ ಒತ್ತಾಯ ಪಡಿಸಿದ್ದಾರೆ ಎಂದು ಹಳ್ಳೂರ ಅರೋಪಿಸಿದ್ದಾರೆ.

ರಾಯಭಾಗದ ದಿ. ಪ್ರತಿಭಾಅಕ್ಕಾ ಪಾಟೀಲ್ ಅವರು ಕುರುಬ ಸಮಾಜವು ರಾಜಕೀಯವಾಗಿ ಬೆಳೆಯಲೆಂದು ಕಳೆದ 15 ವರ್ಷಗಳಹಿಂದೆ ಡಾ. ಸಣ್ಣಕ್ಕಿ ಅವರನ್ನು ಗುರ್ತಿಸಿ ಕೌಜಲಗಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬೆಂಬಲಿಸಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಆದರೆ ಡಾ. ಸಣ್ಣಕ್ಕಿ ಅವರು ಸಮಾಜ ಹಿತ ಕಾಪಾಡುವ ಬದಲು ಸ್ವಹಿತಕ್ಕಾಗಿ ಕುರುಬ ಸಮಾಜವನ್ನು ಬೇರೆಯವರಿಗಾಗಿ ಬಲಿಕೊಡುತ್ತಾ ಬಂದಿದ್ದಾರೆ ಎಂದು ಮಹಾಲಿಂಗಪ್ಪಾ ದೂರಿದ್ದಾರೆ.

ಇಂತಹ ಸ್ವಯಂ ಘೋಷಿತ ಕುರುಬ ಸಮಾಜದ ಮುಖಂಡನನ್ನು ತೀರಸ್ಕರಿಸಿ ಸಮಾಜದ ಹಿತ ಕಾಪಾಡುವ ಸಮಾಜದ ಮುಖಂಡನನ್ನು ಬೆಂಬಲಿಸುವಂತೆ ಕುರುಬ ಸಮಾಜದ ಮತದಾರರಲ್ಲಿ ಹಳ್ಳೂರ ವಿನಂತಿಸಿಕೊಂಡಿದ್ದು, ಇನ್ನೂ ಮುಂದಾದರು ಡಾ. ಸಣ್ಣಕ್ಕಿ ಅವರ ಸಮಾಜವನ್ನು ಬೆಂಬಲಿಸುವಂತೆ ಸಮಾಜದ ಪರವಾಗಿ ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here